“ಸಬ್ಸಿಡಿ ಸೀಮೆಎಣ್ಣೆ’ ವಿಸ್ತರಣೆಗೆ ಮೀನುಗಾರರ ಬೇಡಿಕೆ
ಪರ್ಮಿಟ್ ಇರುವ ಎಲ್ಲ ದೋಣಿಗಳಿಗೂ ತಲಾ 300 ಲೀ. ನೀಡಲು ಮನವಿ
Team Udayavani, Jul 7, 2020, 5:45 AM IST
ಕುಂದಾಪುರ : ಆಳ ಸಮುದ್ರ ಮೀನುಗಾರರಿಗೆ ವರ್ಷದ 10 ತಿಂಗಳು ಡೀಸೆಲ್ ಸಬ್ಸಿಡಿ ನೀಡುತ್ತಿದ್ದು, ಅದೇ ರೀತಿ ನಾಡದೋಣಿ ಮೀನುಗಾರರಿಗೂ ಸರಕಾರ ಕೊಡುತ್ತಿರುವ ಸಬ್ಸಿಡಿ ಸೀಮೆಎಣ್ಣೆಯನ್ನು 9 ತಿಂಗಳ ಬದಲು 10 ತಿಂಗಳು ನೀಡಬೇಕು ಎನ್ನುವ ಬೇಡಿಕೆಯನ್ನು ಮೀನುಗಾರರು ಇಟ್ಟಿದ್ದಾರೆ.
ಇದರೊಂದಿಗೆ ಪರ್ಮಿಟ್ ಇರುವ ಎಲ್ಲ ದೋಣಿಗಳಿಗೂ ತಿಂಗಳಿಗೆ ತಲಾ 300 ಲೀ. ಸೀಮೆಎಣ್ಣೆಯನ್ನು ಕೊಡಬೇಕು ಎನ್ನುವ ಮನವಿಯನ್ನು ಕೂಡ ಮುಂದಿಟಿದ್ದಾರೆ.
ಸರಕಾರ ಪ್ರತಿ ವರ್ಷ ನಾಡದೋಣಿ ಮೀನುಗಾರರಿಗೆ ಸೆಪ್ಟಂಬರ್‌ನಿಂದ ಆರಂಭ ಗೊಂಡು ಮೇ ವರೆಗೆ 1 ಪರ್ಮಿಟ್‌ಗೆ ತಲಾ 300 ಲೀ. ಗಳಂತೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಕೊಡುತ್ತಿದೆ. ಆದರೆ ಪ್ರತಿ ವರ್ಷ ಆಗಸ್ಟ್ ನಿಂದ ಮೀನುಗಾರಿಕೆ ಆರಂಭವಾಗುತ್ತದೆ. ಬೋಟ್‌ಗಳಿಗೆ ಆಗಸ್ಟ್‌ನಿಂದಲೇ ಡೀಸೆಲ್ ಸಬ್ಸಿಡಿ ಕೊಡಲಾಗುತ್ತಿದೆ.
9 ಸಾವಿರಕ್ಕೂ ಅಧಿಕ ದೋಣಿ
ಮಂಗಳೂರಿನಿಂದ ಕಾರವಾರದವರೆಗಿನ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ 9,996 ದೋಣಿಗಳು, 27,118 ಮಂದಿ ನಾಡದೋಣಿ ಮೀನುಗಾರರಿದ್ದಾರೆ. ಈ ಪೈಕಿ ಉಡುಪಿಯಲ್ಲಿ 4,332 ನಾಡದೋಣಿಗಳ 15,148 ಮೀನುಗಾರರಿದ್ದಾರೆ. ದಕ್ಷಿಣ ಕನ್ನಡದ 1,416 ದೋಣಿಗಳಲ್ಲಿ ಸುಮಾರು 4,248 ಮೀನುಗಾರರು ಹಾಗೂ ಉತ್ತರ ಕನ್ನಡದ 2,574 ದೋಣಿಗಳಲ್ಲಿ ಸುಮಾರು 7,722 ಮೀನುಗಾರರು ನಾಡದೋಣಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ.
ಎಲ್ಲರಿಗೂ 300 ಲೀ. ಸಿಗಲಿ
ಸರಕಾರ ಒಂದು ನಾಡದೋಣಿ ಪರ್ಮಿಟ್‌ಗೆ ಪ್ರತಿ ತಿಂಗಳಿಗೆ 300 ಲೀ. ಸೀಮೆಎಣ್ಣೆ ನೀಡಬೇಕು. ಆದರೆ ಈಗ ಉಡುಪಿ ಜಿಲ್ಲೆಯಲ್ಲಿರುವ 4,332 ನಾಡ ದೋಣಿಗಳ ಪೈಕಿ ಕೇವಲ 2,600 ದೋಣಿಗಳಿಗೆ ಮಾತ್ರ 300 ಲೀ. ನೀಡುತ್ತಿದ್ದು, ಕಳೆದ 7 ವರ್ಷಗಳಿಂದ ಹೊಸ ಔಟ್‌ಬೋರ್ಡ್ ಎಂಜಿನ್‌ಗಳಿಗೆ ಹೆಚ್ಚುವರಿ ಸೀಮೆ ಎಣ್ಣೆ ಸಿಗುತ್ತಿಲ್ಲ. ಇವರು ತಮ್ಮೊಳಗೆ ಹಂಚಿಕೊಳ್ಳುತ್ತಿದ್ದರಿಂದಾಗಿ ತಿಂಗಳಿಗೆ 1 ದೋಣಿಗೆ 170 ಲೀ. ಸಿಗುತ್ತಿದೆ. ಪರ್ಮಿ ಟ್ ಇರುವ ಎಲ್ಲರಿಗೂ ತಲಾ 300 ಲೀ. ಸೀಮೆಎಣ್ಣೆ ನೀಡಲು ಮೀನುಗಾರರ ಮನವಿ.
ಪರಿಶೀಲಿಸಿ ಕ್ರಮ
10 ತಿಂಗಳವರೆಗೆ ಸಬ್ಸಿಡಿ ಸೀಮೆಎಣ್ಣೆ ವಿಸ್ತರಿಸುವ ಕುರಿತಂತೆ ಮೀನುಗಾರರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಘೋಷಿಸಿದಂತೆ 400ಲೀ., ಎಲ್ಲ ಪರ್ಮಿಟ್‌ಗಳಿಗೂ ತಲಾ 300 ಲೀ. ಸೀಮೆಎಣ್ಣೆ ಕೊಡುವ ಬಗ್ಗೆ ಸರಕಾರದ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ.
-ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.