ಬೀದಿಗಿಳಿದ ಅನ್ನದಾತರು : 80ರ ದಶಕದ ರೈತ ಚಳವಳಿ ನೆನಪಿಸಿದ ಟ್ರ್ಯಾಕ್ಟರ್ ಜಾಥಾ
Team Udayavani, Jan 10, 2021, 11:25 AM IST
ಧಾರವಾಡ: ದೆಹಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಹೋರಾಟ ನಿರತ ರೈತರನ್ನು ಬೆಂಬಲಿಸಿ ಹಾಗೂ ರೈತ ಹೋರಾಟದಲ್ಲಿ ಅಸುನೀಗಿದ 60 ಅನ್ನದಾತರ ಸ್ಮರಣಾರ್ಥ ರೈತ ಹಿತರಕ್ಷಣಾ ಪರಿವಾರದಿಂದ ನಗರದಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಯಿತು.
ನೂರಾರು ರೈತರು ಟ್ರ್ಯಾಕ್ಟರ್ ಸಮೇತ ರಸ್ತೆಗಿಳಿದರೆ, ಅವರಿಗೆ ಬೆಂಬಲ ಸೂಚಿಸಿ ವಿವಿಧ ರೈತ ಸಂಘಟನೆಗಳ ಹೋರಾಟಗಾರರು, ರೈತ ಚಿಂತಕರು, ಕಾಂಗ್ರೆಸ್, ಜೆಡಿಎಸ್ ಮತ್ತು ಎಡಪಂಥೀಯ ಸಂಘಟನೆಗಳ ಮುಖಂಡರು ಸಾಥ್ ನೀಡಿದರು. ಕಲಾಭವನದಿಂದ
ಆರಂಭಗೊಂಡ ಟ್ರ್ಯಾಕ್ಟರ್ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. 1980-90 ದಶಕದಲ್ಲಿನ ರೈತರ ಹೋರಾಟವನ್ನು ನೆನಪಿಸಿತು.
ಜಾಥಾ ವೇಳೆ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯಬೇಕು ಎಂದು ಘೋಷಣೆ ಕೂಗಿದರಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತನ್ನ ನಿಲುವಿನಿಂದ ತಕ್ಷಣ ಹಿಂದಕ್ಕೆ ಸರಿಯಬೇಕು. ಮೊಂಡು ಹಟಕ್ಕೆ ಬಿದ್ದಿರುವುದು ನೋವಿನ ಸಂಗತಿ. ದೇಶ ಮೊದಲು ಎನ್ನುವರು ನಡೆದುಕೊಳ್ಳುವ ಪರಿ ಇದಲ್ಲ. ಅನ್ನದಾತ ಇದ್ದರೆ ದೇಶ. ದೇಶಕ್ಕೆ ಅನ್ನ ನೀಡುವವರೇ ಇಲ್ಲ ಎಂದರೆ ದೇಶ ಎಲ್ಲಿರುತ್ತದೆ ಎಂಬುದನ್ನು ಆಳುವವರು ಅರಿತುಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ:ಗಬ್ಬೂರು ಎಸ್‌ಟಿಪಿಗೆ ತ್ಯಾಜ್ಯ ನೀರಿನ ಕೊರತೆ : ಯುಜಿಡಿ ಪೈಪ್‌ಲೈನ್ ಸೋರಿಕೆ-ಹರಿವು ಇಳಿಕೆ
ಹಿರಿಯ ನ್ಯಾಯವಾದಿ ಪಿ.ಎಚ್. ನೀರಲಕೇರಿ ಮಾತನಾಡಿ, ದೆಹಲಿಯಲ್ಲಿ 46 ದಿನಗಳಿಂದ ರೈತರು ಕೊರೆವ ಚಳಿ ಮತ್ತು ಮಳೆಯಲ್ಲಿ ಹೆಂಡತಿ-ಮಕ್ಕಳನ್ನು ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರದ ಬಿಜೆಪಿ ಸರಕಾರ ಕ್ಯಾರೇ ಎನ್ನದಿರುವುದು ದುರಂತದ ಸಂಗತಿಯಾಗಿದೆ ಎಂದು ಕಿಡಿಕಾರಿದರು.
ಕೆಲವೇ ಕೆಲವು ಕಂಪನಿಗಳ ಪರ ನಿಂತಿರುವ ಮೋದಿ ಸರಕಾರದ ನಡೆ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನವಿರೋಧಿಯಾಗಿದೆ. ಇದು ದೇಶದ ಬೆಳವಣಿಗೆ ದೃಷ್ಟಿಯಿಂದ ಸರಿಯಲ್ಲ ಎಂದರು.
ಮಾಜಿ ಸಂಸದ ಪ್ರೊ| ಐ.ಜಿ. ಸನದಿ, ಗುರುರಾಜ ಹುಣಸಿಮರದ, ಗಂಗಾಧರ ಪಾಟೀಲ ಕುಲಕರ್ಣಿ, ಶಿವಾನಂದ ಹೊಳೆಹಡಗಗಲಿ, ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಸಿದ್ದಪ್ಪ ಕಂಬಾರ, ಉಳವಪ್ಪ ಒಡೆಯರ, ಭೀಮಪ್ಪ ಕಾಸಾಯಿ, ಅಶ್ರಫ ಅಲಿ, ಬಾಬಾಜಾನ ಮುಧೋಳ, ಕಿರಣ ಮೂಗಬಸವ, ಪ್ರಕಾಶಗೌಡ ಪಾಟೀಲ, ಮುತ್ತಣ್ಣ ಶಿವಳ್ಳಿ, ಸದಾನಂದ ಕುಲಕರ್ಣಿ, ನಿಂಗರಾಜ ಹಡಪದ, ಬಸವರಾಜ ಮಲಕಾರಿ, ಬಾಳಪ್ಪ ಅಬ್ಟಾರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.