ಪ್ರವಾಹದ ಹೊಡೆತ: ಶಾಲಾ ಮಕ್ಕಳಿಗೆ ಸಮೂಹ ಸನ್ನಿ !
Team Udayavani, Jul 31, 2023, 6:58 AM IST
ಉತ್ತರಾಖಂಡ: ಇತ್ತೀಚೆಗಷ್ಟೇ ಉತ್ತರಾಖಂಡದಲ್ಲಾದ ಭೀಕರ ಪ್ರವಾಹಗಳು ಮನೆ-ಆಸ್ತಿಪಾಸ್ತಿಗಳನ್ನು ನಾಶ ಮಾಡಿದ್ದಷ್ಟೇ ಅಲ್ಲದೇ, ಮಕ್ಕಳ ಮನಸ್ಸಿನ ಮೇಲೂ ತೀವ್ರತರದ ಪರಿಣಾಮ ಬೀರಿದ್ದು, ಉತ್ತರಕಾಶಿಯ ಶಾಲೆಯೊಂದರಲ್ಲಿ ಮಕ್ಕಳು ಸಮೂಹ ಸನ್ನಿಗೆ ಒಳಗಾಗಿದ್ದಾರೆ. ಇದ್ದಕ್ಕಿದ್ದಂತೆ ತರಗತಿಯಲ್ಲಿ ಮಕ್ಕಳು ಕಿರುಚುತ್ತಾ, ಓಡುತ್ತಿರುವ ಪ್ರಕರಣ ವರದಿಯಾಗಿದ್ದು, ಈ ವಿಚಿತ್ರ ನಡವಳಿ ಎಲ್ಲರಲ್ಲೂ ಆತಂಕ ಮೂಡಿಸಿದೆ.
ವರದಿಗಳ ಪ್ರಕಾರ, ಧೌತ್ರಿ ನಗರದಲ್ಲಿ ಹೊಸದಾಗಿ ಸರ್ಕಾರಿ ಶಾಲೆಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಶಾಲೆಗೆ ಆಗಮಿಸುತ್ತಿದ್ದಂತೆಯೇ 10ರಿಂದ 12 ಹೆಣ್ಣು ಮಕ್ಕಳು ವಿಚಿತ್ರವಾಗಿ ಕಿರುಚುತ್ತಾ, ಅಳುತ್ತಾ ಓಡಾಡಿದ್ದಾರೆ. ಊರಿನ ಜನ ಇದು ಗ್ರಾಮ ದೇವತೆಗಳ ಮುನಿಸು ಎಂದು ಭಾವಿಸಿದ್ದರೆ, ಮತ್ತಷ್ಟು ಮಂದಿ ಇದು ಮಾಟ-ಮಂತ್ರ ಅಥವಾ ದುಷ್ಟ ಶಕ್ತಿಗಳ ಪರಿಣಾಮವಿರಬಹುದು ಎಂದು ಶಂಕಿಸಿದ್ದಾರೆ.
ಆದರೆ, ವೈದ್ಯರು ಇದನ್ನು ಸಮೂಹ ಸನ್ನಿ, ಮಾನಸಿಕ ಒತ್ತಡದಿಂದಾಗಿರುವ ಪರಿಣಾಮ ಎಂದಿದ್ದಾರೆ. ಪ್ರವಾಹದ ಸಂದರ್ಭದಲ್ಲಾದ ದುರಂತಗಳನ್ನು ನೋಡಿರುವುದರಿಂದ ಮಕ್ಕಳಿಗೆ ಅದೇ ಮನಸ್ಸಿನಲ್ಲಿ ಅಚ್ಚಾಗಿದೆ. ಶಾಲಾ ಕಟ್ಟಡಗಳನ್ನು ಪ್ರವೇಶಿಸಿದಾಗ ವಾತವರಣ ಹೊಸದಾದ ಹಿನ್ನೆಲೆಯಲ್ಲಿ ಅದೇ ದುಸ್ವಪ್ನಗಳಿಂದ ಹೆದರಿ ಈ ರೀತಿ ವರ್ತಿಸುತ್ತಿದ್ದಾರೆಂದು ಹೇಳಿದ್ದಾರೆ. ಇದಕ್ಕೂ ಮುನ್ನ ಚಂಪಾವತ್ ಜಿಲ್ಲೆಯಲ್ಲೂ ಇದೇ ರೀತಿಯ ಘಟನೆ ವರದಿಯಾಗಿ, ಆ ವಿಡಿಯೊ ವೈರಲ್ ಕೂಡ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.