![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Feb 7, 2023, 7:45 AM IST
ಬೆಂಗಳೂರು: ನಾಗ್ಪುರದಲ್ಲಿ ಫೆ. 9ರಿಂದ ಆರಂಭವಾಗುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆರ್. ಅಶ್ವಿನ್ ನೇತೃತ್ವದ ಭಾರತೀಯ ಸ್ಪಿನ್ ದಾಳಿಯನ್ನು ಎದುರಿಸುವುದು ಅತ್ಯಂತ ಕಠಿನ ಸವಾಲು ಎಂದು ಆಸ್ಟ್ರೇಲಿಯ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಅವರು ಹೇಳಿದ್ದಾರೆ.
ವೀಸಾ ವಿಳಂಬದಿಂದಾಗಿ ತಡವಾಗಿ ಭಾರತಕ್ಕೆ ಆಗಮಿ ಸಿದ್ದ ಪಾಕಿ ಸ್ಥಾನ ಮೂಲದ ಬ್ಯಾಟ್ಸ್‌ಮನ್ ಖ್ವಾಜಾ ಮೊದಲ ಟೆಸ್ಟ್‌ನಲ್ಲಿ ಡೇವಿಡ್ ವಾರ್ನರ್ ಜತೆ ಇನ್ನಿಂಗ್ಸ್ ಆರಂಭಿಸ ಲಿದ್ದಾರೆ. ಭಾರತೀಯ ನೆಲದಲ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದರೆ ಇದೀಗ ಟೆಸ್ಟ್ ಮಾದರಿಯಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಅವರು 2013 ಮತ್ತು2017ರ ಟೆಸ್ಟ್ ತಂಡದ ಭಾಗವಾಗಿದ್ದರು. ಕಳೆದ ಎರಡು ವರ್ಷ ಖ್ವಾಜಾ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯದ ‘ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ’ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು ಖ್ವಾಜಾ ಅವರು 2004-05ರ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವ ತಂಡದ ಪ್ರಯತ್ನದಲ್ಲಿ ಮಹತ್ತರ ಪಾತ್ರ ವಹಿಸುವ ಸಾಧ್ಯತೆಯಿದೆ. ಇಲ್ಲಿ “ಖಂಡಿತವಾಗಿಯೂ ವಿಭಿನ್ನ ಭಾವನೆ ಇದೆ. ಈ ಆಟದಲ್ಲಿ ಯಾವುದನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ನಮ್ಮ ನಿರ್ವಹಣೆ ಸುಧಾರಿಸಿದೆ ಎಂದವರು ತಿಳಿಸಿದರು.
ಅಭ್ಯಾಸ ಪಂದ್ಯವಿಲ್ಲ
ಟೆಸ್ಟ್ ಸರಣಿ ಆರಂಭಕ್ಕಿಂತ ಮೊದಲು ಆಸ್ಟ್ರೇಲಿಯ ಅಭ್ಯಾಸ ಪಂದ್ಯವೊಂದರಲ್ಲಿ ಆಡುವುದರಿಂದ ಹಿಂದೆ ಸರಿಯಿತು. ಅದರ ಬದಲಿಗೆ ಇಲ್ಲಿನ ಸ್ಪಿನ್ ಸ್ಥಿತಿಯನ್ನು ಅರಿತುಕೊಳ್ಳಲು ಹೆಚ್ಚಿನ ಗಮನ ಹರಿಸಿತು. ಈ ಮಹತ್ವದ ಸೆಣಸಾಟದಲ್ಲಿ ನಮಗೆ ಅಶ್ವಿನ್ ಪಡೆಯ ಸ್ಪಿನ್ ದಾಳಿಯನ್ನು ಎದುರಿಸುವುದೇ ಅತ್ಯಂತ ಕಠಿನ ಸವಾಲು ಆಗಿದೆ.
ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ನಾವು ಸತತ ಅಭ್ಯಾಸ ನಡೆಸುತ್ತಿದ್ದೇವೆ. ಸ್ಪಿನ್ ದಾಳಿ ಯನ್ನು ಎದುರಿಸಲು ಯಶಸ್ವಿಯಾದರೆ ನಾವು ಮೇಲುಗೈ ಸಾಧಿಸಬಹುದು ಎಂದು ಖ್ವಾಜಾ ತಿಳಿಸಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
You seem to have an Ad Blocker on.
To continue reading, please turn it off or whitelist Udayavani.