ಲೇಕ್ ಮೀಡ್, ಕೊಲರಡೊ ನದಿ ನೀರು ಮಾಯ!
ಅಮೆರಿಕಕ್ಕೆ ಜಾಗತಿಕ ತಾಪಮಾನದ ಬಿಸಿ
Team Udayavani, Aug 18, 2021, 10:30 PM IST
ವಾಷಿಂಗ್ಟನ್: ಅಮೆರಿಕದ ಬಹುಮುಖ್ಯ ಜಲಮೂಲವಾದ ಲೇಕ್ ಮೀಡ್‌ನಲ್ಲಿ ನೀರಿನ ಪ್ರಮಾಣ ಗಣನೀಯ ರೀತಿಯಲ್ಲಿ ಇಳಿದಿದೆ.
ಈ ಕೆರೆ, ಕೊಲರಡೊ ನದಿಯ ಭಾಗವಾಗಿದ್ದು, ಕೊಲರಡೊ ನದಿಯಲ್ಲೇ ನೀರು ಕಡಿಮೆಯಾಗಿರುವುದರಿಂದ, ಲೇಕ್ ಮೀಡ್‌ನಲ್ಲಿಯೂ ನೀರು ಇಳಿಮುಖವಾಗಿದೆ. ಈ ಬೆಳವಣಿಗೆಗೆ ಜಾಗತಿಕ ತಾಪಮಾನವೇ ಕಾರಣ ಎಂದು ತಜ್ಞರು ಹೇಳಿದ್ದು, ಇದು ಅಲ್ಲಿನ ಸರ್ಕಾರ ಹಾಗೂ ಜಲತಜ್ಞರ ಆತಂಕಕ್ಕೆ ಕಾರಣವಾಗಿದೆ.
ಅಮೆರಿಕದ ಪ್ರಮುಖ ನದಿಗಳಲ್ಲೊಂದಾದ ಕೊಲರಡೊಗೆ ಅಡ್ಡವಾಗಿ ಲಾಸ್‌ವೇಗಾಸ್‌ನಲ್ಲಿ ಹೂವರ್ ಡ್ಯಾಂ ಎಂಬ ಅಣೆಕಟ್ಟನ್ನು ಕಟ್ಟಲಾಗಿದೆ. ಆ ಅಣೆಕಟ್ಟನ್ನು ಕಟ್ಟಿದ ನಂತರ, ಲೇಕ್ ಮೀಡ್ ಕೆರೆಯನ್ನು ಕಟ್ಟಲಾಗಿದೆ. ಆ್ಯರಿಝೋನಾ, ನೇವಡಾ, ಕ್ಯಾಲಿಫೋರ್ನಿಯಾ ಹಾಗೂ ಮೆಕ್ಸಿಕೋ ಜನತೆ, ಈ ಕೆರೆಯ ಮೇಲೆಯೇ ಅವಲಂಬಿತರಾಗಿದ್ದಾರೆ.
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1365 ಪಾಸಿಟಿವ್ ಪ್ರಕರಣ ಪತ್ತೆ ;1558 ಸೋಂಕಿತರು ಗುಣಮುಖ
ಕೆರೆಯಲ್ಲಿ ನೀರು ಕಡಿಮೆಯಾಗಿರುವುದು ಈ ಪ್ರಾಂತ್ಯಗಳಲ್ಲಿ ನೀರಿನ ಸರಬರಾಜಿನ ಮೇಲೆ ಪರಿಣಾಮ ಬೀರಿದೆ. ಮುಂದಿನ ವರ್ಷ, ಕೆರೆಯಲ್ಲಿ ಮತ್ತಷ್ಟು ನೀರು ಮಾಯವಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿರುವುದರಿಂದ ಸರ್ಕಾರ ಈ ಸಮಸ್ಯೆ ನಿರ್ಮೂಲನೆಗೆ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.