ಕಷ್ಟ ಜೊತೆಯಾದಾಗಲೇ ಕಳಕಳಿಯೂ ಕೈ ಹಿಡಿಯುತ್ತೆ…
Team Udayavani, May 11, 2020, 4:35 PM IST
ಸಾಂದರ್ಭಿಕ ಚಿತ್ರ
ರಾತ್ರಿ ಮಲಗಲು ಮತ್ತು ಬೆಳಗಿನ ವೇಳೆಯಲ್ಲಷ್ಟೇ ಮನೆಯಲ್ಲಿದ್ದು, ಉಳಿದ ಸಮಯವೆಲ್ಲಾ ಹೆಚ್ಚಾಗಿ ಹೊರ ಗಡೆಯೇ ಕೆಲಸ ಮಾಡುತ್ತಿದ್ದವ ನಾನು. ಹಾಗಾಗಿ, ಇದ್ದಕ್ಕಿದ್ದಂತೆ ಲಾಕ್ ಡೌನ್ ಘೋಷಣೆಯಾಗಿ, ಇವತ್ತಿಂದ ಮನೆಯಲ್ಲೇ ಇರ್ಬೇಕು ಅಂದಾಗ, ಅಂಥದೊಂದು ಪರಿಸ್ಥಿತಿಗೆ ಹೊಂದಿಕೊಳ್ಳೋಕೆ ಸ್ವಲ್ಪ ಕಷ್ಟ ಆಯ್ತು. ಈ ಸಂದರ್ಭದಲ್ಲೇ – ಮನೆಯಲ್ಲಿರೋ ಲೈಬ್ರರಿನ ಕ್ಲೀನ್ ಮಾಡಿದ್ರೆ ಹೇಗೆ? ಅನ್ನಿಸ್ತು. ಓದಲಿಕ್ಕೆ ಬೇಕಾದಷ್ಟು ಪುಸ್ತಕಗಳು ಸಿಕ್ಕಿದ್ದೇ ಆಗ. ಲಾಕ್ ಡೌನ್ ನ ಮೊದಲ ಪೀರಿಯಡ್ ಕಳೆಯೋಕೆ, ಇದರಿಂದ ಅನುಕೂಲ ಆಯ್ತು. ಮನೆಯವರ ಜೊತೆ ಕೆಲಸಗಳನ್ನು ಹಂಚಿಕೊಳ್ಳುವುದು, ಪುಸ್ತಕ, ಸಿನೆಮಾ ಹಾಗೂ ಕಥೆಗಳ ಕುರಿತು ಚರ್ಚೆ/ ಸಂವಾದ ಮಾಡಲು ಸಾಧ್ಯವಾಗಿದ್ದೂ ಈ ಸಮಯದಲ್ಲೇ. ರಂಗ ಭೂಮಿಯ ಚಟುವಟಿಕೆಗಳನ್ನು ಯಾವ ರೀತಿಯಲ್ಲಿ ಜೀವಂತವಾಗಿ ಇಡಬಹುದು ಎಂಬ ಯೋಚನೆ ಚರ್ಚೆಗೆ ಬಂದ ಸಮಯದಲ್ಲೇ, ವಿಶ್ವ ರಂಗಭೂಮಿ ದಿನ ಕೂಡ ಬಂತು. ಆಗ, ಸಾಮಾಜಿಕ ಅಂತರ ಕಾಯ್ದುಕೊಂಡೇ, ನಾವು ಇಡೀ ಕುಟುಂಬದವರು- ಎನಗೂ ಆಣೆಯೋ ರಂಗ, ನಿನಗೂ ಆಣೆ… ಎಂಬ ಬಿ. ವಿ. ಕಾರಂತರ ಸಂಗೀತವಿದ್ದ ಹಾಡು ಹಾಡಿದ್ವಿ. ಅದು ತುಂಬಾ ವೈರಲ್ ಆಯ್ತು. ಎರಡನೇ ಹಂತದ ಲಾಕ್ ಡೌನ್ ಶುರು ಆಗುವ ವೇಳೆಗೆ, ಅಂಥ ಸಂದರ್ಭವನ್ನು ಹೇಗೆ ಎದುರಿಸಬೇಕು, ಬಿಡುವಿನ ಸಮಯವನ್ನು ಹೇಗೆ ಕಳೆಯಬೇಕು ಅಂತ ನಮಗೆ ಕರೆಕ್ಟ್ ಐಡಿಯಾ ಇತ್ತು. ಮೊದಲೇ ಪ್ಲಾನ್ ಮಾಡಿ, “ಹಯವದನ’ ನಾಟಕದ ಸಣ್ಣ ತುಣುಕನ್ನು ಆನ್ ಲೈನ್ ವೆಬ್‌ನಲ್ಲಿ ತಂದ್ವಿ. ನನ್ನ ಮಗ, ಅನನ್ಯಾ ಭಟ್, ವಾಸುಕಿ ವೈಭವ್ ಎಲ್ಲರೂ ಸೇರಿ ಹಾಡಿದಾಗ ಅದು ಕೂಡ ವೈರಲ್ ಆಯ್ತು.
ಜೊತೆಗೆ, ಒಂದು ಹೊಸ ಸಾಧ್ಯತೆಯನ್ನು ತೋರಿಸಿಕೊಡ್ತು. ಕಲಾವಿದರೆಲ್ಲಾ ಶ್ರೀಮಂತರಲ್ಲ. ಈ ಲಾಕ್ ಡೌನ್ ಸಮಯದಲ್ಲಿ, ಅವರಿಗೆ ತುಂಬಾ ಕಷ್ಟ ಆಗಿರಬಹುದು ಅನ್ನಿಸಿದಾಗ, ”ರಂಗಭೂಮಿ ಹಿತೈಷಿ ಬಳಗ” ಅಂತ ಮಾಡಿಕೊಂಡು, ಅದರ ಮೂಲಕ ಕಲಾವಿದರ ವಿಳಾಸ, ಫೋನ್ ನಂಬರ್ ಸಂಗ್ರಹಿಸಿ, ಅವರನ್ನು ಸಂಪರ್ಕಿಸಿ, ಏನೇನು ಸಹಾಯ ಬೇಕು ಅಂತೆಲ್ಲಾ ಕೇಳಿದ್ದಾಯ್ತು. ನಂತರ ಒಂದು ಪಟ್ಟಿ ತಯಾರಿಸಿ, ಇವರಿಗೆಲ್ಲಾ ಸಹಾಯ ಮಾಡಿ ಅಂತ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ವಿ. ಸಿಎಂ, ತಕ್ಷಣ ಒಪ್ಪಿಕೊಂಡು, ಕಲಾವಿದರಿಗೆ ಸಹಾಯ ಮಾಡುವ ಪ್ಯಾಕೇಜ್ ಘೋಷಿಸಿದರು. ಅದರಿಂದ ಬಹಳ ಜನರಿಗೆ ಅನುಕೂಲ ಆಯ್ತು. ಈಗ, ಒಟ್ಟು ಪರಿಸ್ಥಿತಿಯ ಅರ್ಥ ಮತ್ತು ಅದನ್ನು ಎದುರಿಸುವ ರೀತಿ-ಎರಡೂ ಗೊತ್ತಾಗಿದೆ. ನಾನೀಗ ಆಫೀಸ್‌ಗೆ ಹೋಗ್ತಾ ಇದ್ದೇನೆ. ದೈಹಿಕ ಅಂತರ ಕಾಯ್ದುಕೊಂಡು ಬದುಕುವುದು ಅಭ್ಯಾಸ ಆಗಿದೆ. ಸಂಕಷ್ಟವೊಂದು ಜೊತೆಯಾದ ಸಂದರ್ಭದಲ್ಲಿ ಜನರ ಮಾನವೀಯ ಕಳಕಳಿ ಕೂಡ ಅನುಮಾನಕ್ಕೆ ಎಡೆಯಿಲ್ಲದಂತೆ ವ್ಯಕ್ತವಾಗುತ್ತದೆ ಅನ್ನುವುದು ಈ ಕೋವಿಡ್ ಕಾಲದಲ್ಲಿ ಮತ್ತೆ ಸಾಬೀತಾಗಿದೆ.
– ಟಿ. ಎಸ್. ನಾಗಾಭರಣ, ಸಿನಿಮಾ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.