Bengaluru: ಕಾಫಿ ಶಾಪ್‌ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ

ಮಹಿಳಾ ಟಾಯ್ಲೆಟ್‌ನ ಡಸ್ಟ್ ಬಿನ್‌ ನಲ್ಲಿ ರಹಸ್ಯವಾಗಿ ಮೊಬೈಲ್‌ ಇಟಿದ್ದ ಆರೋಪಿ ಸದಾಶಿವನಗರದ ಕಾಫಿ ಶಾಪ್‌ನಲಿ ಘಟನೆ ; ಸಿಬಂದಿಯಿಂದಲೇ ಕೃತ್ಯ, ಬಂಧನ

Team Udayavani, Aug 12, 2024, 12:22 PM IST

mobile

ಬೆಂಗಳೂರು: ಕಾಫಿ ಶಾಪ್‌ನ ಮಹಿಳಾ ಶೌಚಾಲಯದ ಡಸ್ಟ್‌ ಬಿನ್‌ನಲ್ಲಿ ಮೊಬೈಲ್‌ ಇಟ್ಟು ಅಸಭ್ಯ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಕೆಫೆ ಸಿಬ್ಬಂದಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಭದ್ರಾವತಿ ಮೂಲದ ಮನೋಜ್‌(24) ಬಂಧಿತ. ಒಂದೂವರೆ ವರ್ಷ ಗಳಿಂದ ಸದಾಶಿವನಗರದ 80 ಅಡಿ ರಸ್ತೆಯಲ್ಲಿರುವ ಥರ್ಡ್‌ ವೇವ್‌ ಕಾಫಿ ಶಾಪ್‌ ನಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಇದರೊಂದಿಗೆ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್‌ ಫೋನ್‌ ಇಟ್ಟು, ಅಸಭ್ಯ ದೃಶ್ಯಗಳನ್ನು ರಹಸ್ಯವಾಗಿ ಸೆರೆ ಹಿಡಿಯುವ ಚಟ ಅಂಟಿಸಿಕೊಂಡಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇನ್ನು ಇತ್ತೀಚೆಗೆ ಮಹಿಳೆಯೊಬ್ಬರು ಕೆಫೆಗೆ ಹೋಗಿದ್ದು, ಕೆಲ ಹೊತ್ತಿನ ಬಳಿಕ ಮಹಿಳಾ ಶೌಚಾಲಯಕ್ಕೆ ಹೋಗಿದ್ದಾರೆ. ಆಗ ಡಸ್ಟ್‌ ಬಿನ್‌ನಲ್ಲಿ ಮೊಬೈಲ್‌ ಪತ್ತೆಯಾಗಿದೆ. ಅಚ್ಚರಿಗೊಂಡ ಮಹಿಳೆ, ಅದನ್ನು ತೆಗೆದುಕೊಂಡು ಪರಿಶೀಲಿಸಿದಾಗ, 2 ಗಂಟೆಯಿಂದ ಮೊಬೈಲ್‌ನ ವಿಡಿಯೋ ರೆಕಾರ್ಡ್‌ ಆನ್‌ ಆಗಿರುವುದು ಕಂಡು ಬಂದಿದೆ. ಅಲ್ಲದೆ, ಅದನ್ನು ಫ್ಲೈಟ್‌ ಮೂಡ್‌ಗೆ ಹಾಕಲಾಗಿತ್ತು. ಜತೆಗೆ ಅದನ್ನು ಶೌಚಾಲಯದ ಕಮೋಡ್‌ ಕಾಣುವಂತೆ ಡಸ್ಟ್‌ಬಿನ್‌ನಲ್ಲಿ ರಹಸ್ಯವಾಗಿ ಇಡಲಾಗಿತ್ತು. ಆಗ ಮಹಿಳೆ, ಮೊಬೈಲ್‌ ಅನ್ನು ಕೂಡಲೇ ಕೆಫೆಯ ಮಾಲೀಕರಿಗೆ ನೀಡಿ, ದೂರು ನೀಡಿದ್ದಾರೆ. ಮಾಲೀಕರು, ಹೋಟೆಲ್‌ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮನೋಜ್‌ನ ಕೃತ್ಯ ಬಯಲಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯಿಂದ ದೂರು ದಾಖಲಿಸಿಕೊಂಡು ಆರೋಪಿ ಮನೋಜ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಕುರಿತು ಕ್ಷಮೆಯಾಚಿಸಿರುವ ಥರ್ಡ್‌ ವೇವ್‌ ಕಾಫಿ ಕೆಫೆಯ ಆಡಳಿತ ಮಂಡಳಿ, ಗ್ರಾಹಕರ ಸುರಕ್ಷತೆ ಮತ್ತು ಕ್ಷೇಮ ನಮ್ಮ ಆದ್ಯತೆಯಾಗಿದೆ. ಆರೋಪಿತ ಸಿಬ್ಬಂದಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ. ಆರೋಪಿ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

6

Anekal: ಶಾಲಾ ಬಸ್‌ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.