Fig Fruit: ಆದಾಯ ಹೆಚ್ಚಿಸಿಕೊಂಡ ಅಂಜೂರ ಬೆಳೆಗಾರ; ಡ್ರೈ ಫ್ರೂಟ್‌ನಿಂದ ಆದಾಯ ವೃದ್ಧಿ

ಅಂಜೂರ ಬರೀ ಹಣ್ಣು ಮಾರಾಟದಿಂದ ಆದಾಯ ನಿರೀಕ್ಷಿಸುವುದು ಕಷ್ಟ

Team Udayavani, Sep 4, 2023, 5:59 PM IST

Fig Fruit: ಆದಾಯ ಹೆಚ್ಚಿಸಿಕೊಂಡ ಅಂಜೂರ ಬೆಳೆಗಾರ; ಡ್ರೈ ಫ್ರುಟ್‌ನಿಂದ ಆದಾಯ ವೃದ್ಧಿ

ಕುಷ್ಟಗಿ: ತಾಲೂಕಿನ ಕಂದಕೂರು ಗ್ರಾಮದ ರೈತ ಶರಣಗೌಡ ಪಾಟೀಲ ಅವರು, ಅಂಜೂರ ಕೃಷಿಯಿಂದ ಹಣ್ಣು ಮಾತ್ರವಲ್ಲದೇ ಡ್ರೈ ಫ್ರುಟ್‌ ಆದಾಯ ಜೊತೆಗೆ ಗೂಟಿ ಪದ್ಧತಿಯಲ್ಲಿ ಸಸ್ಯಾಭಿವೃದ್ಧಿಯಿಂದ ಆದಾಯದ ಮೂಲ ಹೆಚ್ಚಿಸಿಕೊಂಡಿದ್ದಾರೆ.

ಕಂದಕೂರು ಗ್ರಾಮ ವ್ಯಾಪ್ತಿಯ 1 ಎಕರೆಯಲ್ಲಿ ಡಯಾನಾ ತಳಿಯ 250 ಅಂಜೂರ ಸಸಿಗಳನ್ನು ನಾಟಿ ಮಾಡಲಾಗಿದೆ. ಗುಂಡಿ, ಸಸಿಗಳ ಖರ್ಚು ಸೇರಿದಂತೆ ಎಕರೆಗೆ 25ರಿಂದ 30 ಸಾವಿರ ರೂ. ಖರ್ಚಾಗಿದೆ. ಹನಿ ನೀರಾವರಿ ಪದ್ಧತಿಯಾಗಿದ್ದರೆ ಹೆಚ್ಚುವರಿ 20 ಸಾವಿರ ರೂ. ವೆಚ್ಚವಾಗಲಿದೆ. ಏಳೆಂಟು ತಿಂಗಳಿಗೆ ಫಲ ಆರಂಭವಾಗುತ್ತಿದ್ದು, ಗಿಡಗಳ ಬೆಳವಣಿಗೆ ದೃಷ್ಟಿಯಿಂದ ಆರಂಭದಲ್ಲಿ
ಹಣ್ಣುಗಳನ್ನು ಒಂದು ವರ್ಷದವರೆಗೆ ಕಿತ್ತು ಹಾಕಿದ್ದಾರೆ.

ಹಣ್ಣುಗಳಿಗೆ ಹಕ್ಕಿಗಳ ಹಾವಳಿ, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದ ಹಿನ್ನೆಲೆಯಲ್ಲಿ ಅಂಜೂರ ಹಣ್ಣಿನ ಜೊತೆಗೆ ಗೂಟಿ ಪದ್ಧತಿ ಸಸ್ಯಾಭಿವೃದ್ಧಿ ಆರಂಭಿಸಿದ್ದಾರೆ. ಪ್ರತಿ ಸೀಜನ್‌ನಲ್ಲಿ ಹಣ್ಣಿನಿಂದ ಕೆ.ಜಿ.ಗೆ 50ರಿಂದ 60 ರೂ. ಸಿಕ್ಕರೂ 50 ಸಾವಿರ ಆದಾಯ ಸಿಗುತ್ತಿದೆ. ಗಿಡಗಳು ಮೂರು ವರ್ಷದ ಬಳಿಕ ಸಸ್ಯಾಭಿವೃದ್ಧಿಗೆ ಗೂಟಿ ಪದ್ಧತಿಯಿಂದ ಎಕರೆಗೆ 1.50 ಲಕ್ಷ ರೂ.ದಿಂದ 2 ಲಕ್ಷ ರೂ. ಆದಾಯ ಸಿಗುತ್ತಿದೆ.

ಬೆರಳು ಗಾತ್ರದ 1 ಅಡಿ ಟೊಂಗೆಗೆ 2 ಗೂಟಿ ಕಟ್ಟಲು ಸಾಧ್ಯವಿದ್ದು, ಪ್ರತಿ ಗಿಡಕ್ಕೆ 80ರಿಂದ 100 ಗೂಟಿ ಕಟ್ಟಬಹುದಾಗಿದೆ. ಗೂಟಿ ಕಟ್ಟಿದ ಕಡ್ಡಿಯನ್ನು 10 ರೂ.ಗೆ ನರ್ಸರಿಯವರು, ರೈತರು ಖರೀದಿಸುತ್ತಾರೆ. ತಾವೇ ಪ್ಯಾಕೆಟ್‌ನಲ್ಲಿ ಒಂದೆರೆಡು ಅಡಿ ಬೆಳೆಸಿದರೆ 35 ರೂ. ಪ್ರತಿ ಸಸಿ ಮಾರಾಟ ಮಾಡಬಹುದಾಗಿದೆ ಎನ್ನುತ್ತಾರೆ ಶರಣಗೌಡ ಪಾಟೀಲ.

ಬೇಸಿಗೆಯಲ್ಲಿ ಅಂಜೂರ ಹಣ್ಣು ಮಾರಾಟ ಮಾಡಬಹುದಾಗಿತ್ತು. ಮಳೆಗಾಲದ ವೇಳೆ ಗಿಡದಲ್ಲಿಯೇ ಗೂಟಿ ಪದ್ಧತಿಯಲ್ಲಿ
ಕಸಿ ಕಟ್ಟುವಿಕೆಯಿಂದ ಸಸ್ಯಭಿವೃದ್ಧಿ ಕೈಗೊಳ್ಳಬಹುದು. ಎರೆಹುಳು ಗೊಬ್ಬರ, ಕೋಕೋಪಿಟ್‌, ಮರಳು ಮಶ್ರಿತ ಮಣ್ಣು, ಪ್ಲಾಸ್ಟಿಕ್‌ ಹಾಳೆ, ದಾರದಿಂದ ಗೂಟಿ ಕಟ್ಟಬಹುದಾಗಿದೆ. ಗೂಟಿ ಕಟ್ಟಿದ 45 ದಿನಕ್ಕೆ ಬೇರುಗಳು ಕಾಣಿಸಿಕೊಳ್ಳುತ್ತಿದ್ದು, ಬೇಡಿಕೆ ಆಧರಿಸಿ ಕಟಾವು ಮಾಡಿ ನಿರೀಕ್ಷಿತ ಆದಾಯ ಗಳಿಸಬಹುದಾಗಿದೆ.

ಬಳ್ಳಾರಿ, ಪುಣೆ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ತಾಜಾ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಬಹುದು. ಪ್ರತಿ ಎಲೆಗೂ ಒಂದು ಹಣ್ಣು ಹಿಡಿಯುತ್ತಿದ್ದು, ನಿರಂತರ ಕಟಾವು, ನಿರಂತರ ಮಾರುಕಟ್ಟೆಗೆ ಸಾಗಿಸಬೇಕು. ಆದರೆ ಕಾರ್ಮಿಕರ ಕೊರತೆಯಿಂದ ಎಷ್ಟು ಸಾಧ್ಯವೋ ಅಷ್ಟು ಮಾರುಕಟ್ಟೆಗೆ ಉಳಿದವು ಡ್ರೈ ಫ್ರುಟ್‌ ಮಾಡಲಾಗುತ್ತದೆ. ಗಿಡದಲ್ಲಿ ಬಿಟ್ಟರೆ ಹಣ್ಣುಗಳು ಕೆಡುವುದಿಲ್ಲ. ಆದರೆ ಹಕ್ಕಿ, ಅಳಿಲು ಕಾಟದಿಂದ ಹಣ್ಣುಗಳು ಹಾಳಾಗುತ್ತಿವೆ.

ಪುಣೆ ತಳಿ ಡ್ರೈ ಫ್ರೂಟ್‌ ಮಾಡಲು ಬರುವುದಿಲ್ಲ. ಹೀಗಾಗಿ ಈ ಪ್ರದೇಶಕ್ಕೆ ಒಗ್ಗುವ ಡಯಾನ್‌ ತಳಿ ಆಯ್ಕೆ ಮಾಡಿಕೊಂಡಿದ್ದು, ಹಣ್ಣು, ಡ್ರೈ ಫ್ರೂಟ್‌ ಹಾಗೂ ಗೂಟಿ ಪದ್ಧತಿಯಿಂದ ಸಸ್ಯಾಭಿವೃದ್ಧಿ ಮಾಡಿ ಆದಾಯ ಸಿಗುತ್ತಿದೆ ಎನ್ನುತ್ತಾರೆ ರೈತ ಶರಣಗೌಡ ಪಾಟೀಲ.

ಅಂಜೂರ ಬರೀ ಹಣ್ಣು ಮಾರಾಟದಿಂದ ಆದಾಯ ನಿರೀಕ್ಷಿಸುವುದು ಕಷ್ಟ. ಅವುಗಳನ್ನು ವೈಜ್ಞಾನಿಕವಾಗಿ ಒಣಗಿಸಿದರೆ 5
ಕೆ.ಜಿ. ಅಂಜೂರ ಹಣ್ಣಿಗೆ 1 ಕೆ.ಜಿ. ಅಂಜೂರ ಡ್ರೈ ಫ್ರೂಟ್‌ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 700 ದಿಂದ 800 ರೂ. ಸಿಗಲಿದೆ. ಮೂರು ವರ್ಷದ ಗಿಡಗಳಿಗೆ ಗೂಟಿ ಕಟ್ಟುವುದರಿಂದ ಸಸ್ಯಾಭಿವೃದ್ಧಿಯಿಂದ 2 ಲಕ್ಷ ರೂ. ಆದಾಯ ಸಾಧ್ಯವಿದೆ.
*ಶರಣಗೌಡ ಪೊಲೀಸಪಾಟಿಲ,
ಕಂದಕೂರು ಅಂಜೂರ ಕೃಷಿಕ

*ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppal; ಪ್ರಚೋದನಕಾರಿ ಹೇಳಿಕೆ ಕೊಟ್ಟರೆ ಸಹಿಸಲ್ಲ: ಸಚಿವ ಶಿವರಾಜ ತಂಗಡಗಿ

Koppal; ಪ್ರಚೋದನಕಾರಿ ಹೇಳಿಕೆ ಕೊಟ್ಟರೆ ಸಹಿಸಲ್ಲ: ಸಚಿವ ಶಿವರಾಜ ತಂಗಡಗಿ

ಕೊಪ್ಪಳ: ಅದಾಲತ್‌ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು

ಕೊಪ್ಪಳ: ಅದಾಲತ್‌ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು

Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ

Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ

ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.