ಯಡ್ರಾಮಿ : ರೈತ ಸಂಘಟನೆಯಿಂದ ಅಹೋರಾತ್ರಿ ಪ್ರತಿಭಟನೆ ; ಹಲವರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
Team Udayavani, Dec 21, 2021, 7:49 PM IST
ಯಡ್ರಾಮಿ : ಕಲಬುರಗಿ ಜಿಲ್ಲೆಯ ತಾಲೂಕುಗಳಿಗೆ ನೀಡಿದ ಬೆಳೆ ನಷ್ಟ ಪರಿಹಾರದಿಂದ ರೈತರು ವಂಚಿತರಾಗಿದ್ದು ಪರಿಣಾಮ ತಾಲೂಕಿನಲ್ಲಿ ವಿವಿಧ ಸಂಘಟನೆಗಳಿಂದ ಮಂಗಳವಾರ ಬೆಳಗ್ಗೆಯಿಂದಲೇ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ತಾಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ ನಷ್ಟವಾದ ತೊಗರಿ, ಹತ್ತಿ, ಸೂರ್ಯಪಾನ ಬೆಳೆಗಳ ನಿಖರ ಮಾಹಿತಿ ಇಲ್ಲಿನ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ನೀಡದೆ ಇರುವುದರಿಂದ ಬೆಳೆ ನಷ್ಟ ಪರಿಹಾರದ ಸೌಲಭ್ಯದಿಂದ ತಾಲೂಕಿನ ರೈತರು ವಂಚಿತರಾಗಿದ್ದಾರೆಂದು ಆರೋಪಿಸಿದ್ದಾರೆ.
ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿದ ಕರವೇ ಹಾಗೂ ರೈತ ಸಂಘಟನೆಗಳ ನೂರಾರು ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿದ್ದಾರೆ. ಸಂಜೆಯ ಹೊತ್ತಿಗೆ ಕೆಲ ಕಾರ್ಯಕರ್ತರು ಅಸ್ವಸ್ಥರಾಗಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಗುರುವಿನಲ್ಲಿ ಶಕ್ತಿ ಮತ್ತು ಭಕ್ತರಲ್ಲಿ ಭಕ್ತಿ ಇದ್ದರೆ ಮಾತ್ರ ಮಠಗಳು ಅಭಿವೃದ್ಧಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.