![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 15, 2023, 9:08 PM IST
ಮಹರಾಜ್‌ಗಂಜ್: ಭಾರತ ಅಕ್ಕಿ ರಫ್ತನ್ನು ನಿಷೇಧಿಸಿದ ನಂತರ ಭಾರತ-ನೇಪಾಳ ಗಡಿಯಲ್ಲಿ ಅಕ್ಕಿ ಕಳ್ಳಸಾಗಣೆ ಗಣನೀಯವಾಗಿ ಏರಿಕೆಯಾಗಿದೆ. ಗಡಿಯಲ್ಲಿರುವ ಗ್ರಾಮಸ್ಥರು ಹಣಕ್ಕಾಗಿ ನಡಿಗೆ ಮೂಲಕ ಅಥವಾ ಚಿಕ್ಕ ವಾಹನಗಳಲ್ಲಿ ಭಾರತದಿಂದ ನೇಪಾಳಕ್ಕೆ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದಾರೆ.
ನೇಪಾಳಿ ವ್ಯಾಪಾರಿಗಳು ಗಡಿಗಳಲ್ಲಿ ಅಕ್ಕಿಯನ್ನು ಸಂಗ್ರಹಿಸಲು ಸಂಗ್ರಹಗಾರಗಳನ್ನು ನಿರ್ಮಿಸಿದ್ದಾರೆ. ಯುವ ನಿರುದ್ಯೋಗಿಗಳು, ಮಹಿಳೆಯರು, ಕೆಲವೊಮ್ಮೆ ವಯಸ್ಸಾದವರು ಅಕ್ಕಿ ಕಳ್ಳಸಾಗಣೆ ಮಾಡುತ್ತಾರೆ. ಇವರಿಗೆ ಕ್ವಿಂಟಲ್ ಅಕ್ಕಿಗೆ 300 ರೂ.ವರೆಗೆ ವ್ಯಾಪಾರಿಗಳು ಹಣ ಪಾವತಿಸುತ್ತಾರೆ. ಹೆಚ್ಚು ಹಣ ಗಳಿಸಲು ಅನೇಕರು ಹಲವು ಬಾರಿ ಸಂಚಾರ ಮಾಡುತ್ತಾರೆ.
ಲಕ್ಷ್ಮೀನಗರ, ಥೂತಿಬರಿ, ನಿರ್ಚಾಲ್, ಪರ್ಸಾ ಮಲಿಕ್, ಬರ್ಗಡ್ವಾ, ಭಗವಾನ್ಪುರ್, ಶ್ಯಾಮ್ ಕಾಟ್, ಫರೇನಿಯಾ, ಹಾರ್ಡಿ ಡಾಲಿ ಮತ್ತು ಖಾನುವಾ ಗ್ರಾಮಗಳಿಂದ ಗಡಿಯನ್ನು ದಾಟಿ ನೇಪಾಳ ತಲುಪುವುದು ಸುಲಭ. 15ರಿಂದ 20 ರೂ.ಗೆ ಖರೀದಿಸುವ ಕೆಜಿ ಅಕ್ಕಿಯನ್ನು ನೇಪಾಳದಲ್ಲಿ 70 ರೂ.ವರೆಗೆ ಮಾರಾಟ ಮಾಡಲಾಗುತ್ತದೆ.
ಕಳೆದ ನಾಲ್ಕು ತಿಂಗಳಲ್ಲಿ ನೇಪಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 111.2 ಟನ್ ಅಕ್ಕಿಯನ್ನು ಸಶಸ್ತ್ರ ಸೀಮಾ ದಳ ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.