Exam: ದ್ವಿತೀಯ ಪದವಿಪೂರ್ವಕ್ಕೆ ಮೂರು ಪರೀಕ್ಷೆ:ಪದವಿ ಕಲಿಕೆಗೆ ನೆರವಾಗಿ ಬ್ರಿಜ್ ಕೋರ್ಸ್
Team Udayavani, Oct 7, 2023, 12:55 AM IST
ಮಂಗಳೂರು: ಪಿಯುಸಿಯಲ್ಲಿ ಮೂರು ವಾರ್ಷಿಕ ಪರೀಕ್ಷೆಗಳು ನಿಗದಿ ಯಾದ ಹಿನ್ನೆಲೆಯಲ್ಲಿ ಅದರ ಫಲಿತಾಂಶ ವಿಳಂಬವಾದರೆ ವಿದ್ಯಾರ್ಥಿಗಳ ಪದವಿ ಕಲಿಕೆಗೆ ತೊಡಕಾಗದಂತೆ ನೋಡಿ
ಕೊಳ್ಳಲು “ಬ್ರಿಜ್ ಕೋರ್ಸ್’ ಆರಂ ಭಿಸಲು ಚಿಂತನೆ ನಡೆಸಲಾಗಿದೆ.
ಪಿಯುಸಿಯ “ಪೂರಕ ಪರೀಕ್ಷೆ’ ಬದಲಿಗೆ ವಾರ್ಷಿಕ ಪರೀಕ್ಷೆ 1, 2 ಹಾಗೂ 3 ಎಂದು ಹೆಸರಿಸಿ ವಿದ್ಯಾರ್ಥಿಗಳಿಗೆ ಈ ಬಾರಿಯಿಂದ ಹೊಸ ಅವಕಾಶವನ್ನು ಸರಕಾರ ಕಲ್ಪಿಸಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಪಿಯು ಮೊದಲ ಪರೀಕ್ಷೆ ಮಾ. 1ರಿಂದ 25, 2ನೇ ಪರೀಕ್ಷೆ ಮೇ 15ರಿಂದ ಜೂ. 5 ಹಾಗೂ ಮೂರನೇ ಪರೀಕ್ಷೆ ಜು. 12ರಿಂದ ಜು. 30ರ ವರೆಗೆ ನಡೆಯಲಿದೆ. ಈ ಪೈಕಿ 2 ಹಾಗೂ 3ನೇ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಲಭ್ಯವಾಗುವಷ್ಟರಲ್ಲಿ ಹಲವು ಕಡೆ ಪದವಿ ತರಗತಿಗಳು ಆರಂಭವಾಗಿರುವ ಸಾಧ್ಯತೆ ಇದೆ. ಹೀಗಾಗಿ ಈ ಮಕ್ಕಳಿಗೆ ಪದವಿ ಮೊದಲ ಒಂದೆರಡು ತಿಂಗಳು ಕಲಿಕೆಗೆ ತೊಡಕಾಗಬಹುದು. ಹೀಗಾಗಿ “ಬ್ರಿಜ್ ಕೋರ್ಸ್’ ಮೂಲಕ ಪಠ್ಯ ಸರಿಹೊಂದಿಸಲು ಚಿಂತಿಸಲಾಗುತ್ತಿದೆ.
ಈ ವರ್ಷ ಪದವಿ ಆರಂಭ ತಡವಾಗಿತ್ತು. ಮಂಗಳೂರು ವಿ.ವಿ.ಯಲ್ಲಿ ಅ. 3ರ ವರೆಗೂ ಪದವಿ ಪ್ರವೇಶಕ್ಕೆ ಅವಕಾಶ ಇತ್ತು. ಒಂದು ವೇಳೆ ಪದವಿ ತರಗತಿ ಮೊದಲೇ ಆರಂಭವಾದರೆ ಮಕ್ಕಳಿಗೆ ಬ್ರಿಜ್ ಕೋರ್ಸ್ ಪರಿಕಲ್ಪನೆ ಜಾರಿ ಮಾಡಬೇಕಾಗುತ್ತದೆ ಎಂದು ಮಂಗಳೂರು ವಿ.ವಿ. ಕುಲಪತಿ (ಪ್ರಭಾರ) ಪ್ರೊ| ಜಯರಾಜ್ ಅಮೀನ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಸಿಇಟಿ ಸೀಟು ತೊಡಕು!
ಡೀಮ್ಡ್ ವಿ.ವಿ.ಗಳು, ಸ್ವಾಯತ್ತ ಕಾಲೇಜುಗಳು ಪದವಿ ಅಥವಾ ಇತರ ಕೋರ್ಸ್‌ಗಳ ತರಗತಿಯನ್ನು ಪಿಯು ಮೊದಲ ಪರೀಕ್ಷೆ ಬಂದ ಕೂಡಲೇ ಅದರ ಆಧಾರದಲ್ಲಿ ಆರಂಭಿಸುತ್ತಾರೆ. ಹೀಗಾಗಿ ಬಳಿಕ ನಡೆಯುವ ಪರೀಕ್ಷೆಯ ಫಲಿತಾಂಶ ಬಂದ ಬಳಿಕ ವಿದ್ಯಾರ್ಥಿಗಳ ದಾಖಲಾತಿಗೆ ಅಂತಹ ಶಿಕ್ಷಣ ಸಂಸ್ಥೆಯಲ್ಲಿ ಸೀಟುಗಳ ಕೊರತೆ ಕಾಡಬಹುದು.
ಈ ಮಧ್ಯೆ ಪಿಯು ಮೂರು ಪರೀಕ್ಷೆ ಮುಗಿದ ಬಳಿಕವಷ್ಟೇ ಸಿಇಟಿ ಫಲಿತಾಂಶವೂ ಬರುತ್ತದೆ. ಇದರಿಂದ ಹಲವು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೂ ತೊಡಕಾಗುವ ಸಾಧ್ಯತೆ ಇದೆ.
3 ಮೌಲ್ಯಮಾಪನ-ಅಪಸ್ವರ!
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಿಯು ಯಲ್ಲಿ ಮೂರು ಅಂತಿಮ ಪರೀಕ್ಷೆ ನಡೆಸುವ ಸರಕಾರದ ನಿರ್ಧಾರಕ್ಕೆ ಅಧ್ಯಾಪಕರಿಂದ ನಕಾರಾತ್ಮಕ ಪ್ರತಿಕ್ರಿಯೆಯೂ ಬಂದಿದೆ. ಈ ಹಿಂದೆ “ಪೂರಕ ಪರೀಕ್ಷೆ’ಗೆ ಮಕ್ಕಳ ಸಂಖ್ಯೆ ಕಡಿಮೆ ಇರುತ್ತಿತ್ತು; ಆದರೆ ಈ ಬಾರಿ ಮೂರು ಬಾರಿ ವಾರ್ಷಿಕ ಪರೀಕ್ಷೆಯೇ ನಡೆಯುವು ದರಿಂದ ವಿದ್ಯಾರ್ಥಿಗಳ ಹಾಜರಾತಿ 2 ಹಾಗೂ 3ನೇ ಪರೀಕ್ಷೆಯಲ್ಲಿಯೂ ಅಧಿಕ ಇರುವ ಸಾಧ್ಯತೆ ಇದೆ. ಮೂರು ಪರೀಕ್ಷೆ, ಮೌಲ್ಯ ಮಾಪನ ಇರುವುದರಿಂದ ಉಪನ್ಯಾಸಕ ರಿಗೆ ಒತ್ತಡ ಅಧಿಕವಾಗಲಿದೆ. ಜತೆಗೆ 2-3ನೇ ಮೌಲ್ಯಮಾಪನಕ್ಕೆ ಬೆಂಗಳೂರಿಗೆ ತೆರಳ ಬೇಕಾಗಿರುವುದು ಅಸಮಾಧಾನಕ್ಕೆ ಕಾರಣ.
ಬ್ರಿಜ್ ಕೋರ್ಸ್ ನೀಡುವಂತೆ ಉನ್ನತ ಶಿಕ್ಷಣ ಸಚಿವರಲ್ಲಿ ಕೋರ ಲಾಗಿದೆ. ಪಿಯುಸಿಯಲ್ಲಿ
3 ಪರೀಕ್ಷೆ ಬರೆದು ಪದವಿ ಕಾಲೇಜು ಸೇರುವವರಿಗೆ ಇದರಿಂದ ಸಹಾಯವಾಗಲಿದೆ.
-ಮಧು ಬಂಗಾರಪ್ಪ, ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.