ಪ್ರತೀ ಸ್ನೇಹ ಪ್ರೀತಿಯಾಗಬಹುದು, ಆದರೆ ಪ್ರತಿ ಪ್ರೀತಿ ಸ್ನೇಹವಾಗದು!
ಆ ಸಂಜೆ, ಕಡಲಿಗಿಳಿದ ಸೂರ್ಯನಿಗೊಲಿದ ಪ್ರೇಮ ಅವಳಿಗೊಲಿಯಲಿಲ್ಲ
Team Udayavani, Aug 6, 2023, 3:48 PM IST
ಹೀಗೆ ಸಿಕ್ಕು ಹಾಗೆ ಜಾರಿ ಹೋಗುವ ಅದೆಷ್ಟೋ ಭೇಟಿಗಳ ನಡುವೆ ನಮ್ಮ ಮನಸ್ಸಿಗೆ ಒಲಿದು, ಇಳಿದು ಮನಸೆಂಬ ಪುಸ್ತಕದ ಸ್ನೇಹದ ಪುಟದಲ್ಲಿ ದಾಖಲಾಗುವುದು ಕೆಲವೊಂದಿಷ್ಟೇ ಪರಿಚಯಗಳು. ಎಲ್ಲ ಪರಿಚಯಗಳು ಸ್ನೇಹವಾಗಬೇಕೆಂದೇನಿಲ್ಲ. ಅಂತೆಯೇ ಎಲ್ಲ ಸ್ನೇಹಗಳು ಪ್ರೀತಿಯಾಗಬೇಕಂತಲೂ ಇಲ್ಲ. ಆದರೂ ಕೆಲವೊಮ್ಮೆ ಮುಂಜಾನೆ ಬಾನಿನಿಂದ ಸೋಸಿ ಬಂದ ಸೂರ್ಯನ ಕಿರಣಕ್ಕೆ ಮೊಗ್ಗೊಡೆದು ಅರಳಿದ ಕಮಲದಂತೆ ಇವೆರಡೂ ಸಂಭವಿಸುತ್ತದೆ.
ಸ್ನೇಹಿತನ ಕೈಹಿಡಿದು ನಡೆಯುವ ಅವಳಿಗೆ, ಪ್ರೀತಿ ಕಣ್ಣಲ್ಲಿದ್ದರೂ ಮಾತಿಗಿಳಿಸದ ಅಸಹಾಯಕತೆ ಕಾಡಿತ್ತು. ಅವಳ ಆ ಅಸಹಾಯಕತೆಗೆ ಇವಳು ನೊಂದಿದ್ದಾಗ ಅವನು ಸ್ನೇಹದ ಹೆಸರಿನಲ್ಲಿ ನೀಡಿದ್ದ ಆ ಸಹಾಯದ ಕಥೆ ಕಾರಣವಾಗಿತ್ತು. ಅವನೊಂದಿಗಿನ ಪ್ರತಿ ಭೇಟಿಗೂ ಅರ್ಥ ಹುಡುಕುವವಳು ಅವಳು. ಇನ್ನು ಅವನಂತೂ, ಅಪರಾತ್ರಿ ತನ್ನ ತಂದೆ ಯಾರದೋ ಕೈ ಹಿಡಿದು ನಡೆದರೆನ್ನುವ ಸುದ್ದಿ ಕೇಳಿದ ತಾಯಿಯ ಒಬ್ಬಂಟಿತನದ ಹಣೆಯನ್ನ ತನ್ನೆದೆಗವಚಿ ಸಂತೈಸಿದವನು. ನೊಂದ ಹೆಣ್ಣಿನ ಮನಸನ್ನು ಸಂತೈಸುವ ಪರಿಯನ್ನು ಅವನಿಗೆ ಹೇಳಿಕೊಡಬೇಕಾಗಿರಲಿಲ್ಲ.
ಹೀಗೆ ಸಮುದ್ರದಡದಲ್ಲಿ ಒಂದು ಸಂಜೆ ಅವರಿಬ್ಬರೂ ಹೆಜ್ಜೆ ಬೆರೆಸಿ ನಡೆಯುತ್ತಿರುವಾಗ ಅವನಮ್ಮ ಕಟ್ಟಿ ಅವನು ತಂದು ಕೊಟ್ಟಿದ್ದ ದುಂಡು ಮಲ್ಲಿಗೆ ಮುಡಿದುಕೊಂಡ ಅವಳು, ಅದನ್ನು ಪದೆ ಪದೇ ಮುಟ್ಟಿ ನೋಡಿಕೊಳ್ಳುತ್ತಿದ್ದಳು. ಅದೇನೋ ಕಾಣದ ವಿನೋದ ಅವಳಿಗೆ. ಅಲೆಗಳಿಂದ ಬೀಸಿದ ಗಾಳಿ, ಅವಳು ಮುಡಿದ ಮಲ್ಲಿಗೆಯ ಗಂಧವನ್ನು ಅವನ ಮುಖದತ್ತ ಹೊತ್ತು ತರುತ್ತಿತ್ತು. ಅದಕ್ಕೆ ಪ್ರತಿಯಾಗಿ ಅವನೂ ನಸುನಗುತ್ತಿದ್ದ. ಅವನ ಆ ನಗುವಿಗೂ ಅವಳು ಒಂದು ಅರ್ಥ ಕಲ್ಪಿಸಿಕೊಳ್ಳುತ್ತಿದ್ದಳು.
ನಾನಾ ಕಾರಣಗಳಿಂದ ಒಂದು ಸಂವತ್ಸರ ಭೇಟಿಯಾಗದ ಅವರು. ಭೇಟಿಯಾಗಬೇಕೆಂದುಕೊಂಡದ್ದು ಆ ಒಂದು ಮಳೆ ನಿಂತ ಸಂಜೆ. ಕಲ್ಲು ಬೆಂಚಿಗೊರಗಿ ಕೂತಿದ್ದ ಅವಳು, ಅವನು ಬಂದೊಡನೆ ತಬ್ಬಿ ಪ್ರೇಮ ನಿವೇದಿಸಿಯೇ ಬಿಟ್ಟಳು. ಏನೂ ಸ್ಪಂದಿಸದ ಅವನು ಕಣ್ಣು ಮುಚ್ಚಿದಾಗ. ಅವನ ತಾಯಿಯ ನೊಂದ ದನಿ ಅವಳ ನೀವೇದನಾ ದನಿಯನ್ನೂ ಮೀರಿ ಅವನ ಕಿವಿಯನ್ನಲಂಕರಿಸಿತ್ತು. ಆ ಸಂಜೆ, ಕಡಲಿಗಿಳಿದ ಸೂರ್ಯನಿಗೊಲಿದ ಪ್ರೇಮ ಅವಳಿಗೊಲಿಯಲಿಲ್ಲ. ಅದೇ ಅವರಿಬ್ಬರ ಕಾತುರದ ಕೊನೆಯ ಭೇಟಿ
ನಂತರ ಅವಳದೆಷ್ಟು ಬಾರಿ ಸ್ನೇಹಕ್ಕೆ ಕೈಚಾಚಿದರೂ. ಅವನು ಒಲ್ಲೆಯೆನ್ನದೆ ಒಟ್ಟಿಗಿದ್ದರೂ ಮುಂಚಿದ್ದ ಸ್ನೇಹದ ಸವಿ ಅವಳಿಗೆ ಸಿಗಲಿಲ್ಲ. ಅವನಿಗೂ ಸಹ. ಹೀಗೆ ಯಾವುದೋ ಭೇಟಿಗಳಿಗೆ ನಮ್ಮದೇ ಅರ್ಥವನ್ನು ನೀಡುವ ಗೋಜಿಗೆ ಹೋಗುವ ನಾವು ಅವರ ಜತೆ ನಮ್ಮನ್ನೂ ಕಳೆದುಕೊಂಡು ಬಿಡುತ್ತೇವೆ. ಸ್ನೇಹಕ್ಕೆ ಪ್ರೀತಿಯ ಹೆಸರನ್ನು ನೀವು ಕೊಡಬೇಡಿ. ಸ್ನೇಹದ ಪರಿ ಯನ್ನು ಮೀರಿದರೆ ಅದು ತನ್ನಷ್ಟಕ್ಕೆ ಆಗುತ್ತದೆ.
ದರ್ಶನ್ ಕುಮಾರ್
ದ್ವಿತೀಯ ಬಿ ಎ, ಪತ್ರಿಕೋದ್ಯಮ ವಿದ್ಯಾರ್ಥಿ.
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.