ಕೃಷಿಕರಲ್ಲಿ ಆತಂಕ ಮೂಡಿಸಿದ ವರ್ಷದ ಮೊದಲ ಮಳೆ
Team Udayavani, Jan 4, 2021, 2:03 PM IST
ಮಂಗಳೂರು/ಉಡುಪಿ/ಕಾಸರಗೋಡು: ಕರಾವಳಿಯ ವಿವಿಧೆಡೆ ರವಿವಾರ ಸಂಜೆ ವೇಳೆ ಗಾಳಿ, ಗುಡುಗು ಸಹಿತ ಅಕಾಲಿಕ ಮಳೆಯಾಗಿದೆ.
ದ.ಕ. ಜಿಲ್ಲೆಯಾದ್ಯಂತ ಬೆಳಗ್ಗಿನ ವೇಳೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಸಂಜೆ ವೇಳೆ ದಿಢೀರ್ ಆಗಿ ಮಳೆ ಸುರಿಯಿತು. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೆಳಗ್ಗೆ ಮತ್ತು ರಾತ್ರಿಯ ವೇಳೆ ಚಳಿ ಆರಂಭವಾಗಿದೆ. ಬೆಳಗ್ಗೆ ಶೀತ ಗಾಳಿ ಬೀಸುತ್ತಿದೆ.
ಜಿಲ್ಲೆಯ ಮರ್ಕಂಜ, ಮಾಪಲುತೋಟ, ಗುತ್ತಿಗಾರು, ಮಡಪ್ಪಾಡಿ, ಅರಂತೋಡು, ಸಂಪಾಜೆ, ತೊಡಿಕಾನ, ಉಬರಡ್ಕ, ಆಲೆಟ್ಟಿ, ಎಲಿಮಲೆ, ಕಡಬ, ನೂಜಿಬಾಳ್ತಿಲ, ಶಿಶಿಲ, ಅರಸಿನಮಕ್ಕಿ, ಸುಬ್ರಹ್ಮಣ್ಯ, ಪಂಜಿಕಲ್ಲು, ಕೊçಲ, ಬೆಳ್ತಂಗಡಿ, ಚಾರ್ಮಾಡಿ, ಉಜಿರೆ, ಧರ್ಮಸ್ಥಳ, ಮುಂಡಾಜೆ, ಸವಣೂರು, ಮಾಡಾವು, ಪಾಲ್ತಾಡಿ, ಕಾಣಿಯೂರು, ಪುತ್ತೂರು, ಉಪ್ಪಿನಂಗಡಿ, ವೇಣೂರು, ಬಳ್ಳಮಂಜ, ಬಂಟ್ವಾಳ ಸೇರಿದಂತೆ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಉಡುಪಿ, ಮಣಿಪಾಲ ಪರಿಸರದಲ್ಲಿ, ಕಾಸರಗೋಡು ಜಿಲ್ಲೆಯ ವಿವಿಧೆಡೆಯೂ ಸಾಧಾರಣ ಮಳೆಯಾಗಿದೆ.
ಇದನ್ನೂ ಓದಿ:ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ರವಿವಾರ ಮದುವೆಯೋ ಮದುವೆ…!ಕಟೀಲಿನಲ್ಲಿ 35 ಜೋಡಿ ವಿವಾಹ
ಮಳೆ-ಬಿಸಿಲು: ಬೆಳೆಗಳಿಗೆ ಹಾನಿ
ಕರಾವಳಿಯ ಪ್ರಮುಖ ಬೆಳೆಯಾದ ಅಡಿಕೆಯ ಹಿಂಗಾರದ ಮೇಲೆ ಮಳೆ ಮತ್ತು ಬಿಸಿಲು ಪರಿಣಾಮ ಬೀರುತ್ತದೆ. ಬಿಸಿಲಿನ ಶಾಖಕ್ಕೆ ಹಿಂಗಾರ ಒಣಗುತ್ತ¤ದೆ. ಫಸಲು ಕಡಿಮೆಯಾಗುತ್ತದೆ. ಮತ್ತೂಂದೆಡೆ ಮಳೆ ಮತ್ತು ಬಿಸಿಲು ಪರಿಣಾಮ ಹಿಂಗಾರದಲ್ಲಿ ಶೇಖರಣೆಯಾದ ನೀರು ಬಿಸಿಯಾಗಿ ಹಿಂಗಾರ ಬಾಡಿ ಹೋಗುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಹಲಸು, ಗೇರು, ಮಾವು ಹೂವು ಬಿಡುವ ಕಾಲ. ಈ ವೇಳೆ ಉಷ್ಣಾಂಶ ಏರಿಕೆ, ಅಕಾಲಿಕ ಮಳೆಯಿಂದಾಗಿ ಹೂವು ಬಾಡಿ, ಉದುರಿ ಹೋಗುವ ಸಾಧ್ಯತೆಯೂ ಎದುರಾಗಿದೆ ಎನ್ನುತ್ತಾರೆ ರೈತರು.
ಅಕಾಲಿಕ ಮಳೆ ಅಡಿಕೆ ಒಣಗಿಸಲೂ ಅಡ್ಡಿಯಾಗುತ್ತದೆ. ಒಮ್ಮೆ ಅಂಗಳ ಒದ್ದೆಯಾದರೆ ಒಣಗುವುದಕ್ಕೂ ಹೆಚ್ಚಿನ ಸಮಯ ಬೇಕು. ಒಣಗಿದ ಅಡಿಕೆಗೆ ಸ್ವಲ್ಪ ನೀರು ಬಿದ್ದರೂ ಗುಣಮಟ್ಟ ಕುಸಿಯುತ್ತದೆ.
ಏರುತ್ತಿದೆ ಉಷ್ಣಾಂಶ
ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶ ವಾಡಿಕೆಗಿಂತ ಏರಿಕೆಯಾಗುತ್ತಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಪಣಂಬೂರಿನಲ್ಲಿ ರವಿವಾರ 34.9 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಉಷ್ಣಾಂಶ ಹೆಚ್ಚಿತ್ತು. ಅದೇ ರೀತಿ 21.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಐಎಂಡಿ ಮಾಹಿತಿಯಂತೆ ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಮೋಡ, ಚಳಿಯಿಂದ ಕೂಡಿದ ವಾತಾವರಣ ಇರಲಿದ್ದು. ಕೆಲವು ಕಡೆ ಸಾಧಾರಣ ಮಳೆ ಯಾಗುವ ಸಾಧ್ಯತೆ ಇದೆ.
ಬೆಳ್ತಂಗಡಿ: ತಾಸಿಗೂ ಹೆಚ್ಚು ಕಾಲ ಮಳೆ
ಬೆಳ್ತಂಗಡಿ: ತಾಲೂಕಿನಾದ್ಯಂತ ಬಹುತೇಕ ಕಡೆಗಳಲ್ಲಿ ರವಿವಾರ ಸಂಜೆ ಭಾರೀ ಗಾಳಿ, ಗಡುಗು, ಮಿಂಚು ಸಹಿತ ಮಳೆಯಾದ ಪರಿಣಾಮ ಕೃಷಿ ಚಟುವಟಿಕೆ, ಮದುವೆ, ಸಭೆ ಸಮಾರಂಭಗಳಿಗೆ ಅಡೆತಡೆಯಾಗಿದೆ.
ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿದ್ದು, ಸಂಜೆಯ 6 ಗಂಟೆ ಬಳಿಕ ಇದ್ದಕ್ಕಿದ್ದಂತೆ ಚಾರ್ಮಾಡಿ ಭಾಗದಿಂದ ಆರಂಭಗೊಂಡ ಗಾಳಿ, ಗುಡುಗು ಸಹಿತ ಮಳೆ ಮುಂಡಾಜೆ, ಉಜಿರೆ, ಕಕ್ಕಿಂಜೆ, ಧರ್ಮಸ್ಥಳ, ಶಿಶಿಲ, ಬೆಳಾಲು, ನೆರಿಯ, ಅರಸಿನಮಕ್ಕಿ, ವೇಣೂರು ಭಾಗದಲ್ಲಿ, ಪಣಕಜೆ, ಮಡಂತ್ಯಾರು ಪರಿಸರದಲ್ಲಿ, ಕುಪ್ಪೆಟ್ಟಿ, ಪದು¾ಂಜ ಮೊದಲಾದೆಡೆ ಗಾಳಿ, ಸಿಡಿಲು ಸಹಿತ ಸುಮಾರು ಒಂದು ತಾಸು ಸುರಿಯಿತು.
ರವಿವಾರ ಅತೀ ಹೆಚ್ಚು ಮದುವೆ, ಮದರಂಗಿ, ನೇಮ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿದ್ದು, ಮಳೆಯಿಂದಾಗಿ ಮನೆ ಮಂದಿ, ನೆಂಟರು ಪರದಾಡುವಂತಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.