ದುಬಾರಿ ವಸ್ತುಗಳು: ಟೆನ್ನಿಸ್ ಬಾಲ್ ಹೋಲ್ಡರ್
Team Udayavani, Jun 8, 2020, 5:01 AM IST
ಟೆನ್ನಿಸ್ ಆಡುವಾಗ ರಾಕೆಟ್, ಟೆನ್ನಿಸ್‌ಬಾಲ್, ಶೂ ಮುಂತಾದ ಆಕ್ಸೆಸರಿ ಗಳಿದ್ದರೆ, ವೃತ್ತಿಪರತೆ ಎದ್ದು ಕಾಣುತ್ತದೆ. ಸಹ ಆಟಗಾರರಿಂದ ಪ್ರಶಂಸೆ ಸಿಗುತ್ತದೆ. ಅಂತೆಯೇ, ಟೆನ್ನಿಸ್ ಬಾಲ್‌ಗಳನ್ನು ಇಡಲು ಸಿಲಿಂಡರ್ ಕ್ಯಾನ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಟಿಫಾನಿ ಅಂಡ್ ಕೊ. ಎನ್ನುವ ಸಂಸ್ಥೆ ಕೂಡಾ, ಟೆನ್ನಿಸ್ ಸಿಲಿಂಡರ್ ಕ್ಯಾನ್‌ಗಳನ್ನು ಹೊರತಂದಿದೆ. ಅದರಲ್ಲಿ ನಾಲ್ಕು ಟೆನ್ನಿಸ್ ಬಾಲ್‌ಗಳನ್ನು ತುಂಬಿಸಿಡಬಹುದು. ಅದರ ಬೆಲೆ ಮಾತ್ರ ತುಂಬಾ ದುಬಾರಿ. ಅದಕ್ಕೆ ಕಾರಣ, ಟಿಫಾನಿ ಸಂಸ್ಥೆ ಹೊರತಂದಿರುವ ಕ್ಯಾನ್, ಸ್ಟರ್ಲಿಂಗ್ ಬೆಳ್ಳಿಯಿಂದ ತಯಾರಿಸಲ್ಪಟ್ಟಿರುವುದು. ಈ ಉತ್ಪನ್ನ ಟೆನ್ನಿಸ್ ಬಾಲ್‌ಗಳನ್ನು, ಅದಕ್ಕೆ ಸರಿ ಹೊಂದುವ ತಾಪಮಾನದಲ್ಲಿ ಇರಿಸುತ್ತದೆ. ಸ್ಟರ್ಲಿಂಗ್ ಸಿಲ್ವರ್, 92.5 ಶೇ. ಸಿಲ್ವರ್ ಹೊಂದಿದ್ದು ಉಳಿದ ಪ್ರಮಾಣದಲ್ಲಿ ತಾಮ್ರ ಮುಂತಾದ ಲೋಹವನ್ನು ಹೊಂದಿರುತ್ತದೆ. ಶುದ್ಧ ಬೆಳ್ಳಿಗಿಂತ ಸ್ಟರ್ಲಿಂಗ್ ಸಿಲ್ವರ್ ಸದೃಢ ಎನ್ನಲಾಗುತ್ತದೆ.
ಬೆಲೆ: 1,15,000 ರೂ.
ಗುಂಡು ಪಿನ್: ಶ್ರೀಮಂತಿಕೆಯನ್ನು ಅಳೆಯಲು ಐಷಾರಾಮಿ ಕಾರು, ಬಂಗಲೆ, ಡಿಸೈನರ್ ದಿರಿಸು, ಜೇಬಲ್ಲಿ ಐಫೋನು ಮುಂತಾದ ಕಣ್ಣಿಗೆ ರಾಚುವ ವಸ್ತುಗಳೇ ಆಗಬೇಕೆಂದಿಲ್ಲ. ಒಂದು ಚಿಕ್ಕ ವಸ್ತು ಕೂಡಾ ಶ್ರೀಮಂತಿಕೆಗೆ ಕೈಗನ್ನಡಿ ಹಿಡಿಯಬಲ್ಲುದು. ಅದಕ್ಕೆ ಸರಿಯಾದ ಉದಾಹರಣೆ ಇಲ್ಲಿದೆ. ಆಫೀಸು ಕಚೇರಿಗಳನ್ನು ಪೇಪರ್‌ಲೆಸ್ ಆಗಿಸುವ ಉದ್ದೇಶದಿಂದ ಡಿಜಿಟಲೈಸ್ ಮಾಡುತ್ತಿರುವ ಈ ಹೊತ್ತಿನಲ್ಲೂ, ಅಗತ್ಯವಾಗಿ ಇರಲೇಬೇಕಾದ ವಸ್ತು ಗುಂಡು ಪಿನ್. 10- 15 ರೂ.ಗಳಿಗೆ ನೂರಾರು ಗುಂಡು ಪಿನ್‌ಗಳು ಪ್ಯಾಕೆಟ್‌ನಲ್ಲಿ ಸಿಗುತ್ತಿದ್ದವು. ಇಲ್ಲಿ ನೀಡಿರುವ ಗುಂಡು ಪಿನ್‌ವೊಂದರ ಬೆಲೆ 13,000 ರೂ. ಇದು ಚಿನ್ನದಿಂದ ನಿರ್ಮಿಸಲಾದ ಗುಂಡು ಪಿನ್. ಇದನ್ನು, ಆಭರಣ ಇಡುವಂತೆ ವೆಲ್ವೆಟ್ ಬಾಕ್ಸ್‌ನಲ್ಲಿ ನೀಡಲಾಗುತ್ತದೆ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಇದಕ್ಕಿಂತ ಉತ್ತಮ ಮಾರ್ಗ ಇಲ್ಲವೇನೋ.
ಬೆಲೆ: 13,000 ರೂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.