ಕೊರೊನೋತ್ತರ ಬದುಕಿಗೆ ಪಂಚ ವಿತ್ತ ಸೂತ್ರಗಳು!
Team Udayavani, Jan 3, 2021, 5:51 AM IST
ಇಂದು ಕೊರೊನಾ ಎನ್ನುವ ಕಣ್ಣಿಗೆ ಕಾಣದ ಅತೀ ಸೂಕ್ಷ್ಮ ವೈರಾಣು ಜಗತ್ತಿನ ಆರ್ಥಿಕತೆಯನ್ನು ಬುಡಮೇಲು ಮಾಡಿಬಿಟ್ಟಿದೆ. ದೇಶಗಳ ಮತ್ತು ಅತೀ ದೊಡ್ಡ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿರುವ ಈ ಸಮಯದಲ್ಲಿ ಕುಟುಂಬದ ಕಥೆಗಳೂ ಅಷ್ಟೇ ಚಿಂತಾಜನಕವಾಗಿವೆ. ಆದಾಯದ ಮೂಲಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಕೆಲವು ಮನೆಗಳಲ್ಲಿ ಆದಾಯ ಅರ್ಧಕ್ಕೆ ಇಳಿದಿದೆ.
ಯೂರೋಪ್ ಮತ್ತಿತರ ಮುಂದುವರಿದ ದೇಶಗಳಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದ ಇನ್ನೂ ಹೊರಬಂದಿಲ್ಲ. ಆದರೆ ಭಾರತದ ಆರ್ಥಿಕತೆ ಅತ್ಯಂತ ತ್ವರಿತಗತಿಯಲ್ಲಿ ಮೇಲ್ಮುಖವಾಗಿ ಸಾಗುತ್ತಿದೆ. ಕೊರೊನಾ ನಮೆಲ್ಲರಿಗೂ ಆರ್ಥಿಕ ಶಿಸ್ತು ಕಲಿಯಲು ನೀಡಿರುವ ಎಚ್ಚರಿಕೆ. ಕೊರೊನೋತ್ತರದಲ್ಲಿ ಪಂಚ ವಿತ್ತ ಸೂತ್ರಗಳನ್ನು ಪಾಲಿಸಿದರೆ, ಅನಿಶ್ಚಿತ ಜಗತ್ತಿನಲ್ಲಿ ಒಂದಷ್ಟು ಆರ್ಥಿಕ ದೃಢತೆ ನಮ್ಮದಾಗುತ್ತದೆ.
1 ತುರ್ತು ನಿಧಿ ಅಥವಾ ಆಪತ್ಕಾಲಕ್ಕೆ ಎಂದು ಪ್ರತೀ ತಿಂಗಳು ಒಂದಷ್ಟು ಹಣವನ್ನು ತೆಗೆದಿರಿಸಬೇಕು. ಎಷ್ಟು ಹಣವನ್ನು ಹೀಗೆ “ಎಮರ್ಜೆನ್ಸಿ ಫಂಡ್’ ಆಗಿ ತೆಗೆದಿರಿಸಬೇಕು ಎನ್ನುವುದು ಆಯಾ ಕುಟುಂಬದ ಜೀವನಶೈಲಿಯನ್ನು ಅವಲಂಬಿಸುತ್ತದೆ.
2 ಅನಾವಶ್ಯಕ ಖರ್ಚಿಗೆ ಬೇಕು ಬ್ರೇಕ್. ಕೊರೊನಾಗಿಂತ ಮುಂಚೆ ಸಾಮಾನ್ಯ ಮಧ್ಯಮವರ್ಗ ಖರ್ಚಿಗೆ ಹೆದರಿದ ಉದಾಹರಣೆ ಇರಲಿಲ್ಲ. ನಾಳಿನ ದುಡ್ಡನ್ನು ಇವತ್ತು ಖರ್ಚು ಮಾಡುವ ಕೆಟ್ಟ ಚಾಳಿಗೆ ಜನತೆ ಬಿದ್ದಿತ್ತು. ಇದೀಗ ಬೇಡದ ಖರ್ಚುಗಳಿಗೆ ಬ್ರೇಕ್ ಹಾಕಲೇಬೇಕು. ನೆನಪಿರಲಿ… ಇದು ಜಗತ್ತಿನಲ್ಲಿ ಮುಂಬರುವ ಅನಿಶ್ಚಿತತೆಯ ಆರಂಭವಷ್ಟೇ!
3 ಆದಾಯ ಕುಸಿದಿದ್ದರೂ ಉಳಿಕೆಯ ಬಗ್ಗೆ ಅಜಾಗೂರಕತೆ ಬೇಡ. ಇವತ್ತು ಉಳಿಕೆ ಏಕೆ ಮಾಡಬೇಕು ಎನ್ನುವ ಪ್ರಶ್ನೆ ಕೇಳುವ ಮಟ್ಟಕ್ಕೆ ಉಳಿತಾಯದ ಮೇಲಿನ ಬಡ್ಡಿ ದರ ಕುಸಿದಿದೆ. ಆದರೂ ಉಳಿಕೆಯ ಮಹಾಮಂತ್ರ ಮರೆಯುವುದು ಬೇಡ.
4 ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದು ಇಂದಿನ ದಿನದಲ್ಲಿ ಯಕ್ಷಪ್ರಶ್ನೆಯಾಗಿದೆ. ಷೇರು ಮಾರುಕಟ್ಟೆಯನ್ನು ಪೂರ್ಣವಾಗಿ ತ್ಯಜಿಸಿ ಇಂದು ಬದುಕಲು ಸಾಧ್ಯವಿಲ್ಲ. ಹೀಗಾಗಿ ಷೇರು ಮಾರುಕಟ್ಟೆಯ ಮೇಲಿನ ಒಂದಷ್ಟು ಜ್ಞಾನ ನಮ್ಮದಾಗಿರಲಿ.
5 ತೀರಾ ಆವಶ್ಯಕವಲ್ಲದೆ ಸಾಲ ಮಾಡುವುದು, ಸಾಲ ಕೊಡುವುದು- ಇವೆರಡೂ ಈ ಕಾಲದಲ್ಲಿ ಒಳ್ಳೆಯದಲ್ಲ. ಕೊರೊನೋತ್ತರ ಯುಗದಲ್ಲಿ ಸಾಲವಿಲ್ಲದವನೇ ಶ್ರೀಮಂತ! ಆದಷ್ಟು ಸರಳ ಜೀವನ ರೂಢಿಸಿಕೊಳ್ಳುವುದು ಉತ್ತಮ.
– ರಂಗಸ್ವಾಮಿ ಮೂಕನಹಳ್ಳಿ , ಆರ್ಥಿಕ ತಜ್ಞ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.