ಬೆಳ್ತಂಗಡಿ ಹಸಿ ಮೀನು ಮಾರುಕಟ್ಟೆ ಕಟ್ಟಡದ ಸೀಲಿಂಗ್ ಕುಸಿತ : KRIDL ಸಂಸ್ಥೆಯ ಕಳಪೆ ಕಾಮಗಾರಿ
Team Udayavani, Mar 7, 2022, 11:49 AM IST
ಬೆಳ್ತಂಗಡಿ : ಪಟ್ಟಣ ಪಂಚಾಯತ್ ನಿಂದ ಕಳೆದ ಅನೇಕ ವರ್ಷಗಳಿಂದ ಮೀನುಮಾರುಕಟ್ಟೆ ನಿರ್ಮಾಣದ ಬೇಡಿಕೆ ಮಧ್ಯೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಯೋಜನೆಯಡಿ ಕೆಆರ್‌ಐಡಿಎಲ್ ಸಂಸ್ಥೆಯಿಂದ ನಿರ್ಮಾಣಗೊಂಡಿದ್ದ ಹಸಿ ಮೀನು ಮಾರುಕಟ್ಟೆ ಒಳಭಾಗದ ಸೀಲಿಂಗ್ ಕುಸಿತಗೊಳ್ಳುವ ಮೂಲಕ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯಡಿ 2017ಕ್ಕೆ 30 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್ ನಡೆಸಿ ಕೆಆರ್‌ಐಡಿಎಲ್‌ಗೆ ಕಾಮಗಾರಿ ವಹಿಸಿಕೊಡಲಾಗಿತ್ತು. ಒಟ್ಟು 5 ಅಂಕಣವಿರುವ ಕಟ್ಟಡ ಹಲವು ಅಡೆತಡೆಗಳ ಮಧ್ಯೆ 2021ಕ್ಕೆ ಉದ್ಘಾಟನೆಗೊಂಡಿತ್ತು. ಉದ್ಘಾಟನೆಗೊಂಡು ಆರೇ ತಿಂಗಳಲ್ಲಿ 30 ಲಕ್ಷ ರೂ. ವೆಚ್ಚದ ಕಾಮಗಾರಿ ಸೀಲಿಂಗ್ ಬಿರುಕು ಬಿಟ್ಟು ನೆಲುಕ್ಕರುಳುತ್ತಿದೆ. ಶನಿವಾರ ಕಟ್ಟಡ ಒಳಭಾಗದ ದೊಡ್ಡ ಗಾತ್ರದ ಸೀಲಿಂಗ್ ಉರುಳಿದ್ದು ಅದೃಷ್ಟವಶಾತ್ ಯಾರೂ ಇಲ್ಲದ್ದರಿಂದ ಅಪಾಯ ಸಂಭವಿಸಿಲ್ಲ. ಗೋಡೆಗಳು ಬಿರುಕು ಬಿಡಲಾರಂಭಿಸಿದೆ. ತ್ಯಾಜ್ಯ ನೀರು ಶೇಖರಣೆಗೆಂದು ರಚಿಸಿದ ಪಿಟ್ ತೀರ ಕಿರಿದಾಗಿದ್ದು ಕಾಮಗಾರಿ ಅವೈಜ್ಞಾನಿಕವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಕಳೆದ ವರ್ಷ 5 ಅಂಕಣದ ಮೀನುಮಾರುಕಟ್ಟೆಯಲ್ಲಿ 3 ಅಂಕಣವಷ್ಟೆ ಏಲಂನಲ್ಲಿ ಹೋಗಿತ್ತು. ಪ್ರಸಕ್ತ ವರ್ಷ ಇದೇ ಮಾರ್ಚ್ 18ರಂದು ಏಲಂ ಪ್ರಕ್ರಿಯೆ ನಡೆಯಲಿದೆ. ಅಷ್ಟರಲ್ಲಾಗಲೆ ಮಾರುಕಟ್ಟೆ ಕಾಮಗಾರಿ ಕಳಪೆಯಾಗಿರುವುದು ಏಲಂ ಪಡೆಯುವವರಿಗೂ ನಿರಾಸೆ ಮೂಡಿಸಿದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿಮೀನುಮಾಕಟ್ಟೆ ನಿರ್ಮಿಸಬೇಕೆಂಬ ನೆಲೆಯಲ್ಲಿ ಬಹಳ ವರ್ಷಗಳಿಂದ ಬೇಡಿಕೆ ಕೇಳಿಬಂದಿತ್ತು.
ಇದನ್ನೂ ಓದಿ : ಯಡ್ರಾಮಿ: ಟ್ರ್ಯಾಕ್ಟರ್ ಹಾಯ್ದು ಸೆಕ್ಯುರಿಟಿ ಗಾರ್ಡ್ ದುರ್ಮರಣ
ಕಾರಣ ಏನೆಂಬುದು ತಿಳಿಯಲಾಗುವುದು
ಬೆಳ್ತಂಗಡಿ ಹಸಿಮೀನುಮಾರುಕಟ್ಟೆ ಸೀಲಿಂಗ್ ಪದರ ಬಿದ್ದಿರುವುದು ಗಮನಕ್ಕೆ ಬಂದಿದೆ. ಈಗಾಗಲೆ ಸಂಬಂಧಪಟ್ಟ ಎಂಜಿನಿಯರ್ ಸ್ಥಳದಲ್ಲಿದ್ದಾರೆ. ಸೋಮವಾರ ಪರಿಶೀಲಿಸಿ ಕಾರಣ ಏನೆಂಬುದು ತಿಳಿಯಲಾಗುವುದು.
– ಸದಾಶಿವಯ್ಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕೆಆರ್‌ಐಡಿಎಲ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.