ಎಲ್ಲವೂ ಬಂದದ್ದು ಒಂದೇ ಕಡೆಯಿಂದ!
Team Udayavani, Feb 19, 2021, 6:45 AM IST
ಮುಗ್ಧವಾಗಿರುವುದು ಅಂದರೆ ಮಗು ವಿನಂತಿರುವುದು. ಪುಟ್ಟ ಮಕ್ಕಳು ಎಲ್ಲ ವನ್ನೂ ಬೆರಗಿನಿಂದ, ಬೆಡಗಿನಿಂದ ನೋಡುತ್ತಾರೆ. ಎಲ್ಲದರಲ್ಲೂ ಅವರಿಗೆ ಹೊಸತು ಕಾಣುತ್ತದೆ. ಎಲ್ಲವನ್ನೂ ಅವರು ಸರಳವಾಗಿ ಅರ್ಥ ಮಾಡಿ ಕೊಳ್ಳುತ್ತಾರೆ. ಶಿಶುಗಳು ನಿದ್ದೆಯಲ್ಲಿ ಕಾರಣವಿಲ್ಲದೆ ನಗುವುದನ್ನು ನೀವು ನೋಡಿರಬಹುದು. ಅವರನ್ನು ದೇವರು ನಗಿಸುತ್ತಾನೆ ಎಂಬ ಮಾತು ಹುಟ್ಟಿ ಕೊಂಡಿರುವುದು ಇದೇ ಕಾರಣದಿಂದ.
ಮುಗ್ಧವಾಗಿದ್ದಷ್ಟು ಆತ್ಮ ಸಂಪರ್ಕ, ಹೃದಯ ಸಂಪರ್ಕ, ಪರಮಾತ್ಮ ಸಂಪರ್ಕ ಸುಲಭವಾಗುತ್ತದೆ.
ಇಲ್ಲೊಂದು ಚೆಂದದ ಕಥೆಯಿದೆ, ಝೆನ್.
ಝೆನ್ ಗುರು ಸೊಯೆನ್-ಸಾ ಅವರ ಆಶ್ರಮದಲ್ಲಿದ್ದ ಒಂದು ಮುದ್ದು ಬೆಕ್ಕು ಒಂದು ಸಂಜೆ ಸತ್ತುಹೋಯಿತು. ಸೊಯೆನ್-ಸಾ ಅವರ ಶಿಷ್ಯರಲ್ಲಿ ಒಬ್ಬರ ಪುಟ್ಟ ಮಗಳಿಗೆ ಬೆಕ್ಕಿನ ಸಾವು ಗಾಢವಾಗಿ ಕಾಡಿತು. ಬೆಕ್ಕನ್ನು ಮಣ್ಣು ಮಾಡಿದ ಬಳಿಕ ಆಕೆ ಸೊಯೆನ್-ಸಾ ಅವರ ಬಳಿಗೆ ಬಂದಳು. “ಏನಾದರೂ ಕೇಳುವುದಕ್ಕಿ ದೆಯೇ’ ಎಂದು ಕೇಳಿದರು ಗುರುಗಳು.
“ಅಜ್ಜಾ, ಮುದ್ದು ಬೆಕ್ಕಿಗೆ ಏನಾ ಯಿತು? ಅದು ಹೋದದ್ದೆಲ್ಲಿಗೆ?’
“ನೀನು ಬಂದದ್ದು ಎಲ್ಲಿಂದ?’ ಸೊಯೆನ್-ಸಾ ಪ್ರಶ್ನಿಸಿದರು. “ಅಮ್ಮನ ಹೊಟ್ಟೆಯಿಂದ’ ಆಕೆಯ ಉತ್ತರ. “ಅಮ್ಮ ಬಂದದ್ದು ಎಲ್ಲಿಂದ?’ ಸಾ ಅವರ ಮತ್ತೂಂದು ಪ್ರಶ್ನೆ. ಬಾಲಕಿ ಸುಮ್ಮನಿದ್ದಳು.
ಸೊಯೆನ್-ಸಾ ಹೇಳಿದರು, “ಈ ಜಗತ್ತಿನಲ್ಲಿರುವ ಎಲ್ಲವೂ ಒಂದೇ ಕಡೆ ಯಿಂದ ಬರುತ್ತವೆ. ಅದೊಂದು ಚಾಕ ಲೇಟು ಕಾರ್ಖಾನೆ ಇದ್ದ ಹಾಗೆ. ಹಲವು ವಿಧ, ಆಕಾರ, ಹೆಸರುಗಳ ಚಾಕಲೇಟು ಗಳು ಒಂದೇ ಹಿಟ್ಟಿನಿಂದ ತಯಾರಾಗು ತ್ತವೆ – ಆನೆ, ಕುದುರೆ, ಸಿಂಹ, ಇಲಿ, ಮನುಷ್ಯ… ಹಾಗಾಗಿ ನೀನು ಕಾಣುವ ಪ್ರತಿಯೊಂದು ಕೂಡ ಬಂದದ್ದು ಆ ಒಂದೇ ಕಡೆಯಿಂದ.’
“ಅವುಗಳು ಏನು?’ ಬಾಲಕಿಯ ಪ್ರಶ್ನೆ. “ನಾವು ಅವುಗಳಿಗೆ ಒಂದೊಂದು ಹೆಸರು ಕೊಟ್ಟಿದ್ದೇವೆ. ನಿನ್ನಲ್ಲಿ ಆಲೋಚನೆ ಗಳು ಇರುವಾಗ ಮಾತ್ರ ಅವುಗಳಿಗೆ ಒಂದೊಂದು ಹೆಸರು, ಆಕಾರ. ಆಲೋ ಚನೆ ಇಲ್ಲದೆ ಇದ್ದಾಗ ಎಲ್ಲವೂ ಒಂದೇ. ಅವುಗಳಿಗೆ ಹೆಸರು, ಪದಗಳು ಇಲ್ಲ. ಅದನ್ನು ಕೊಟ್ಟಿರುವುದು ನಾವು. ನಾನು ಸೂರ್ಯ ಎಂದು ಸೂರ್ಯ ಹೇಳು ವುದಿಲ್ಲ. ದನಕ್ಕೆ ತಾನು ದನ ಎಂಬುದು ಗೊತ್ತಿರುವುದಿಲ್ಲ. ಆದರೆ ನಾವು ಇದು ಸೂರ್ಯ, ಇದು ದನ ಎಂದು ಹೇಳು ತ್ತೇವೆ…’ ಸೊಯೆನ್-ಸೊ ವಿವರಿಸುತ್ತ ಹೋದರು. “ಹಾಗಾಗಿ ಯಾರಾದರೂ ನಿನ್ನಲ್ಲಿ ಇದು ಏನು ಎಂದು ಕೇಳಿದರೆ ಏನು ಹೇಳಬೇಕು?’
“ನಾನು ಪದಗಳನ್ನು ಉಪಯೋಗಿಸ ಬಾರದು’ ಬಾಲಕಿ ಮಾರುತ್ತರಿಸಿದಳು. “ಭೇಷ್! ಈಗ ಯಾರಾದರೂ ನಿನ್ನ ಬಳಿ ಬುದ್ಧ ಅಂದರೆ ಏನು ಎಂದು ಕೇಳಿದರೆ ಏನು ಹೇಳುತ್ತೀ?’ ಸೊಯೆನ್ -ಸೊ ಕೇಳಿದರು.
ಬಾಲಕಿ ಸುಮ್ಮನಿ ದ್ದಳು. “ಈಗ ನೀನು ನನ್ನನ್ನು ಪ್ರಶ್ನಿಸು’ ಎಂದರು ಸೊಯೆನ್ -ಹೊ.
“ಬುದ್ಧ ಎಂದರೆ ಏನು?’ ಬಾಲಕಿಯ ಪ್ರಶ್ನೆ. ಸೊಯೆನ್-ಸೊ ಪಾದವನ್ನು ನೆಲಕ್ಕೆ ಬಡಿದರು. ಬಾಲಕಿ ಮುಗ್ಧವಾಗಿ ನಕ್ಕುಬಿಟ್ಟಳು. “ಈಗ ನಾನು ಕೇಳುತ್ತೇನೆ, ಬುದ್ಧ ಏನು?’ ಎಂದರು ಗುರು.
ಬಾಲಕಿ ಪಾದವನ್ನು ನೆಲಕ್ಕೆ ಬಡಿದಳು. “ನಿನ್ನ ಅಮ್ಮ ಏನು?’ ಬಾಲಕಿ ಪಾದವನ್ನು ನೆಲಕ್ಕೆ ಬಡಿದಳು. “ನೀನು ಯಾರು?’ ಬಾಲಕಿ ಪಾದವನ್ನು ನೆಲಕ್ಕೆ ಬಡಿದಳು.
“ಶಾಭಾಸ್! ಜಗತ್ತಿನ ಎಲ್ಲವೂ ಮಾಡ ಲ್ಪಟ್ಟಿರುವುದು ಒಂದರಿಂದಲೇ. ನಾನು, ನೀನು, ಬುದ್ಧ… ಎಲ್ಲವೂ ಅದೇ.
ಬಾಲಕಿಯ ಮುಖದಲ್ಲಿ ಮಂದ ಹಾಸ. “ಇನ್ನೇನಾದರೂ ಪ್ರಶ್ನೆಗಳಿ ವೆಯೇ?’ ಕೇಳಿದರು ಸೊಯೆನ್-ಸೊ.
“ನೀವು ನನ್ನ ಮೂಲ ಪ್ರಶ್ನೆಗೆ ಉತ್ತರಿಸಿಲ್ಲ, ಬೆಕ್ಕು ಎಲ್ಲಿಗೆ ಹೋಯಿತು?’
ಸೊಯೆನ್-ಸೊ ತುಸು ಮುಂದಕ್ಕೆ ಬಾಗಿ ಪುಟ್ಟ ಹುಡುಗಿಯ ಕಣ್ಣುಗಳನ್ನು ಆಳವಾಗಿ ನಿಟ್ಟಿಸಿದರು, “ನೀನು ಈಗಾ ಗಲೇ ಅದನ್ನು ತಿಳಿದು ಕೊಂಡಿರುವೆ…’ ಎಂದರು.
“ಓಹ್…’ ಎಂದ ಪುಟ್ಟಿ ಪಾದವನ್ನು ಜೋರಾಗಿ ನೆಲಕ್ಕೆ ಬಡಿದಳು. ಬಳಿಕ ನಗುತ್ತ ಜಡೆ ಕುಣಿಸುತ್ತ ಹೊರಟು ಹೋದಳು. ಬಾಗಿಲಿನಲ್ಲಿ ತಡೆದು ಹಿಂದಕ್ಕೆ ತಿರುಗಿ ಕೂಗಿದಳು, “ಆದರೆ ನಾನು ಶಾಲೆಯಲ್ಲಿ ಪ್ರಶ್ನೆಗಳಿಗೆ ಹೀಗೆ ಉತ್ತರಿಸುವುದಿಲ್ಲ, ಮಾಮೂಲಿ ಉತ್ತರ ಗಳನ್ನೇ ಕೊಡುತ್ತೇನೆ.’
ಗುರು, ಮಗು ಇಬ್ಬರೂ ನಕ್ಕರು.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.