Kerala: ಉಗ್ರರು, ಮತಾಂಧ ಶಕ್ತಿಗಳಿಗೆ ಆಶ್ರಯ ಸಲ್ಲದು


Team Udayavani, Oct 29, 2023, 11:28 PM IST

pinarayi vijayan

ದೇವರ ಸ್ವಂತ ನಾಡು ಕೇರಳದಲ್ಲಿ ಮತ್ತೂಮ್ಮೆ ಬಾಂಬ್‌ಗಳು ಸ್ಫೋಟಿಸಿ, ರಾಜ್ಯ ಮಾತ್ರವಲ್ಲದೆ ಇಡೀ ದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ. ಕ್ರೈಸ್ತರ ಪ್ರಾರ್ಥನಾ ಮಂದಿರದಲ್ಲಿ ಈ ಸರಣಿ ಸ್ಫೋಟ ಸಂಭವಿಸಿ, ಇಬ್ಬರು ಸಾವನ್ನಪ್ಪಿದ್ದರೆ 45 ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ಶರಣಾಗಿರುವ ಕ್ರೈಸ್ತ ಧರ್ಮವೊಂದರ ಗುಂಪಿಗೆ ಸೇರಿದ ಆರೋಪಿಯೋರ್ವ ಧರ್ಮದೊಳಗಿನ ಗುಂಪು ಸಂಘರ್ಷದ ಕಾರಣಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾನೆ. ಮೇಲ್ನೋಟಕ್ಕೆ ಆರೋಪಿ ನೀಡಿರುವ ಹೇಳಿಕೆ ನಿಜವಾಗಿ ರುವಂತೆ ಕಾಣುತ್ತಿದ್ದರೂ ಇದರ ಹಿಂದೆ ಯಾವುದಾದರೂ ಭಯೋತ್ಪಾದನ ಸಂಘಟನೆಯ ಕೈವಾಡ ಅಥವಾ ಇನ್ನಾವುದೇ ಷಡ್ಯಂತ್ರವಿದೆಯೇ ಎಂಬುದು ಉನ್ನತ ಮಟ್ಟದ ತನಿಖೆಯ ಬಳಿಕವಷ್ಟೇ ಖಚಿತವಾಗಲಿದೆ.

ಧಾರ್ಮಿಕ ಮೂಲಭೂತವಾದಿಗಳು ಮತ್ತು ಭಯೋತ್ಪಾದಕರಿಗೆ ಕೇರಳ ಸುರಕ್ಷಿತ ತಾಣವಾಗುತ್ತಿದೆ ಎಂಬ ಆರೋಪಗಳು ಇಂದು ನಿನ್ನೆಯದಲ್ಲ. ಕಳೆದ ಕೆಲವು ದಶಕಗಳಿಂದ ರಾಜ್ಯದಲ್ಲಿ ಉಗ್ರರು ಸದ್ದಿಲ್ಲದೆ ತಮ್ಮ ದುಷ್ಕೃತ್ಯಗಳನ್ನು ಎಸ ಗುವ ಮೂಲಕ ಅಮಾಯಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಲೇ ಬಂದಿದ್ದರು. ಸಿಮಿ, ಪಿಎಫ್ಐ ಸಹಿತ ವಿವಿಧ ಭಯೋತ್ಪಾದಕ ಸಂಘಟನೆಗಳನ್ನು ಕೇಂದ್ರ ಸರಕಾರ ನಿಷೇಧಿಸಿ, ಈ ಸಂಘಟನೆಗಳ ನೆಲೆಗಳು ಮತ್ತು ಪದಾಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಂಡ ಬಳಿಕ ಕೇರಳದಲ್ಲಿ ಹಿಂಸಾಚಾರ ಒಂದಿಷ್ಟು ತಹ ಬಂದಿಗೆ ಬಂದಿತ್ತು. ಆದರೂ ರಾಜ್ಯದಲ್ಲಿ ಉಗ್ರಗಾಮಿ ಸಂಘಟ® ೆ ಗಳು ಅತ್ಯಂತ ರಹಸ್ಯವಾಗಿ ಕಾರ್ಯಾಚರಿಸುತ್ತಿವೆ ಎಂಬ ಗುಮಾನಿಯನ್ನು ಕೇಂದ್ರದ ವಿವಿಧ ತನಿಖಾ ಸಂಸ್ಥೆಗಳು ಪದೇ ಪದೆ ವ್ಯಕ್ತಪಡಿಸುತ್ತಲೇ ಬಂದಿದ್ದು ವಲ್ಲದೆ ಇತ್ತೀ ಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿದ ಹಲವು ದಾಳಿಗಳಲ್ಲಿ ಈ ಆರೋಪಕ್ಕೆ ಪುಷ್ಟಿ ನೀಡುವಂಥ ಸಾಕ್ಷ್ಯಾಧಾರಗಳು ಲಭಿಸಿದ್ದವಲ್ಲದೆ ಕೆಲವು ಉಗ್ರರನ್ನು ಬಂಧಿಸಿತ್ತು.

ಶುಕ್ರವಾರ ಕೇರಳದ ಮಲಪ್ಪುರಂನಲ್ಲಿ ನಡೆದ ಗಾಜಾ ಪರ ರ್ಯಾಲಿಯ ವೇಳೆ ಹಮಾಸ್‌ ಉಗ್ರ ಸಂಘಟನೆಯ ನಾಯಕ ವರ್ಚುವಲ್‌ ಆಗಿ ಪಾಲ್ಗೊಂಡು ಮಾತನಾಡಿರುವುದು ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ವ್ಯಾಪಕ ಖಂಡನೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಭಯೋತ್ಪಾದಕ ಸಂಘಟನೆಯ ನಾಯಕನೋರ್ವನ ವರ್ಚುವಲ್‌ ಭಾಷಣವನ್ನು ಪ್ರತಿಭಟನೆ ವೇಳೆ ಪ್ರಸಾರ ಮಾಡಲು ಅವಕಾಶ ನೀಡಿದ ಪೊಲೀಸರ ಕಾರ್ಯವೈಖರಿ ವಿರುದ್ಧ ವಿವಿಧ ರಾಜಕೀಯ ಪಕ್ಷಗಳು ಕಿಡಿಕಾರಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ರವಿವಾರ ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಸ್ಫೋಟ ಸಂಭವಿಸಿರುವುದು ಸಹಜವಾಗಿಯೇ ಕೇರಳ ಪೊಲೀಸರು ಮತ್ತು ಸರಕಾರದ ವೈಫ‌ಲ್ಯವನ್ನು ಎತ್ತಿ ತೋರಿಸಿವೆ. ಸ್ಫೋಟ ಪ್ರಕರಣದ ತನಿಖೆಗೆ ಎನ್‌ಐಎ ಸಹಿತ ಸಂಪೂರ್ಣ ಸಹಕಾರ ನೀಡುವುದಾಗಿ ಕೇಂದ್ರ, ಕೇರಳ ಸರಕಾರಕ್ಕೆ ಭರವಸೆ ನೀಡಿದೆ. ಆದರೆ ಕೇರಳ ಸರಕಾರ ತನ್ನ ಮೂಗಿನಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಮಾಜದ್ರೋಹಿ ಸಂಘಟನೆಗಳು ಮತ್ತು ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದೇ ಹೋದಲ್ಲಿ ಇಂಥ ದುಸ್ಸಾಹಸಕ್ಕೆ ಇನ್ನಷ್ಟು ಮತಾಂಧ ಶಕ್ತಿಗಳು ಮುಂದಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ಶಕ್ತಿಗಳನ್ನು ಬೇರು ಸಹಿತ ಕಿತ್ತೂಗೆಯಲು ಪಣತೊಡಬೇಕಿದೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kannadiga

Editorial: ಕನ್ನಡಿಗರ ನಿಂದನೆಗೆ ಕಠಿನ ಕ್ರಮ: ಸ್ತುತ್ಯರ್ಹ ನಿಲುವು

4-editorial

Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ

cyber crime

Cyber ​​crime ತಡೆ: ವಿವೇಚನೆಯೇ ಕೀಲಿಕೈ

ಹುಸಿ ಬೆದರಿಕೆ ಸಂದೇಶ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ಹುಸಿ ಬೆದರಿಕೆ ಸಂದೇಶ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.