ದುಬಾರಿ ವಸ್ತುಗಳು
Team Udayavani, Jun 22, 2020, 4:43 AM IST
ಒಂದು ಕ್ಷಣಕ್ಕೆ ನೋಡಿದರೆ “ಬ್ಯಾಂಗ್ ಅಂಡ್ ಓಲುಫ್ ಸನ್ ಬಿಯೊ ಪ್ಲೇ’ ಸಂಸ್ಥೆಯ ಈ ಸ್ಪೀಕರ್ ಕುರ್ಚಿಯಂತೆ ಕಾಣುವುದು. ಕಾಲುಗಳನ್ನು ನೀಡಿರುವುದರಿಂದ ಆ ಅನುಮಾನ ಬರುವುದು ಸಹಜವೇ ಆಗಿದೆ. ಇದು ಗಾತ್ರದಲ್ಲೂ ಕುರ್ಚಿಯನ್ನೇ ಹೋಲುತ್ತದೆ. ಅಂದರೆ, ಅಷ್ಟು ದೊಡ್ಡಕ್ಕಿರುವ ಸ್ಪೀಕರ್ ಅನ್ನು ಸುಲಭವಾಗಿ ಎಲ್ಲಿ ಬೇಕಲ್ಲಿ ಎತ್ತಿಡಲು ಆಗುವುದಿಲ್ಲ. ಏಕೆಂದರೆ ಇದರ ತೂಕ 32 ಕೆ.ಜಿ. ಇದೆ.
ಸೃಜನಶೀಲ ಮನಸ್ಸುಗಳನ್ನು ಗಮನದಲ್ಲಿರಿಸಿಕೊಂಡು ಈ ಸ್ಪೀಕರ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಸ್ಪೀಕರ್ ಅನ್ನು ಸ್ಮಾರ್ಟ್‌ಫೋನ್ ಆ್ಯಪ್ ಮುಖಾಂತರ ನಿಯಂತ್ರಿಸಬಹುದಾಗಿದೆ. 33ರಿಂದ 23,000 ಫ್ರೀಕ್ವೆನ್ಸಿ ರೇಂಜ್ ಒಳಗಿನ ಶಬ್ದವನ್ನು ಈ ಸ್ಪೀಕರ್ ಹೊರಡಿಸುತ್ತದೆ. ಇದರೊಳಗೆ ಒಂದು 8 ಇಂಚಿನ ವೂಫರ್, ಎರಡು ಮಿಡ್ ರೇಂಜ್, 2 ಫುಲ್ ರೇಂಜ್ ಮತ್ತು ಎರಡು ಟ್ವೀಟರ್ ಗಳನ್ನು ನೀಡಲಾಗಿದೆ. ಕಪ್ಪು, ಬಿಳಿ ಬಣ್ಣಗಳಲ್ಲಿ ಈ ಸ್ಪೀಕರ್ ಲಭ್ಯ.
ಸ್ಪೀಕರ್ ಬೆಲೆ: 2,00,000 ರೂ.
***
ಲೈಟ್ ಬಲ್ಬ್: ಕ್ಯಾಂಡಲ್ ಬಲ್ಬುಗಳನ್ನು ನೆಚ್ಚಿಕೊಂಡಿರುವ ನಾವು ಸಿಎಫ್ ಎಲ್ ಬಲ್ಬುಗಳನ್ನು ಅಳವಡಿಸಿ ಕೊಳ್ಳುವುದಕ್ಕೇ ಹಿಂದೆಮುಂದೆ ನೋಡುತ್ತಿದ್ದೇವೆ. ಹೀಗಿರುವಾಗ ಸಾವಿರಾರು ರೂ. ಬೆಲೆಯ ಲೈಟ್ ಬಲ್ಬನ್ನು ಕೊಳ್ಳುವುದು ಕೆಲವರಿಗೆ ಅನಗತ್ಯವಾಗಿ ತೋರಬಹುದು. ಆದರೆ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಇಷ್ಟಪಡುವವರು, ಬೆಲೆ ಹೆಚ್ಚಾದರೂ ಅಪರೂಪದ ವಸ್ತುಗಳನ್ನು ಹೊಂದಬೇಕು ಎನ್ನುವವರಿಗಾಗಿ ಈ ಉತ್ಪನ್ನ ಸೂಕ್ತವಾಗಿದೆ.
ಇದರ ಹೆಸರು “ಬಿಯೆಲ್ ಮೋಲ್ಟನ್ ಲಾವಾ ಲ್ಯಾಂಪ್’. ಈ ಎಲ್‌ಇಡಿ ಬಲ್ಬನ್ನು ಜಗತ್ಪ್ರಸಿದ್ಧ ಜಪಾನಿ ಡಿಸೈನರ್ ವಿನ್ಯಾಸಗೊಳಿಸಿದ್ದಾರೆ. ಲಾವಾ ರಸ ಕರಗುತ್ತಿರುವಂತೆ ಕಾಣುವುದರಿಂದ ಆ ಹೆಸರನ್ನು ನೀಡಲಾಗಿದೆ ಎಂದು ಸಂಸ್ಥೆ ಹೇಳುತ್ತಿದೆ. ವಿನ್ಯಾಸ, ಆಕರ್ಷಕ ಬೆಳಕಿನ ಸಂಯೋಜನೆ ಇವೆರಡು ಅಂಶವನ್ನು ಹೊರತುಪಡಿಸಿದರೆ ಎಲ್ಲಾ ಎಲ್‌ಇಡಿ ಬಲ್ಬುಗಳಲ್ಲೂ ಇರುವ ಕಡಿಮೆ ವಿದ್ಯುತ್ ಬಳಕೆ, ದೀರ್ಘ ಬಾಳಿಕೆಯನ್ನು ಇದೂ ಹೊಂದಿದೆ.
ಬೆಲೆ: 23,000 ರೂ. ನಲವತ್ತು ಕ್ಯಾಂಡಲ್, 60
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.