ಬೆಳೆಗಾರ-ಗ್ರಾಹಕ ಮಧ್ಯೆ ಸಂಪರ್ಕ ಕಲ್ಪಿಸುತ್ತಿರುವ ರೈತ ಸೇತು

ಉದಯವಾಣಿ ರೈತ ಸೇತು

Team Udayavani, Apr 10, 2020, 5:45 AM IST

ಬೆಳೆಗಾರ-ಗ್ರಾಹಕ ಮಧ್ಯೆ ಸಂಪರ್ಕ ಕಲ್ಪಿಸುತ್ತಿರುವ ರೈತ ಸೇತು

ಕೋಟ: ಬೆಳೆಗಾರರು ಹಾಗೂ ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಉದಯವಾಣಿ ಆರಂಭಿ ಸಿದ ರೈತಸೇತು ಅಂಕಣ ನೇರ ಮಾರುಕಟ್ಟೆ ಕಲ್ಪಿಸಲು ಸಹಕಾರಿಯಾಗುತ್ತಿದೆ.

ಪತ್ರಿಕೆಯಲ್ಲಿ ಪ್ರಕಟವಾಗುವ ವಿವರವನ್ನು ಗಮನಿಸಿ ಹಲವಾರು ಮಂದಿ ಕರೆಮಾಡಿ ರೈತರಿಂದ ಖರೀದಿಸು ತ್ತಿದ್ದಾರೆ.
ಸಾಲಿಗ್ರಾಮದ ಮಂಜುನಾಥ ಹೊಳ್ಳರವರು ಬೆಳೆದ ಅಲಸಂಡೆಗೆ ಮಾರುಕಟ್ಟೆ ಇಲ್ಲದೆ ರೈತ ಸೇತುವಿಗೆ ವಿವರ ನೀಡಿದ್ದರು. ಇದೀಗ ಇವರು ಇಲ್ಲಿನ ರಥಬೀದಿಯಲ್ಲಿ ನೇರ ಮಾರಾಟ ಮಾಡುತ್ತಿದ್ದು, ಪತ್ರಿಕೆಯಲ್ಲಿನ ವಿವರವನ್ನು ಗಮನಿಸಿ ಸಾಕಷ್ಟು ಮಂದಿ ಇವರಿಗೆ ಕರೆ ಮಾಡಿ ಖರೀದಿ ನಡೆಸುತ್ತಿದ್ದಾರೆ.

ಅದೇ ರೀತಿ ಕಲ್ಲಂಗಡಿ ಬೆಳೆಗಳ ಕುರಿತು ಪ್ರಕಟವಾದ ವಿವರವನ್ನು ಗಮ ನಿಸಿ ಸಾಕಷ್ಟು ಮಂದಿ ಗದ್ದೆಗೆ ನೇರ ಭೇಟಿ ನೀಡಿ 5-10ಕೆ.ಜಿ. ಹಣ್ಣನ್ನು ಖರೀದಿಸುತ್ತಿದ್ದಾರೆ. ಹಸಿಮೆಣಸು, ತೆಂಗಿನಕಾಯಿ, ಬಾಳೆ, ನೆಲಗಡಲೆ, ಅನಾನಸುವಿಗೂ ಸಹ ಗ್ರಾಹಕರಿಂದ ವಿಚಾರಣೆಗಳು ಬಂದಿವೆ,.

ಉಪ್ಲಾಡಿಯ 30 ಟನ್‌
ಕಲ್ಲಂಗಡಿ ಖಾಲಿ
ಪ್ರಗತಿಪರ ಕೃಷಿಕರಾದ ಸದಾನಂದ ಪೂಜಾರಿ ಮತ್ತು ರಮೇಶ್‌ ಪೂಜಾರಿ ಯವರು ಉಪ್ಲಾಡಿಯಲ್ಲಿ ಬೆಳೆದ ಸುಮಾರು 30 ಟನ್‌ ಕಲ್ಲಂಗಡಿ ಸಂಪೂರ್ಣವಾಗಿ ಮಾರಾಟವಾಗಿದೆ. ಎ.7ರಂದು ರೈತಸೇತು ಅಂಕಣ ದಲ್ಲಿ ಇವರ ವಿವರ ಪ್ರಕಟವಾಗಿತ್ತು. ಅನಂತರ ಜಿಲ್ಲೆಯ ವಿವಿಧ ಭಾಗ ಗಳಿಂದ ವರ್ತಕರು ಇವರನ್ನು ಸಂಪರ್ಕಿಸಿ, ಎರಡೇ ದಿನದಲ್ಲಿ ಕಲ್ಲಂಗಡಿ ಸಂರ್ಪೂವಾಗಿ ಉತ್ತಮ ದರಕ್ಕೆ ಮಾರಾಟವಾಗಿದೆ. ಜತೆಗೆ ಇನ್ನೂ 4-5 ಟನ್‌ಗೆ ಬೇಡಿಕೆ ಬಂದಿದೆ.ಎರಡನೇ ಹಂತದ ಕಟಾವಿನಲ್ಲಿ ಅವ‌ರು ಪೂರೈಸುವುದಾಗಿ ತಿಳಿಸಿದ್ದಾರೆ.

ಕೊರವಡಿ ಬೆಳೆಗಾರನ ನೆಲಗಡಲೆಗೆ ಬೇಡಿಕೆ ಬಂತು
ತೆಕ್ಕಟ್ಟೆ: ಕುಂಭಾಸಿ, ಕೊರವಡಿ,ಕೊಮೆ, ತೆಕ್ಕಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ನೂರಾರು ರೈತರು ಬೆಳೆದ ಟನ್‌ಗಟ್ಟಲೆ ತರಕಾರಿ ನೇರವಾಗಿ ಕುಂದಾಪುರ ಸಂತೆಯಲ್ಲಿ ವಿಲೇವಾರಿ ಯಾಗಿ ಉತ್ತಮ ಬೆಲೆ ರೈತರಿಗೆ ದೊರಕು ತ್ತಿತ್ತು. ಈ ಬಾರಿ ಕುಂಬಳಕಾಯಿ ಹಾಗೂ ನೆಲಗಡಲೆ ಬೆಳೆದಿದ್ದ ಕುಂದಾಪುರ ತಾಲೂ ಕಿನ ಕೊರವಡಿಯ ಕೃಷಿಕ ರಾಜೇಶ್‌ ಕಾಂಚನ್‌ ಅವರಿಗೆ ಉದಯವಾಣಿಯ ರೈತ ಸೇತು ಅಂಕಣದಿಂದ ಅನುಕೂಲ ವಾಗಿದೆ.ಕೋವಿಡ್‌0-19 ಲಾಕ್‌ಡೌನ್‌ ನಿಂದಾಗಿ 21 ದಿನಗಳ ಕಾಲ ದೇಶವೇ ಸ್ತಬ್ಧಗೊಂಡಿದ್ದು,ಯಾವುದೇ ಶುಭ ಸಮಾ ರಂಭ ಹಾಗೂ ಜಾತ್ರೆಗಳಿಲ್ಲದೇ ಸುಮಾರು 5 ಕ್ವಿಂಟಾಲ್‌ ಕುಂಬಳಕಾಯಿ ಮತ್ತು 20 ಕ್ವಿಂಟಾಲ್‌ ಒಣಕಡಲೆ ಹಾಳಾಗುವ ಬದಲು ಬಂದ ದರಕ್ಕೆ ನೇರವಾಗಿ ಗ್ರಾಹಕರಿಗೆ ನೀಡಲು ನಿರ್ಧರಿಸಿದ್ದರು. ಈ ಸಂಬಂಧ ಉದಯವಾಣಿಯ ರೈತಸೇತು ಅಂಕಣದಲ್ಲಿ ಪ್ರಕಟವಾದ ಮಾಹಿತಿಯನ್ನು ಕಂಡ ಚಿಕ್ಕಮಗಳೂರಿನ ನೆಲಗಡಲೆ ವ್ಯಾಪಾರಿ ಲೋಕೇಶ್‌ ಅವರು 20 ಕ್ವಿಂಟಾಲ್‌ ಒಣ ನೆಲಗಡಲೆ ಯ ಬಗ್ಗೆ ವಿಚಾರಿಸಿದ್ದಾರೆ. ಅವರ ಅಗತ್ಯ ಮತ್ತು ದರ ಕುರಿತು ಚರ್ಚೆ ನಡೆಯುತ್ತಿದೆ.

ನಿರಂತರ ಪ್ರಕಟವಾಗಲಿ
ನಾನು ಬೆಳೆದ 5 ಕ್ವಿಂಟಾಲ್‌ ಕುಂಬಳಕಾಯಿ ಹಾಗೂ 20 ಕ್ವಿಂಟಾಲ್‌ ಒಣ ನೆಲಗಡಲೆಗೆ ಲಾಕ್‌ಡೌನ್‌ನ ಅನಂತರ ಮಾರುಕಟ್ಟೆ ಸಿಕ್ಕಿರಲಿಲ್ಲ . ಉದಯವಾಣಿಯ ರೈತ ಸೇತುವಿನಲ್ಲಿ ವಿವರ ಪ್ರಕಟವಾದ ಮೇಲೆ ಗ್ರಾಹಕರು ವಿಚಾರಿಸುತ್ತಿದ್ದಾರೆ. ಕೆಲವೊಂದು ಚರ್ಚೆಯ ಹಂತದಲ್ಲಿದೆ. ಕೊನೇಪಕ್ಷ ನಾವು ಬೆಳೆದ ಬೆಳೆ ಹಲವಾರು ಮಂದಿಗೆ ತಿಳಿಯಿತು. ಇಂಥ ರೈತ ಸ್ನೇಹಿ ಅಂಕಣಗಳು ನಿರಂತರವಾಗಿ ಪ್ರಕಟವಾಗುತ್ತಿದ್ದರೆ ನಮ್ಮಂಥ ಗ್ರಾಮೀಣ ರೈತರಿಗೆ ಅನುಕೂಲವಾಗಲಿದೆ
– ರಾಜೇಶ್‌ ಕಾಂಚನ್‌ ನೆಲಗಡಲೆ ಬೆಳೆಗಾರ

ನಿಮ್ಮ ಬೆಳೆ ಮಾಹಿತಿ ನೀಡಿ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೇ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಾಪ್‌ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.

ವಾಟ್ಸಪ್‌ ಸಂಖ್ಯೆ 76187 74529

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.