ಗುಜ್ಜಾಡಿ: ಹೊಸ ಮೀನು ಮಾರುಕಟ್ಟೆ ಆರಂಭ
Team Udayavani, Mar 17, 2021, 4:20 AM IST
ಗುಜ್ಜಾಡಿ: ಕೊನೆಗೂ ಇಲ್ಲಿನ ಮೀನು ಮಾರುಕಟ್ಟೆಯು ಉದ್ಘಾಟನೆಗೊಂಡು ಕಾರ್ಯಾರಂಭಗೊಂಡಿದೆ. ಈ ಮೀನು ಮಾರುಕಟ್ಟೆಯ ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳುಗಳು ಕಳೆದರೂ ಉದ್ಘಾಟನೆಗೊಂಡಿರದ ಕಾರಣ ನಾಯಕವಾಡಿಯ ಬಸ್ ನಿಲ್ದಾಣ ಸಮೀಪದ ಹಳೆಯ ಕಟ್ಟಡದಲ್ಲೇ ಮೀನುಗಾರ ಮಹಿಳೆಯರು ಮೀನು ಮಾರುವಂತಾಗಿತ್ತು.
ಗುಜ್ಜಾಡಿ ಗ್ರಾ.ಪಂ.ನ 14ನೇ ಹಣಕಾಸು ನಿಧಿಯಡಿ 3 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿನ ಮೀನುಗಾರ ಮಹಿಳೆಯರಿಗೆ ಮೀನು ಮಾರಾಟಕ್ಕೆ ಅನುಕೂಲವಾಗಲೆಂದು ಈ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಗ್ರಾ.ಪಂ. ಹೊಸ ಆಡಳಿತವು ಅಸ್ತಿತ್ವಕ್ಕೆ ಬಂದಿಲ್ಲದ ಕಾರಣ ಹೊಸ ಮಾರುಕಟ್ಟೆ ಉದ್ಘಾಟನೆ ವಿಳಂಬಗೊಂಡಿತ್ತು. ಈಗ ಪಂಚಾಯತ್ನ ಹೊಸ ಅಧ್ಯಕ್ಷ- ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದು, ಮೀನು ಮಾರುಕಟ್ಟೆಯು ಆರಂಭಗೊಂಡಿದೆ.
ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 10 ಮಂದಿ ಮೀನುಗಾರ ಮಹಿಳೆಯರು ಮೀನು ಮಾರಾಟ ಮಾಡುತ್ತಿದ್ದಾರೆ. ಕಳೆದ 15 -20 ವರ್ಷಗಳಿಂದ ಹಳೆಯ ಕಟ್ಟಡದಲ್ಲೇ ಮೀನು ಮಾರಾಟ ಮಾಡುತ್ತಿದ್ದರು. ಬೇಸಗೆಯಲ್ಲಾದರೆ ಅಷ್ಟೇನೂ ಸಮಸ್ಯೆಯಿಲ್ಲ. ಆದರೆ ಮಳೆಗಾಲದಲ್ಲಿ ಈ ಹಳೆಯ ಕಟ್ಟಡದಲ್ಲಿ ಮೀನು ಮಾರಾಟ ಮಾಡುವುದು ಅಪಾಯಕಾರಿಯಾಗಿತ್ತು. ಈಗ ಅವರೆಲ್ಲ ಹೊಸ ಕಟ್ಟಡಕ್ಕೆ ಸ್ಥಳಾಂತರ ಗೊಂಡಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ರಸ್ತೆ ವ್ಯವಸ್ಥೆ
ಹೊಸದಾಗಿ ನಿರ್ಮಾಣಗೊಂಡಿರುವ ಮೀನು ಮಾರುಕಟ್ಟೆಯ ಸುತ್ತಮುತ್ತ ಈಗ ಹುಲ್ಲು, ಪೊದೆಗಳ ರಾಶಿಯೇ ಬೆಳೆದಿದ್ದು, ಇದರಿಂದ ಮೀನು ಮಾರುಕಟ್ಟೆಯೇ ಸರಿಯಾಗಿ ಕಾಣಿಸದ ಸ್ಥಿತಿ ಇಲ್ಲಿ ನಿರ್ಮಾಣಗೊಂಡಿತ್ತು. ಈಗ ಮೀನು ಮಾರುಕಟ್ಟೆಯ ಸುತ್ತಮುತ್ತ ಸ್ವತ್ಛಗೊಳಿಸ ಲಾಗಿದ್ದು, ರಸ್ತೆ ಸಂಪರ್ಕವನ್ನು ಕಲ್ಪಿಸಲಾಗಿದೆ.
ಸುದಿನ ವರದಿ
ಗುಜ್ಜಾಡಿಯ ಹೊಸ ಮೀನು ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡಿದ್ದರೂ, ಉದ್ಘಾಟನೆಯಾಗದ ಬಗ್ಗೆ, ಈ ಮಾರುಕಟ್ಟೆಗೆ ಸಂಪರ್ಕ ರಸ್ತೆ ಇಲ್ಲದ ಬಗ್ಗೆ “ಉದಯವಾಣಿ ಸುದಿನ’ವು ಫೆ. 19ರಂದು “ಪೂರ್ಣಗೊಂಡು 2 ತಿಂಗಳಾದರೂ ಉದ್ಘಾಟನೆಗೆ ಕೂಡಿ ಬಂದಿಲ್ಲ ಕಾಲ’ ಎನ್ನುವುದಾಗಿ ವಿಶೇಷ ವರದಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.