Kaatera: ನಮ್ಮ ಮಣ್ಣಿನ ಕಥೆಗೆ ಮೊದಲ ಆದ್ಯತೆ; ಕಾಟೇರ ಗೆಲುವು ಮತ್ತು ದರ್ಶನ್ ಒಲವು
Team Udayavani, Jan 3, 2024, 1:10 PM IST
ದರ್ಶನ್ ನಾಯಕರಾಗಿರುವ “ಕಾಟೇರ’ ಚಿತ್ರ ದೊಡ್ಡಮಟ್ಟದಲ್ಲಿ ಹಿಟ್ ಆಗುವ ಮೂಲಕ ಇಡೀ ಚಿತ್ರರಂಗಕ್ಕೆ ಒಂದು ಹೊಸ ಜೋಶ್ ಬಂದಿದೆ. ಕಲೆಕ್ಷನ್ ವಿಚಾರದಲ್ಲಿ ದಿನದಿಂದ ದಿನಕ್ಕೆ ಕಾಟೇರ ಸದ್ದು ಮಾಡುತ್ತಲೇ ಇದೆ. ಇದೇ ಖುಷಿಯಲ್ಲಿ ಚಿತ್ರತಂಡ ಇತ್ತೀಚೆಗೆ ಮಾಧ್ಯಮ ಮುಂದೆ ಬಂದಿತ್ತು. ಈ ವೇಳೆ ನಾಯಕ ದರ್ಶನ್ ಮನಬಿಚ್ಚಿ ಮಾತನಾಡಿದ್ದಾರೆ. ಅದನ್ನು ಅವರದ್ದೇ ಮಾತುಗಳಲ್ಲಿ ನೀಡಲಾಗಿದೆ…
- ಹೆಣ್ಣನ್ನು ಕೇವಲವಾಗಿ ನೋಡಬಾರದು, ನಮ್ಮ ಭಾಷೆಯ ಬಗ್ಗೆ ಕೆಟ್ಟದಾಗಿ ಬಿಂಬಿಸಬಾರದು, ಮೂರನೇಯದಾಗಿ ಎಲ್ಲಿಂದಲೇ ಕಾಸು ತಂದು ಸಿನಿಮಾ ನಿರ್ಮಿಸುವ ನಿರ್ಮಾಪಕನಿಗೆ ಒಳ್ಳೆಯದಾಗುವಂತಿರಬೇಕು… ಈ ಮೂರರ ಮೇಲೆ ನನ್ನ ಸಿನಿಮಾ ಆಯ್ಕೆ ನಡೆಯುತ್ತದೆ.
- ಯಾವುದೇ ಒಂದು ಕನ್ನಡ ಸಿನಿಮಾದ ಗೆಲುವು ಇಡೀ ಚಿತ್ರರಂಗಕ್ಕೆ ದೊಡ್ಡ ಸ್ಫೂರ್ತಿ ನೀಡುತ್ತದೆ. ಈಗ “ಕಾಟೇರ’ ಗೆದ್ದಿದೆ. ಚಿತ್ರಮಂದಿರ ಮಾಲೀಕರಿಂದ ಹಿಡಿದು ಪ್ರತಿ ವಿಭಾಗಗಳು ಆ್ಯಕ್ಟಿವ್ ಆಗಿವೆ. ಇನ್ನು ನೋಡಿ ಸಾಲು ಸಾಲು ಸಿನಿಮಾಗಳು ಬರಲಿವೆ ಮತ್ತು ಬರಬೇಕು. ಆಗ ಮಾತ್ರ ಚಿತ್ರರಂಗ ಜೀವಂತಿಕೆಯಿಂದ ಇರಲು ಸಾಧ್ಯ.
- ನಮ್ಮ ಮಣ್ಣಿನ ಕಥೆ ಹೇಳಿದಾಗ ಜನರಿಗೆ ಅದು ಬೇಗ ಕನೆಕ್ಟ್ ಆಗುತ್ತದೆ. ಆ ನಿಟ್ಟಿನಲ್ಲಿ ನಮ್ಮ “ಕಾಟೇರ’ ಚಿತ್ರ ಗೆದ್ದಿದೆ. ಇದು ನನ್ನೊಬ್ಬನ ಪ್ರಯತ್ನವಲ್ಲ. ಇಡೀ ತಂಡದ ಶ್ರಮ.
- ಚಿತ್ರದಲ್ಲಿ ಬರುವ ಪೌರಾಣಿಕ ದೃಶ್ಯ ನೋಡಿ ಕೆಲವರು ಡಾ. ರಾಜ್‌ಕುಮಾರ್ ಅವರಿಗೆ ನನ್ನನ್ನು ಹೋಲಿಸುತ್ತಿದ್ದಾರೆ. ದಯವಿಟ್ಟು ಹೋಲಿಸಬೇಡಿ, ನಾನು ಅವರ ಪಾದದ ಧೂಳಿಗೂ ಸಮವಲ್ಲ.
- ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟರೆ ಆಯಾ ರಾಜ್ಯಗಳನ್ನು ಪ್ರತಿನಿಧಿಸುವ ಅಂಶಗಳನ್ನು ಹಾಕಲೇಬೇಕು. ಆಗ ನಮ್ಮ ಮಣ್ಣಿನ ಕಥೆಯ ಸಾರ ಹೊರಟು ಹೋಗುತ್ತದೆ. ಅದಕ್ಕೆ ಮೊದಲು ನಮ್ಮ ನೆಲದ, ನಮ್ಮ ಭಾಷೆಯ ಸಿನಿಮಾ ಮಾಡುವ, ಮುಂದೆ ಅದು ಎಲ್ಲಿ ಬೇಕಾದರೂ ತಲುಪಬಹುದು
- ಪೈರಸಿ ಮಾಡುವವರು ಇಲ್ಲೇ ಓಡಾಡುತ್ತಿದ್ದಾರೆ. ನಿಮ್ಮ ಮಣ್ಣಿಗೆ ನೀವು ಬೆಲೆ ಕೊಡದಿದ್ದರೆ ಹೇಗೆ? ಪೈರಸಿ ಮಾಡಿ ಸಿಕ್ಕಿ ಹಾಕಿಕೊಂಡರೆ ಟಾಟ, ಬೈಬೈ, ಸೀಯೂ… ನಾನು ಸಿನಿಮಾ ಮಾಡೋದು ಪ್ರಶಸ್ತಿಗಾಗಿ ಅಲ್ಲ. ನನ್ನ ಸೆಲೆಬ್ರೆಟಿಗಳ ಮೆಚ್ಚುಗೆಯೇ ನನಗೆ ದೊಡ್ಡ ಪ್ರಶಸ್ತಿ
- ಲುಕ್ ಟೆಸ್ಟ್‌ನಲ್ಲಿ ನಾನು ಮೇಕಪ್ ಹಾಕಿದ ಬಳಿಕ ಮೊದಲು ನೋಡೋದು ಕನ್ನಡಿನ್ನಲ್ಲ… ಬದಲು ನನ್ನ ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ ಹಾಗೂ ತಂಡವನ್ನು. ಅವರ ಮೊಗದಲ್ಲಿ ಸಂತೃಪ್ತ ಭಾವ ಮೂಡಿದರೆ ಅದು ಗೆದ್ದಂತೆ.
ವಾರಾಂತ್ಯದಲ್ಲಿ ವಿದೇಶದಲ್ಲಿ ಕಾಟೇರ
ಕಾಟೇರ ಚಿತ್ರ ವಿದೇಶಗಳಲ್ಲೂ ಬಿಡುಗಡೆಯಾಗುತ್ತಿದ್ದು, ದುಬೈ, ಕೆನಡಾ ಸೇರಿದಂತೆ ಇತರ ಕಡೆಗಳಲ್ಲಿ ವಾರಾಂತ್ಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಮೂಲಕ ವಿದೇಶಿ ಕನ್ನಡಿಗರಿಗೂ ದರ್ಶನ ಭಾಗ್ಯ ಸಿಗಲಿದೆ. ದುಬೈನಲ್ಲಿ ನಡೆಯಲಿರುವ ಕಾಟೇರ ಇವೆಂಟ್‌ನಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ತಮಿಳು, ತೆಲುಗು ಸೇರಿದಂತೆ ಪರಭಾಷೆಯಿಂದಲೂ ಚಿತ್ರಕ್ಕೆ ಬೇಡಿಕೆ ಬರುತ್ತಿದೆ. ಇನ್ನು, ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದು, ತರುಣ್ ಸುಧೀರ್ ನಿರ್ದೇಶನವಿದೆ.
ಉದಯವಾಣಿ ಸಿನಿ ಸಮಾಚಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.