Queen Elizabeth II: ರಾಣಿ ಎರಡನೇ ಎಲಿಜಬೆತ್ ಸ್ಮರಣಾರ್ಥ ದುಬಾರಿ ನಾಣ್ಯ ಅನಾವರಣ
* 3.61 ಕೆಜಿ ಚಿನ್ನ, 6426 ವಜ್ರಗಳಿಂದ ರಚನೆ
Team Udayavani, Sep 8, 2023, 8:29 PM IST
ಲಂಡನ್: ಬ್ರಿಟನ್ ರಾಜಮನೆತನದ ರಾಣಿ ಎರಡನೇ ಎಲಿಜಬೆತ್ ನಿಧನರಾಗಿ ಶುಕ್ರವಾರಕ್ಕೆ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಬ್ರಿಟನ್ ರಾಜಮನೆತನವು ನಾಣ್ಯವನ್ನು ಹೊರತಂದಿದೆ.
3.61 ಕೆಜಿ ಚಿನ್ನ, 6426 ವಜ್ರಗಳಿಂದ ನಾಣ್ಯವನ್ನು ರಚಿಸಲಾಗಿದೆ. ಇದರ ಮೌಲ್ಯ 192 ಕೋಟಿ ರೂ. (18.47 ಮಿಲಿಯನ್ ಯೂರೋ) ಇದೆ. ನಾಣ್ಯವು 9.6 ಇಂಚು ಸುತ್ತಳತೆ ಹೊಂದಿದ್ದು, ಬಾಸ್ಕೆಲ್ ಬಾಲ್‌ಗಿಂತಲೂ ಅಗಲವಿದೆ. ಈಸ್ಟ್ ಇಂಡಿಯಾ ಕಂಪನಿಯು ಈ ನಾಣ್ಯವನ್ನು ವಿನ್ಯಾಸಗೊಳಿಸಿದೆ. ಕಾಮನ್‌ವೆಲ್ತ್ ರಾಷ್ಟ್ರಗಳ ಕುಶಲಕರ್ಮಿಗಳು ಇದನ್ನು ಸಿದ್ಧಪಡಿಸಿದ್ದಾರೆ. ದಿವಂಗತ ರಾಣಿ ಎರಡನೇ ಎಲಿಜಬೆತ್ ಅವರ ಅನೇಕ ಭಾವಚಿತ್ರಗಳನ್ನು ನಾಣ್ಯವು ಒಳಗೊಂಡಿದೆ. ಕಲಾವಿದರಾದ ಮೇರಿ ಗಿಲ್ಲಿಕ್, ಅರ್ನಾಲ್ಡ್ ಮಚಿನ್, ರಾಫೆಲ್ ಮಕೌಫ್ ಮತ್ತು ಇಯಾನ್ ರ್‍ಯಾಂಕ್ ಬ್ರಾಡ್ಲೆ ಈ ಭಾವಚಿತ್ರಗಳನ್ನು ರಚಿಸಿದ್ದಾರೆ. ಈ ನಾಣ್ಯವು ವಿಶ್ವದಲ್ಲೇ ದುಬಾರಿ ನಾಣ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ.
ಇದಕ್ಕೂ ಮುನ್ನ “ಡಬಲ್ ಈಗಲ್’ ನಾಣ್ಯವು ವಿಶ್ವದಲ್ಲೇ ಅತ್ಯಂತ ದುಬಾರಿ ನಾಣ್ಯ ಎಂದು ದಾಖಲೆ ಬರೆದಿತ್ತು. 2021ರಲ್ಲಿ ಇದರ ಹರಾಜು ನಡೆದ ಸಂದರ್ಭದಲ್ಲಿ 15.17 ಮಿಲಿಯನ್ ಯೂರೋಗಳಿಗೆ ನಾಣ್ಯ ಮಾರಾಟವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.