![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 19, 2021, 5:00 AM IST
ಕೈಕಂಬ: ದೈವಾರಾಧನೆಗೆ ವಿಶೇಷ ಮಹತ್ವವಿದೆ. ಸಾಮೂಹಿಕ ಕಾರ್ಯವನ್ನು ಎಲ್ಲರೂ ಒಗ್ಗಟ್ಟಾಗಿ ಮಾಡಬೇಕೆಂಬ ಉದ್ದೇಶ ಇದರಲ್ಲಿದೆ. ದೈವಾರಾಧನೆಯಿಂದ ನಂಬಿಕೆ, ಶ್ರದ್ಧೆ, ಪರಂಪರೆ ಇಂದಿಗೂ ಉಳಿದಿದೆ. ಇದನ್ನು ಉಳಿಸಿ, ಬೆಳೆಸುವ ಪ್ರಾಮಾಣಿಕ ಪ್ರಯತ್ನ ಆಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಹೇಳಿದರು.
ಅವರು ಕೈಕಂಬ ಕಂದಾವರ ಪದವು ಶ್ರೀ ಕೊರ್ದಬ್ಬು ದೈವಸ್ಥಾನದಲ್ಲಿ ನಡೆಯುವ ಶ್ರೀ ಕೊರ್ದಬ್ಬು-ತನ್ನಿಮಾನಿಗ, ಪಂಜುರ್ಲಿ-ಗುಳಿಗ ದೈವಗಳ ಪುನರ್ ಪ್ರತಿಷ್ಠೆ, ರಾಹು ದೈವದ ನೂತನ ಪ್ರತಿಷ್ಠೆ ಮತ್ತು ಪಂಚವಿಂಶತಿ ಕುಂಭಾಭಿಷೇಕ, ವರ್ಷಾವಧಿ ನೇಮ ಇದರ ಪ್ರಯುಕ್ತ ಮೋನಮ್ಮ ಚಂದಪ್ಪ ಪೂಜಾರಿ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಎ. ಸದಾಶಿವ ಭಟ್ ಮಾತನಾಡಿ, ಕುಂಭಾಭಿಷೇಕದಿಂದ ಸಾನ್ನಿಧ್ಯ ವೃದ್ಧಿಯಾಗಿದೆ. ಕೊರ್ದಬ್ಬು ಊರನ್ನು ರಕ್ಷಿಸುವ ದೈವ. ಇದರಿಂದ ಎಲ್ಲರ ನಂಬಿಕೆ ಇಲ್ಲಿ ಸಾಕಾರಗೊಂಡಿದೆ ಎಂದರು.
ಕಂದಾವರ ಗ್ರಾ.ಪಂ. ಅಧ್ಯಕ್ಷ ಉಮೇಶ್ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.
ನಾಗೇಶ್ ಆಚಾರ್ಯ, ರಮೇಶ, ಸುಧೀರ್, ಶೈಲೇಶ್, ಲೋಕೇಶ್, ಕೆ. ರಾಜೀವ, ಕಿರಣ್ ಪಕ್ಕಳ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ದೈವದ ಕಲ ಈ ವಿಷಯದ ಬಗ್ಗೆ ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಪ್ರಾಂಶುಪಾಲ ರಘುರಾಜ್ ಕದ್ರಿ ಧಾರ್ಮಿಕ ಉಪನ್ಯಾಸ ನೀಡಿದರು.
ಶೆಡ್ಯೇ ಮಂಜುನಾಥ ಭಂಡಾರಿ, ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ, ತಾ.ಪಂ. ಸದಸ್ಯರಾದ ವಿಶ್ವನಾಥ ಶೆಟ್ಟಿ , ಸಚಿನ್ ಅಡಪ, ಗೀಷ್ಮಾ ಆಚಾರ್ಯ ಕಂದಾವರ, ಉದ್ಯಮಿ ಚಂದ್ರಹಾಸ ಟಿ. ಅಮೀನ್, ಕೈಕಂಬ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನೋದ್ ಮಾಡ, ಕೋಶಾಧಿಕಾರಿ ಶ್ರೀಧರ್ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ರಾಜೀವ, ಆಡಳಿತ ಸಮಿತಿ ಅಧ್ಯಕ್ಷ ಕೆ. ಹರೀಶ್, ಹೊರೆಕಾಣಿಕೆ ಸಮಿತಿ ಸಂಚಾಲಕ ಹರೀಶ್ ಮಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪಂಚವಿಂಶತಿ ಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಕಿರಣ್ ಪಕ್ಕಳ ಪೆರ್ಮಂಕಿಗುತ್ತು ಸ್ವಾಗತಿಸಿದರು. ತ್ರಿಶೂಲಾ, ಕುಮಾರಚಂದ್ರ, ತೇಜಸ್ವಿನಿ, ಶ್ರುತಿ, ಮಮತಾ ಎಸ್. ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು.
ಸತೀಶ್ ಶೆಟ್ಟಿ , ಮಹೇಶ್ ಶೆಟ್ಟಿ ಹಾಗೂ ಜಯಕರ ಶೆಟ್ಟಿ ನಿರೂಪಿಸಿದರು.
ಸಮ್ಮಾನ
ಈ ಸಂದರ್ಭ ಉದ್ಯಮಿ, ದಾನಿ ರಾಜೇಂದ್ರ ಹೆಗ್ಡೆ, ಸಿವಿಲ್ ಎಂಜಿನಿಯರ್ ರಿತೀಶ ದಾಸ್, ನಾಗಸ್ವರ ವಾದಕ ಎಂ. ಭಾಸ್ಕರ, ಪಾತ್ರಿ ಜಯ, ರುಕ್ಮಯ ನಲಿಕೆ ಬುಡೋಲಿ ಅವರನ್ನು ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.