ಕ್ಷಣ ಮಾತ್ರದಲ್ಲಿ ಎಲ್ಲವೂ ಬದಲಾಗಬಹುದು
Team Udayavani, Apr 5, 2021, 7:05 AM IST
ಅರಸ ಅಥವಾ ಭಿಕ್ಷುಕ – ಇವೆರಡು ಸ್ಥಿತಿಗಳ ನಡುವೆ ಎಲ್ಲರೂ ಇರುತ್ತಾರೆ. ಅರಸ ಸಿಂಹಾಸನದಲ್ಲಿ ವಂದಿಮಾಗಧರ ನಡುವೆ ಇದ್ದರೆ ಯಾಚಕ ರಸ್ತೆಯ ಬದಿಯಲ್ಲಿ ದಾನಿಗಳ ನಡುವೆ ಇರು ತ್ತಾನೆ. ರಾಜ ಅಥವಾ ಭಿಕ್ಷುಕ – ಇವೆರಡೂ ಇತರರು ಗುರುತಿಸುವ ರೀತಿ; ವಾಸ್ತವ ಅದಲ್ಲ.
ಇಲ್ಲೊಂದು ಕಥೆಯಿದೆ.
ಒಬ್ಬ ರಾಜನಿಗೆ ಒಬ್ಬನೇ ಪುತ್ರನಿದ್ದ. ಆತನೇ ಉತ್ತರಾಧಿಕಾರಿ. ತನ್ನ ಸ್ಥಾನ ಕ್ಕೇರುವ ಮುನ್ನ ಆತ ಬುದ್ಧಿವಂತ, ಜ್ಞಾನಿ ಮತ್ತು ವಿವೇಕಿ ಯಾಗಬೇಕು ಎಂದು ರಾಜ ಬಯಸಿದ್ದ. ಇದ ಕ್ಕಾಗಿ ಆತ ಆರಿಸಿಕೊಂಡ ಮಾರ್ಗ ಬಲು ವಿಚಿತ್ರವಾದುದಾಗಿತ್ತು.
ಒಂದು ದಿನ ಆತ ಯುವ ರಾಜನನ್ನು ಕರೆದು ತಾನು ಅವನನ್ನು ತ್ಯಜಿಸಿದ್ದಾಗಿ ಹೇಳಿದ. “ನನ್ನ ಮತ್ತು ನಿನ್ನ ನಡುವೆ ಈ ಕ್ಷಣದಿಂದ ಸಂಬಂಧ ಇಲ್ಲ’ ಎಂದು ಕಠಿನವಾಗಿ ನುಡಿದ.
ಯುವರಾಜನ ಬೆಲೆಬಾಳುವ ಬಟ್ಟೆ ಬರೆಗಳು, ಆಭರಣಗಳು, ಅರಮನೆ – ಎಲ್ಲವನ್ನೂ ಕಿತ್ತುಕೊಳ್ಳಲಾಯಿತು. ಅಂದು ರಾತ್ರಿ ಅವನನ್ನು ರಥದಲ್ಲಿ ಕುಳ್ಳಿರಿಸಿದ ರಾಜಭಟರು ರಾಜಧಾನಿಯಿಂದ ಬಲು ದೂರಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿ ಕೊಂಡೊಯ್ದು ಬಿಟ್ಟುಬಂದರು. ಇನ್ನೆಂದೂ ರಾಜಧಾನಿಗೆ ಕಾಲಿರಿಸಬಾರದು ಎಂದು ಎಚ್ಚರಿಕೆ ನೀಡಿ ಮರಳಿದರು.
ಯುವರಾಜನಿಗೆ ಏನೂ ಅರ್ಥ ವಾಗಲಿಲ್ಲ. ಏಕಾಏಕಿ ತನಗೊದಗಿದ ದುರಾದೃಷ್ಟಕ್ಕೆ ಮರುಗುವುದೊಂದೇ ಆತನ ಎದುರಿಗಿದ್ದ ದಾರಿ. ಆದರೆ ಹೊಟ್ಟೆ ಹಸಿಯದೆ ಇರುವುದಿಲ್ಲ, ಬಾಯಿ ಆರದೆ ಇರುವುದಿಲ್ಲವಲ್ಲ! ಹಾಗಾಗಿ ಸಾಕಷ್ಟು ಸಮಯ ಆತ ದಿನಗೂಲಿ ಮಾಡಿ ಜೀವನ ನಡೆಸಿದ. ಉಪಾಹಾರಗೃಹಗಳಲ್ಲಿ ಪಾತ್ರೆ ತೊಳೆದ, ಕಟ್ಟಿಗೆ ಒಡೆದ, ಯಾರ್ಯಾ ರದೋ ಮನೆಗಳಲ್ಲಿ ಚಾಕರಿ ಮಾಡಿದ.
ಕೊನೆಗೆ ಭಿಕ್ಷಾಟನೆಗೂ ಇಳಿದ. ವರ್ಷ ಗಳು ಕಳೆದುಹೋದವು. ತಾನೊಬ್ಬ ಯುವರಾಜ ಎಂಬ ಸ್ಮರಣೆಯೇ ಅವನ ಮನಸ್ಸಿನಿಂದ ಅಳಿದುಹೋಯಿತು. ಯಾರಿಗೂ ಅವನ ಗುರುತು ಇರಲಿಲ್ಲ. ಬಟ್ಟೆ, ಆಹಾರ, ಸೂರಿಗಾಗಿ ಆತ ಯಾಚಿಸುತ್ತಿದ್ದ. ತಾನೊಬ್ಬ ಯಾಚಕ ಎಂಬುದು ಮನಸ್ಸಿನಲ್ಲಿ ಸ್ಥಿರವಾಯಿತು.
ಎಷ್ಟೋ ವರ್ಷಗಳು ಕಳೆದ ಬಳಿಕ ಒಂದು ದಿನ ಆತ ಒಂದು ಉಪಾಹಾರ ಗೃಹದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತ ಕುಳಿತಿದ್ದ. ಬಿರು ಬೇಸಗೆಯ ಮಧ್ಯಾಹ್ನ ವದು. ಒಂದು ಜತೆ ಪಾದರಕ್ಷೆ ಕೊಳ್ಳಲು ಆತನ ಬಳಿ ಸಾಕಷ್ಟು ದುಡ್ಡಿರಲಿಲ್ಲ. ಹೀಗಾಗಿ ಪಾದರಕ್ಷೆ ಕೊಳ್ಳುವುದಕ್ಕಾಗಿ ಆತ ಹಣ ಬೇಡುತ್ತಿದ್ದ. ಅಷ್ಟ ರಲ್ಲಿ ಒಂದು ಚಿನ್ನದ ರಥ ಬಂದು ಅವನ ಮುಂದೆ ನಿಂತಿತು. ಅದರಿಂದ ಇಳಿದು ಬಂದ ರಾಜ ಭಟರು ಅರಸ ತನ್ನ ಕೊನೆಗಾಲದಲ್ಲಿ ಇದ್ದಾ ನೆಂದೂ, ನಿನ್ನನ್ನು ಸ್ಮರಿಸಿ ಕೊಳ್ಳುತ್ತಿದ್ದಾನೆ ಎಂದೂ ನೀನು ಉತ್ತರಾಧಿಕಾರಿಯಾಬೇಕಂತೆ ಎಂದೂ ಪ್ರಕಟಿಸಿದರು.
ಕ್ಷಣಾರ್ಧದಲ್ಲಿ ಎಲ್ಲವೂ ಬದಲಾ ಯಿತು. ಕಣ್ಣು ಮಿಟುಕಿಸುವಷ್ಟರಲ್ಲಿ ಭಿಕ್ಷುಕನ ಜಾಗದಲ್ಲಿ ಯುವರಾಜ ಅವ ತರಿಸಿದ್ದ. ಬಟ್ಟೆಗಳು ಭಿಕ್ಷುಕನದಾಗಿದ್ದವು, ಆದರೆ ಜನರ ಪರಿಗಣನೆ ಬದಲಾಗಿತ್ತು. ಸುತ್ತ ಸೇರಿದ ಜನರು ನೂತನ ಅರಸನ ಬಗ್ಗೆ ಅಭಿಮಾನದ ಮಾತುಗಳನ್ನಾ ಡುತ್ತಿದ್ದರು. ಕೆಲವು ತಾಸುಗಳ ಹಿಂದೆ ಚಿಲ್ಲರೆ ಕಾಸು ಅವನತ್ತ ಎಸೆಯುತ್ತಿದ್ದವರು ಈಗ ಅವನ ಬಗ್ಗೆ ಅಭಿಮಾನ, ಅವನ ಸ್ನೇಹಕ್ಕಾಗಿ ಕಾತರ ಪ್ರಕಟಿಸುತ್ತಿದ್ದರು.
ಯುವರಾಜ ರಥವನ್ನೇರಿ “ಅರ ಮನೆಗೆ ನಡೆಯಿರಿ’ ಎಂದ. ವೃದ್ಧ ರಾಜ ಪುತ್ರ ನನ್ನು ಎದುರುಗೊಂಡ. “ನನ್ನ ತಂದೆಯೂ ನನಗೆ ಅಧಿಕಾರ ನೀಡು ವುದಕ್ಕೆ ಮುನ್ನ ಹೀಗೆಯೇ ಮಾಡಿದ್ದರು. ನಿನ್ನನ್ನು ನಾನು ಅರಮನೆಯಿಂದ ಹೊರಗೆ ಕಳುಹಿಸುವಾಗ ನಿನಗೆ ನನ್ನ ಬಗ್ಗೆ ಸಿಟ್ಟು ಉಂಟಾಗಿದ್ದಿರಬಹುದು. ಆದರೆ ಅರಸೊತ್ತಿಗೆಯಲ್ಲಿ ಕುಳಿತು ಆಳುವಾತ ನಿಗೆ ಭಿಕ್ಷುಕನ ಜೀವನದ ಬಗ್ಗೆಯೂ ತಿಳಿದಿರಬೇಕು. ಆಗ ಮಾತ್ರ ಆತ ಪ್ರಜೆಗಳ ಬಗ್ಗೆ ಸಹಾನುಭೂತಿ ಇರುವ ರಾಜ ನಾಗಲು ಸಾಧ್ಯ. ಅಷ್ಟು ಮಾತ್ರ ಅಲ್ಲ. ಈ ಕ್ಷಣ ಇರುವ ಅರಸೊತ್ತಿಗೆ ಇನ್ನೊಂದು ಕ್ಷಣದಲ್ಲಿ ಮಾಯವಾಗಬಹುದು, ಅರಸ ಆಳಾಗಬಹುದು, ಭಿಕ್ಷುಕನಾಗಬಹುದು ಎಂಬ ಪರಮ ಸತ್ಯದ ಅರಿವೂ ಇರಬೇಕು’ ಎಂದು ವೃದ್ಧ ರಾಜ ನುಡಿದ.
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.