ಕ್ಷುಲ್ಲಕ ಕಾರಣಕ್ಕೆ ತಂಡಗಳ ಮಧ್ಯೆ ಹೊಡೆದಾಟ: ಓರ್ವನ ಕೊಲೆ
Team Udayavani, May 31, 2020, 11:59 PM IST
ಸಾಂದರ್ಭಿಕ ಚಿತ್ರ
ಬಜಪೆ: ಇಲ್ಲಿನ ಅರಸುಗುಡ್ಡೆಯಲ್ಲಿ ರವಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು, ಈ ಸಂದರ್ಭ ಕರಂಬಾರು ನಿವಾಸಿ ಕೀರ್ತನ್ (20) ಕೊಲೆಯಾಗಿದ್ದಾರೆ. ಆತನ ಸಹಚರ ನಿತಿನ್ ಮತ್ತು ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ.
ಕೊಲೆ ನಡೆಸಿದ ತಂಡದವರು ಮತ್ತು ಕೊಲೆಯಾದ ಕೀರ್ತನ್ ಹಾಗೂ ಗಾಯಗೊಂಡವರು ಈ ಹಿಂದೆ ಜತೆಯಾಗಿಯೇ ಇದ್ದು ದೋಸ್ತಿಗಳಾಗಿದ್ದರು. ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಅವರೊಳಗೆ ವೈಮನಸ್ಸು ಬೆಳೆದಿತ್ತು ಎನ್ನಲಾಗಿದೆ.
ರವಿವಾರ ರಾತ್ರಿ ಕೀರ್ತನ್, ನಿತಿನ್ ಮತ್ತವರ ಇನ್ನೋರ್ವ ಸಹಚರ ಬಜಪೆ ದೇವರಗುಡ್ಡದಲ್ಲಿ ಒಟ್ಟು ಸೇರಿದ್ದರು. ಈ ಸಂದರ್ಭ ಅವರು ವಿರೋಧಿ ತಂಡವನ್ನು ಅಲ್ಲಿಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ವಿರೋಧಿ ತಂಡ ಅಲ್ಲಿಗೆ ಆಗಮಿಸಿದಾಗ ಮಾತಿಗೆ ಮಾತು ಬೆಳೆದು ಕೀರ್ತನ್ ಮತ್ತು ಆತನ ಸಹಚರರ ಮೇಲೆ ಇನ್ನೊಂದು ತಂಡದವರು ಚೂರಿಯಿಂದ ಹಲ್ಲೆ ನಡೆಸಿದರು. ಈ ಸಂದರ್ಭ ಕೀರ್ತನ್ ತೀವ್ರ ಗಾಯಗೊಂಡು ಬಳಿಕ ಸಾವನ್ನಪ್ಪಿದ್ದಾರೆ. ಗಾಯಾಳು ನಿತಿನ್ ಮತ್ತು ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳು ಸ್ಥಳದಿಂದ ಪಾರಾಗಿದ್ದು, ಬಜಪೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.