ಫೆ. 17-19: ವಂಡಾರು ಕೊಕ್ಕನಬೈಲು ದೇಗುಲ ಲೋಕಾರ್ಪಣೆ, ನಾಗಮಂಡಲ
ಬಾಯರಿ ಕುಟುಂಬಸ್ಥರ ಮೂಲ ನಾಗ ಸಾನ್ನಿಧ್ಯ
Team Udayavani, Feb 15, 2024, 11:51 PM IST
ಕೋಟ: ಬ್ರಹ್ಮಾವರ ತಾಲೂಕಿನ ಕೊಕ್ಕನಬೈಲು ವಂಡಾರಿನಲ್ಲಿರುವ ಬಾಯರಿ ಕುಟುಂಬಸ್ಥರ ಮೂಲ ನಾಗದೇವರ ಸಾನ್ನಿಧ್ಯದಲ್ಲಿ ಕಮಲಪುಷ್ಪ ಆಕಾರದ ಶಿಲಾಮಯ, ವಿಶೇಷ ಕಾಷ್ಠಶಿಲ್ಪದ ದೇಗುಲವನ್ನು ವಂಡಾರು ರಮೇಶ್ ಬಾಯರಿ ಅವರ ನೇತೃತ್ವದಲ್ಲಿ ನಿರ್ಮಿಸಿದ್ದು ಫೆ. 17ರಿಂದ 19ರ ವರೆಗೆ ಲೋಕಾರ್ಪಣೆ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವ ಜರಗಲಿವೆ.
ಫೆ. 17ರಂದು ಬೆಳಗ್ಗಿನಿಂದ ರಾತ್ರಿ ತನಕ ವಿವಿಧ ಹೋಮಗಳು, ಕಲಶಸ್ಥಾಪನೆ, ಬಿಂಬಶುದ್ಧಿ ಶಯ್ನಾಕಲ್ಪಾರಾಧನೆ ಜರಗಲಿದೆ. ಫೆ. 18ರಂದು ಬೆಳಗ್ಗೆ ಶ್ರೀನಾಗದೇವರ ಪುನಃ ಪ್ರತಿಷ್ಠಾ ಮಹೋತ್ಸವ, ಹೋಮಗಳು ಜರಗಲಿದ್ದು, ಸಂಜೆ 5.30ಕ್ಕೆ ಶೃಂಗೇರಿ ಜಗದ್ಗುರುಗಳಾದ ಕಿರಿಯ ಯತಿ ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿ ಆಗಮನ, ಪ್ರಾಯಶ್ಚಿತ ಆಶ್ಲೇಷಾ ಬಲಿ, ಜಗದ್ಗುರುಗಳಿಂದ ಚಂದ್ರಮೌಳೀಶ್ವರ ದೇವರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ. 19ರಂದು ಬೆಳಗ್ಗೆ ಜಗದ್ಗುರುಗಳಿಂದ ಶ್ರೀದೇವರಿಗೆ ಕುಂಭಾಭಿಷೇಕ ಪೂರ್ವಕ ಮಹಾಪೂಜೆ, ಶಿಖರಾಭಿಷೇಕ, ಪಾದಪೂಜೆ, ಭಿನ್ನವತ್ತಳೆ ಸಮರ್ಪಣೆ, ಆಶೀರ್ವಚನ, ಫಲಮಂತ್ರಾಕ್ಷತೆ ಮತ್ತು ಮಹಾ ಅನ್ನಸಂತರ್ಪಣೆ, ಹಾಲಿಟ್ಟು ಸೇವೆ, ಸಂಜೆ 5.30ರಿಂದ ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ ನಡೆಯಲಿದ್ದು, ಅನಂತರ ಪ್ರಸಾದ ವಿತರಣೆ, ಆಶೀರ್ವಚನ, ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ಫೆ. 19ರಂದು ಅಪರಾಹ್ನ ಪಂಡಿತ್ ಡಾ| ಪ್ರವೀಣ ಗೋಡ್ಕಿಂಡಿ ಅವರಿಂದ ಕೊಳಲು ವಾದನವಿದೆ ಎಂದು ದೇವಸ್ಥಾನದ ಮುಖ್ಯಸ್ಥ ವಂಡಾರು ರಮೇಶ್ ಬಾಯರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.