ರಾಜ್ಯಕ್ಕೆ ಹೆಚ್ಚುವರಿ ವೈದ್ಯಕೀಯ ಸೀಟು?ವೈದ್ಯ ಕಾಲೇಜುಗಳಲ್ಲಿ 300-500 ಹೆಚ್ಚು ಸೀಟು ಲಭ್ಯತೆ
Team Udayavani, Feb 1, 2022, 7:00 AM IST
ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ 300ರಿಂದ 500 ವೈದ್ಯಕೀಯ ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ 60 ವೈದ್ಯಕೀಯ ಕಾಲೇಜುಗಳಿದ್ದು, ಕಳೆದ ವರ್ಷ 9,345 ವೈದ್ಯಕೀಯ ಸೀಟುಗಳು ಲಭ್ಯವಾಗಿದ್ದವು. ಈ ವರ್ಷ 9,650 ಸೀಟು ಲಭ್ಯತೆ ಖಚಿತವಾಗಿದೆ. ಹೀಗಾಗಿ 300ರಿಂದ 500 ಸೀಟುಗಳು ಹೆಚ್ಚುವರಿಯಾಗಿ ದೊರೆಯುವ
ನಿರೀಕ್ಷೆಯಿದೆ.
ಹೊಸದಾಗಿ ಚಿಕ್ಕಬಳ್ಳಾಪುರ, ಹಾವೇರಿ, ಚಿಕ್ಕಮಗಳೂರು ಮತ್ತು ಯಾದಗಿರಿ ಜಿಲ್ಲೆಯ 4 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತೀ ಕಾಲೇಜಿಗೆ ತಲಾ 150 ಸೀಟುಗಳಂತೆ 600 ಸೀಟುಗಳ ನಿರೀಕ್ಷೆ ಮಾಡಲಾಗಿತ್ತು.ಈ ಪೈಕಿ ಚಿಕ್ಕಬಳ್ಳಾಪುರದ ಸರಕಾರಿ ಕಾಲೇಜಿನಲ್ಲಿ 100 ಸೀಟುಗಳ ಇನ್‌ಟೇಕ್‌ಗೆ ಅನುಮತಿ ಸಿಕ್ಕಿದೆ. ಇದರ ಜತೆಗೆ ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜಿನಲ್ಲಿ ಸರಕಾರಿ ಕೋಟಾಕ್ಕೆ 60 ಸೀಟುಗಳು, ಧಾರವಾಡದಲ್ಲಿ ಖಾಸಗಿ ಡೀಮ್ಡ್ ವಿ.ವಿ.ಯಲ್ಲಿ 150 ಸೀಟುಗಳು ಇನ್‌ಟೇಕ್ ಇದ್ದು, ಶೇ. 25ರಷ್ಟು ಸೀಟುಗಳು ಸರಕಾರಿ ಕೋಟಾಕ್ಕೆ ಸಿಗಲಿವೆ. ಜತೆಗೆ ಕೆಲವು ಕಾಲೇಜುಗಳು ತಮ್ಮ ಇನ್‌ಟೇಕ್ ಹೆಚ್ಚಳ ಮಾಡಿಕೊಂಡಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಸಚಿವ ಆನಂದ ಸಿಂಗ್ ಡಿಕೆಶಿ ಮಾತುಕತೆಗೆ ರಾಜಕೀಯ ಮಹತ್ವವಿಲ್ಲ:ಸಚಿವ ಬಿ.ಶ್ರೀರಾಮುಲು
ಚಿಕ್ಕಮಗಳೂರಲ್ಲಿ 150 ಸೀಟು
ಚಿಕ್ಕಮಗಳೂರು ಕಾಲೇಜಿನಲ್ಲಿ 150 ಸೀಟುಗಳು ಬಹುತೇಕ ಲಭ್ಯವಾಗಲಿವೆ. ಮೂಲ ಸೌಕರ್ಯ ಸಹಿತ ಇನ್ನಿತರ ವಿಷಯದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ಪರಿಶೀಲನ ಹಂತದಲ್ಲಿದ್ದು, ಶೇ.90ರಷ್ಟು ಪ್ರಕ್ರಿಯೆ ಮುಗಿದಿದೆ.
ಇನ್ನು ಯಾದಗಿರಿ ಮತ್ತು ಹಾವೇರಿಯಲ್ಲಿ ಸೀಟುಗಳು ಲಭ್ಯ ವಾಗುವ ಅವಕಾಶ ಶೇ. 50ರಷ್ಟಿದೆ. ನೀಟ್‌ನಲ್ಲಿ ಅರ್ಹತೆ ಪಡೆದಿರು ವವರು ವೈದ್ಯಕೀಯ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಮಾ. 20 ಕೊನೆಯ ದಿನ. ಅಷ್ಟರೊಳಗೆ ಮೊದಲ, ದ್ವಿತೀಯ ಮತ್ತು ಮಾಪ್ -ಅಪ್ ಸುತ್ತಿನ ಸೀಟು ಹಂಚಿಕೆ ಮಾಡಬೇಕಿದೆ. ಒಂದೂವರೆ ತಿಂಗಳು ಸಮಯ ಇರುವುದರಿಂದ ಅಷ್ಟರಲ್ಲಿ ಸೀಟುಗಳು ಲಭ್ಯವಾಗಬಹುದು ಎಂಬ ನಿರೀಕ್ಷೆ ಇದೆ.
3 ದಿನಗಳಲ್ಲಿ ಸೀಟ್ ಮ್ಯಾಟ್ರಿಕ್ಸ್
ಸು. ಕೋರ್ಟ್‌ನಲ್ಲಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಇದ್ದ ತಡೆಯನ್ನು ತೆರವುಗೊಳಿಸಿದ ಅನಂತರ ರಾಜ್ಯದಲ್ಲಿ ವೈದ್ಯಕೀಯ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಚುರುಕುಗೊಂಡಿದ್ದು, ಮುಂದಿನ ಮೂರು ದಿನಗಳಲ್ಲಿ ಮೊದಲ ಸುತ್ತಿನ ವೈದ್ಯಕೀಯ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಈ ಬಾರಿ ಚಿಕ್ಕಬಳ್ಳಾಪುರ ಕಾಲೇಜಿನಲ್ಲಿ 100 ಸೀಟುಗಳು ಲಭ್ಯವಾಗಿವೆ. ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿನಲ್ಲಿಯೂ ಸೀಟುಗಳು ಲಭ್ಯವಾಗುವ ಅವಕಾಶಗಳಿವೆ. ಯಾದಗಿರಿ ಮತ್ತು ಹಾವೇರಿ ಕಾಲೇಜು
ಗಳಲ್ಲಿ ಇನ್ನೂ ಅಂತಿಮವಾಗಿಲ್ಲ.
– ಡಾ| ಪಿ.ಜಿ. ಗಿರೀಶ್,
ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.