Agri: ರೈತರ ಸಾಲ ಮನ್ನಾ ಮಾಡಿ: ಅಶೋಕ್
ಸಾಲ ಮನ್ನಾಕ್ಕೆ ಆಗ್ರಹಿಸಿ ಅಧಿವೇಶನದಲ್ಲಿ ನಿಲುವಳಿ
Team Udayavani, Nov 22, 2023, 12:24 AM IST
ಕಲಬುರಗಿ: ರಾಜ್ಯದಲ್ಲಿ ಮುಂಗಾರು-ಹಿಂಗಾರು ಎರಡೂ ಸಂಪೂರ್ಣ ಕೈ ಕೊಟ್ಟಿದ್ದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ರಾಜ್ಯ ಸರಕಾರ ಕೂಡಲೇ ಸಾಲ ಮನ್ನಾ ಮಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು.
ವಿಪಕ್ಷ ನಾಯಕರಾದ ಅನಂತರ ಕಲ್ಯಾಣ ಕರ್ನಾಟಕದ ತೊಗರಿ ನಾಡು ಕಲಬುರಗಿಯಿಂದ ಬರ ಅಧ್ಯಯನ ಆರಂಭಿಸಿ, ವಾಸ್ತವ ಸ್ಥಿತಿಗತಿ ಅವಲೋಕಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹಿಂದೆ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಆಡಳಿತದ ಅವ ಧಿಯಲ್ಲಿ ಬರ ಮತ್ತು ಪ್ರವಾಹದಿಂದ ಆದ ಹಾನಿಗೆ ತಿಂಗಳೊಳಗೆ ರಾಜ್ಯ ಸರಕಾರದಿಂದ ಮೊದಲು ಪರಿಹಾರ ನೀಡಿ ಅನಂತರ ಕೇಂದ್ರಕ್ಕೆ ಸಹಾಯದ ಪರಿಹಾರ ಕೇಳಲಾಗಿದೆ. ಬೇಕಿದ್ದರೆ ಸಿಎಂ-ಡಿಸಿಎಂ ದಾಖಲೆಗಳನ್ನು ನೋಡಲಿ ಎಂದು ಸವಾಲು ಹಾಕಿದರು.
ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾವ
ರಾಜ್ಯದ ಬರಗಾಲ ಪರಿಸ್ಥಿತಿ, ರೈತರಿಗೆ ಸಮರ್ಪಕ ಪರಿಹಾರ ದೊರಕುವ ಮತ್ತು ಸಾಲ ಮನ್ನಾ ಹಾಗೂ ರಾಜ್ಯ ಸರಕಾರದ ವೈಫಲ್ಯಗಳನ್ನು ಬೆಳಗಾವಿ ಅ ಧಿವೇಶನದಲ್ಲಿ ನಿಲುವಳಿ ಮಂಡಿಸಲಾಗುವುದು. ಸರಕಾರದ ವಿರುದ್ಧ ಪ್ರಬಲವಾಗಿ ಹೋರಾಡಲು ಸರಕಾರದರೇ ಆಸ್ತ್ರಗಳನ್ನು ನೀಡಿದ್ದಾರೆ. ಸಮರ್ಪಕ ಪರಿಹಾರ ದೊರಕುವವರೆಗೂ ತಾವು ಹೋರಾಟದಿಂದ ವಿಶ್ರಮಿಸುವುದಿಲ್ಲ ಎಂದರು.
ಪಹಣಿ ದರ ಹೆಚ್ಚಳಕ್ಕೆ ಆಕ್ರೋಶ
ಜಿಲ್ಲೆಯ ಕಡಗಂಚಿ ಗ್ರಾಮದಲ್ಲಿ ಬರಗಾಲ ವೀಕ್ಷಿಸಿ ರೈತರೊಂದಿಗೆ ಸಂವಾದ ನಡೆಸಿದ ವೇಳೆ ರೈತರೊಬ್ಬರು ಸರಕಾರ ರಾತ್ರೋರಾತ್ರಿ ಪಹಣಿ ದರ ಹೆಚ್ಚಿಸಿದ ಬಗ್ಗೆ ಅಲವತ್ತುಕೊಂಡರು. ಬರಗಾಲದಿಂದ ತತ್ತರಿಸಿರುವ ರೈತರಿಗೆ ಗಾಯದ ಮೇಲೆ ಗೆರೆ ಎಳೆದಿರುವಂತೆ ಪಹಣಿ ದರ 10 ರೂ. ಇದ್ದಿರುವುದನ್ನು ಒಮ್ಮೆಲೆ 25 ರೂ.ಗೆ ಹೆಚ್ಚಳ ಮಾಡಲಾಗಿದೆ. ಪಹಣಿ ದರ ಹೆಚ್ಚಳ ವಾಪಸ್ ಪಡೆಯಬೇಕೆಂದು ವಿಪಕ್ಷ ನಾಯಕ ಅಶೋಕ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.