ವಿಮಾನ ಪಾರ್ಕಿಂಗ್ ಸುಲಭವಲ್ಲ!
Team Udayavani, Apr 20, 2020, 4:17 PM IST
ಸಾಂದರ್ಭಿಕ ಚಿತ್ರ
ಆಕಾಶದಲ್ಲಿ ಲೋಹದ ಹಕ್ಕಿಗಳ ಹಾರಾಟ ಬಹುತೇಕ ನಿಂತಿದೆ. ಕೋವಿಡ್-19 ಪ್ರಭಾವ ನೇರವಾಗಿ ವಿಮಾನಯಾನ ಕ್ಷೇತ್ರದ ಮೇಲಾಗಿದೆ. ದೇಶ ದೇಶಗಳ ನಡುವೆ ಪ್ರಯಾಣಿಸುವ ವಿಮಾನಗಳು ವೈರಸ್ ಹರಡುವಿಕೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಅವುಗಳ ಹಾರಾಟಕ್ಕೆ ವಿರಾಮ ನೀಡಲಾಗಿದೆ. ಈ ದಿನ ವಿಮಾನ ಹಾರಾಟ ಸ್ತಬ್ದಗೊಂಡಿರುವುದರಿಂದ ಆ ವಿಮಾನಗಳೆಲ್ಲಾ ಎಲ್ಲಿವೆ? ವರದಿಯೊಂದರ ಪ್ರಕಾರ ಜಗತ್ತಿನಾದ್ಯಂತ ಏನಿಲ್ಲವೆಂದರೂ 16,000 ವಿಮಾನಗಳನ್ನು ನಿಲ್ದಾಣಗಳಲ್ಲಿ ಪಾರ್ಕ್ ಮಾಡಲಾಗಿದೆ. ಅವುಗಳ ನಿರ್ವಹಣೆಯೇ ದೊಡ್ಡ ತಲೆನೋವಿನದ್ದು. ನಾವು ಮನೆಯ ಮುಂದೆ ನಿಲ್ಲಿಸಿದ ಬೈಕು, ಕಾರನ್ನು ಓಡಿಸದೇ ಇದ್ದರೆ, ಒಂದೆರಡು ವಾರಗಳ ನಂತರ ಸ್ಟಾರ್ಟ್ ಮಾಡಲು ಕಿರಿಕ್ ಕೊಡುತ್ತದೆ. ಅಂಥದ್ದರಲ್ಲಿ ಲಕ್ಷಾಂತರ ಸೂಕ್ಷ್ಮ ಎಲೆಕ್ಟ್ರಾನಿಕ್ ಬಿಡಿಭಾಗಗಳು, ಮೆಕ್ಯಾನಿಕಲ್ ಬಿಡಿಭಾಗಗಳನ್ನು ಹೊಂದಿರುವ ವಿಮಾನವನ್ನು ಸುಮ್ಮನೆಯೇ ನಿಲ್ಲಿಸಲಾಗುವುದಿಲ್ಲ.
ಪ್ರತಿದಿನವೂ ವಿಮಾನದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರಬೇಕಾಗುತ್ತದೆ. ಅದರ ಎಂಜಿನ್ ಚಾಲೂ ಮಾಡುವುದರಿಂದ ಮೊದಲುಗೊಂಡು, ಹೆ„ಡ್ರಾಲಿಕ್ಸ್, ಕಂಟ್ರೋಲ್ ಸಿಸ್ಟಮ್ ಗಳು ಇವೆಲ್ಲವನ್ನೂ ಚೆಕ್ ಮಾಡುತ್ತಿರಬೇಕಾಗುತ್ತದೆ. ಹಾಗೆ ನೋಡಿದರೆ ವಿಮಾನಗಳು, ಹಾರಾಟ ನಡೆಸುತ್ತಿದ್ದುದಕ್ಕಿಂತ ಹೆಚ್ಚಿನ ನಿರ್ವಹಣೆ ಅವುಗಳನ್ನು ಪಾರ್ಕ್ ಮಾಡಬೇಕಾಗಿ ಬಂದಾಗ ತಗುಲುತ್ತದೆ. ಪಾರ್ಕಿಂಗ್ ಜಾಗವೂ ಒಂದು ಸಮಸ್ಯೆಯಾಗಿದೆ. ವಿಮಾನ ಟೇಕಾಫ್, ಲ್ಯಾಂಡಿಂಗ್ ಮಾಡುವ ರನ್ ವೇ ಯಲ್ಲಿಯೂ ಪಾರ್ಕ್ ಮಾಡಲಾಗುತ್ತಿದೆ. ಜಾಗ ಸಿಕ್ಕರೂ ವಿಮಾನಗಳನ್ನು ಸುಮ್ಮನೆ ನಿಲ್ಲಿಸುವ ಹಾಗೂ ಇಲ್ಲ. ಅವುಗಳ ಟ್ಯಾಂಕ್ ನಲ್ಲಿ ಪೂರ್ತಿ ಇಂಧನ ತುಂಬಿಸಿಯೇ ನಿಲ್ಲಿಸಬೇಕಾಗುತ್ತದೆ. ಗಾಳಿಗೆ ವಿಮಾನ ಅಲುಗಾಡದೇ ಭದ್ರವಾಗಿರುತ್ತದೆ ಎಂಬುದು ಇದರ ಹಿಂದಿನ ಲೆಕ್ಕಾಚಾರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.