ರಸಗೊಬ್ಬರ-ಕ್ರಿಮಿನಾಶಕ ಕೊರತೆ ಆತಂಕ
Team Udayavani, Apr 8, 2020, 5:59 AM IST
ಹುಬ್ಬಳ್ಳಿ: ಲಾಕ್‌ಡೌನ್ ಒಂದೆಡೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಕುತ್ತು ತಂದಿದ್ದರೆ ಇನ್ನೊಂದೆಡೆ ಮುಂಗಾರು ಹಂಗಾಮಿಗೆ ರಸಗೊಬ್ಬರ ಮತ್ತು ಕ್ರಿಮಿನಾಶಕದ ಕೊರತೆ ಎದುರಾಗುವ ಆತಂಕ ಎದುರಾಗಿದೆ.
ಸದ್ಯಕ್ಕೆ ರಸಗೊಬ್ಬರ ಕೊರತೆಯಿಲ್ಲ ಎಂದು ಹೇಳಲಾಗುತ್ತಿದ್ದರೂ ವಿದೇಶ ಗಳಿಂದ ಆಮದಾಗುವ ಪೊಟ್ಯಾಷ್ ಸಹಿತ ಅಗತ್ಯ ಕಚ್ಚಾಸಾಮಗ್ರಿಗಳು ದೇಶಕ್ಕೆ ತಲುಪುವುದು ವಿಳಂಬವಾಗಲಿದೆ. ಇನ್ನು ಸಕಾಲಕ್ಕೆ ರಸಗೊಬ್ಬರ ಮತ್ತು ಕ್ರಿಮಿನಾಶಕ ಲಭ್ಯತೆ ಸಾಧ್ಯವೇ? ಎಂಬ ಆತಂಕ ರೈತರದ್ದಾಗಿದೆ.
ರಸಗೊಬ್ಬರ ಬಳಕೆಯಲ್ಲಿ ಭಾರತ ವಿಶ್ವದಲ್ಲೇ 2ನೇ ಅತಿದೊಡ್ಡ ದೇಶವಾಗಿದ್ದರೆ, ಕ್ರಿಮಿನಾಶಕ ಉತ್ಪಾದನೆಯಲ್ಲಿ ವಿಶ್ವದ 6ನೇ ಅತಿದೊಡ್ಡ ಮತ್ತು ಏಷ್ಯಾದ 3ನೇ ಅತಿದೊಡ್ಡ ದೇಶವಾಗಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಕೆಲವೆಡೆ ಮೇ ತಿಂಗಳಲ್ಲಿ ಬಿತ್ತನೆ ಆರಂಭವಾದರೆ, ಇನ್ನೂ ಕೆಲವೆಡೆ ಜೂನ್‌ನಲ್ಲಿ ಆರಂಭವಾಗುತ್ತದೆ.
ಕ್ರಿಮಿನಾಶಕದ್ದೂ ಅದೇ ಕಥೆ
ಇನ್ನು ಕ್ರಿಮಿನಾಶಕ ಉದ್ಯಮದ ಕಥೆ ಭಿನ್ನವಿಲ್ಲ. ಸಾಮಾನ್ಯವಾಗಿ ಕ್ರಿಮಿನಾಶಕ ಉತ್ಪಾದನ ಕಂಪೆನಿಗಳು ಫೆಬ್ರವರಿ-ಮಾರ್ಚ್‌ನಲ್ಲಿ ಕಚ್ಚಾ ಸಾಮಗ್ರಿ ಖರೀದಿಯೊಂದಿಗೆ ಉತ್ಪಾದನೆ ಆರಂಭಿಸಿ, ಮೇ- ಜೂನ್ ವೇಳೆಗೆ ಉತ್ಪನ್ನಗಳನ್ನು ಪೂರೈಸುತ್ತವೆ. ರಾಜ್ಯದಲ್ಲಿ ಒಟ್ಟು ಕ್ರಿಮಿನಾಶಕ ಬಳಕೆಯಲ್ಲಿ ಶೇ. 25 ಭತ್ತಕ್ಕೆ ಬಳಕೆಯಾದರೆ, ಶೇ. 15 ಎಣ್ಣೆಕಾಳು, ತರಕಾರಿಗೆ ಮತ್ತು ಶೇ. 10 ಮೆಣಸಿನಕಾಯಿಗೆ ಬಳಕೆಯಾಗುತ್ತದೆ. ರಾಜ್ಯದಲ್ಲಿ ವಾರ್ಷಿಕ ಅಂದಾಜು 1,300 ಕೋ.ರೂ. ಗಳಷ್ಟು ಕ್ರಿಮಿನಾಶಕ ವಹಿವಾಟು ನಡೆಯುತ್ತಿದೆ. ರಸಗೊಬ್ಬರ ಕೊರತೆಯಿಂದ ರಾಜ್ಯದಲ್ಲಿ ಈ ಹಿಂದೆ ಗೋಲಿಬಾರ್‌ನಂಥ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಸರಕಾರ ಮುಂಜಾಗ್ರತೆ ವಹಿಸಬೇಕಾಗಿದೆ.
ಕೋವಿಡ್ 19 ತಂದಿಟ್ಟ ಸಂಕಷ್ಟ
ರಾಜ್ಯದಲ್ಲಿ ಕಳೆದೊಂದು ದಶಕದಿಂದ ಪ್ರತಿ ಹೆಕ್ಟೇರ್‌ಗೆ ಸರಾಸರಿ 150-160 ಕೆ.ಜಿ.ಗಿಂತ ಹೆಚ್ಚು ರಸಗೊಬ್ಬರ ಬಳಕೆ ಮಾಡಲಾಗುತ್ತಿದೆ. ಒಟ್ಟು ರಸಗೊಬ್ಬರ ಬಳಕೆಯಲ್ಲಿ ಭತ್ತ, ಗೋಧಿ, ಹತ್ತಿ, ಕಬ್ಬು, ಸಾಸಿವೆ ಬೆಳೆಗಳಿಗೆ 2/3ರಷ್ಟು ರಸಗೊಬ್ಬರ ಬಳಕೆಯಾದರೆ ಶೇ. 40 ನೀರಾವರಿ ಪ್ರದೇಶದಲ್ಲಿ ಶೇ. 60 ಬಳಕೆ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.