ಕೂಳೂರು-ಬೈಕಂಪಾಡಿ ಹೆದ್ದಾರಿಯಲ್ಲಿ ಫ್ಲೈಓವರ್‌ಗೆ ಒಲವು

ಸರಕು ವಾಹನಗಳ ಓಡಾಟಕ್ಕೆ ಪ್ರತ್ಯೇಕ ರಸ್ತೆ; ಪ್ರಯಾಣಿಕ ವಾಹನಗಳಿಗೆ ಅನುಕೂಲ

Team Udayavani, Oct 6, 2021, 6:44 AM IST

ಕೂಳೂರು-ಬೈಕಂಪಾಡಿ ಹೆದ್ದಾರಿಯಲ್ಲಿ ಫ್ಲೈಓವರ್‌ಗೆ ಒಲವು

ಮಹಾನಗರ: ಕೈಗಾರಿಕೆ ವ್ಯಾಪ್ತಿಯನ್ನೇ ಹೊಂದಿರುವ ಕೂಳೂರು ಸೇತುವೆ ಸಮೀಪದ ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಸರಕು ವಾಹನಗಳ ಓಡಾಟಕ್ಕಾಗಿ ಪ್ರತ್ಯೇಕ ರಸ್ತೆ ಆವಶ್ಯಕವಿರುವ ಕಾರಣದಿಂದ ಪ್ರಯಾಣಿಕ ವಾಹನಗಳಿಗೆ ಅನುಕೂಲವಾಗುವಂತೆ ಫ್ಲೈಓವರ್‌ ನಿರ್ಮಾಣಕ್ಕೆ ಸ್ಥಳೀಯ ಕೈಗಾರಿಕೆ ಪ್ರಮುಖರು ಒಲವು ವ್ಯಕ್ತಪಡಿಸಿದ್ದಾರೆ.

ನವಮಂಗಳೂರು ಬಂದರು ಮಂಡಳಿಯು ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ತೋರಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಹಲವು ಕಂಪೆನಿಗಳ ನೆರವು ನೀಡುವ ನಿರೀಕ್ಷೆಯಿದೆ. ಈ ಸಂಬಂಧ ಮುಂದಿನ 3 ತಿಂಗಳೊಳಗೆ ಇಂಡಿಯನ್‌ ಪೋರ್ಟ್‌ ರೈಲ್‌ ಆ್ಯಂಡ್‌ ರೋಪ್‌ವೇ ಕಾರ್ಪೋರೆಷನ್‌ ಲಿ. (ಐಪಿಆರ್‌ಸಿಎಲ್‌) ವತಿಯಿಂದ ಡಿಪಿಆರ್‌ ಸಿದ್ಧಪಡಿಸಲು ಉದ್ದೇಶಿಸಲಾಗಿದೆ.

ಒಟ್ಟು 3.3 ಕಿ.ಮೀ. ಉದ್ದದ ಚತುಷ್ಪಥ ಫ್ಲೈಓವರ್‌ಗೆ ಚಿಂತನೆ ನಡೆಸಲಾಗಿದೆ. ಅಂದಾಜು 450 ಕೋ.ರೂ. ಅಂದಾಜು ವೆಚ್ಚದ ನಿರೀಕ್ಷೆಯಿದೆ. ಸದ್ಯದ ಪ್ರಕಾರ ಶೇ. 25ರಷ್ಟು ಮೊತ್ತ ಎನ್‌ಎಂಪಿಟಿ ನೀಡಿದರೆ, ಉಳಿದ ಮೊತ್ತವನ್ನು ವಿವಿಧ ಕೈಗಾರಿಕೆಗಳು, ಸಾಗರಮಾಲ ಯೋಜನೆಯಿಂದ ವಿನಿಯೋಗಿಸುವ ಬಗ್ಗೆ ಪ್ರಾರಂಭಿಕ ಮಾತುಕತೆ ನಡೆಯುತ್ತಿದೆ.

ಕೂಳೂರು ಸೇತುವೆಯ ಸನಿಹದ ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿ ಜಂಕ್ಷನ್‌ವರೆಗೆ ಕೆಐಒಸಿಎಲ್‌, ಎನ್‌ಎಂಪಿಟಿ, ಎಂಸಿಎಫ್‌, ಟೋಟಲ್‌ ಗ್ಯಾಸ್‌, ಚೆಟ್ಟಿನಾಡ್‌ ಸಿಮೆಂಟ್‌, ಗೈಲ್‌ ಸಹಿತ ಹಲವು ಕೈಗಾರಿಕೆ ಸಂಬಂಧಿತ ಸಂಸ್ಥೆಗಳಿವೆ. ಬೈಕಂಪಾಡಿ ಕೈಗಾರಿಕೆ ಪ್ರದೇಶ, ಎಸ್‌ಇಝಡ್‌, ಎಂಆರ್‌ಪಿಎಲ್‌ ಸಹಿತ ವಿವಿಧ ಕೈಗಾರಿಕೆ ಪ್ರದೇಶಕ್ಕೆ ಸಂಪರ್ಕ ಕೂಡ ಇದೇ ರಸ್ತೆ ಆಗಿರುವುದರಿಂದ ಇಲ್ಲಿ ನಿತ್ಯ 10 ಸಾವಿರಕ್ಕೂ ಅಧಿಕ ಸರಕು ತುಂಬಿದ ವಾಹನಗಳೇ ಸಂಚರಿಸುತ್ತಿವೆ. ಜತೆಗೆ ಹಲವು ಘನವಾಹನಗಳು ಈ ವ್ಯಾಪ್ತಿಯ ರಸ್ತೆಯ ಬದಿಯಲ್ಲಿ ನಿಂತಿರುವುದರಿಂದ ಖಾಸಗಿ ವಾಹನಗಳ ಓಡಾಟಕ್ಕೂ ಸಮಸ್ಯೆ ಆಗುತ್ತಿದೆ. ಈ ಕಾರಣದಿಂದ ಇಲ್ಲಿ ಫ್ಲೈಓವರ್‌ ನಿರ್ಮಾಣ ಅಗತ್ಯ ಎಂದು ಮನಗಂಡು ಹೊಸ ಯೋಜನೆಗೆ ಚಿಂತನೆ ನಡೆಸಲಾಗಿದೆ.

ಭಾರತೀಯ ಕೈಗಾರಿಕೆ ಒಕ್ಕೂಟದ ದ.ಕ. ಉಪಾಧ್ಯಕ್ಷ ಗೌರವ್‌ ಹೆಗ್ಡೆ ಪ್ರಕಾರ, ಬೈಕಂಪಾಡಿ ಪ್ರದೇಶದಲ್ಲಿ ಇದೀಗ ಘನ ವಾಹನಗಳ ಓಡಾಟ ಅಧಿಕವಾಗಿವೆ. ಮುಂದಿನ 5 ವರ್ಷಗಳಲ್ಲಿ ಇದರ ಸಂಖ್ಯೆ ದುಪ್ಪಟ್ಟಾಗಲಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಇಲ್ಲಿ ಫ್ಲೈಓವರ್‌ ಪರಿಕಲ್ಪನೆ ಭವಿಷ್ಯದ ದೃಷ್ಟಿಯಿಂದ ಅಗತ್ಯವಿದೆ ಎನ್ನುತ್ತಾರೆ.

ಇದನ್ನೂ ಓದಿ:ಪಿಲಿಕುಳದ ಹನುಮಾನ್‌ ಲಂಗೂರ್‌ “ರಾಜು’ ಸಾವು

ಸರಕು ಸಾಗಾಟಕ್ಕೆ ಅನುಕೂಲ
“ಆರು ಪಥಗಳ ಕೂಳೂರು ಸೇತುವೆ ಕಾರ್ಯಗತವಾದರೆ ಈ ಭಾಗದಲ್ಲಿ ಸರಕು ಸಾಗಾಟದ ತೊಂದರೆ ನೀಗಲಿದೆ. ಜತೆಗೆ, ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆ ಕಾಮಗಾರಿಗಳೂ ಮುಂದಿನ ಹಂತದಲ್ಲಿ ಪೂರ್ಣಗೊಳ್ಳುವ ಕಾರಣದಿಂದ ಮಂಗಳೂರಿಗೆ ಸರಕು ಸಾಗಾಟ ವಾಹನಗಳ ಆಗಮನಕ್ಕೆ ಉಪಕಾರವಾಗಲಿದೆ. ಹೀಗಿರುವಾಗ ಮಂಗಳೂರಿನ ಕೈಗಾರಿಕೆ ಕೇಂದ್ರದ ಭಾಗದಲ್ಲಿ ವಾಹನ ದಟ್ಟಣೆಯನ್ನು ನಿಭಾಯಿಸಲು ಫ್ಲೈಓವರ್‌ ಸೂತ್ರ ಅಗತ್ಯವಾಗಿದೆ’ ಎಂಬುದು ಎನ್‌ಎಂಪಿಟಿ ಅಭಿಪ್ರಾಯ.

ಭಾಗೀದಾರರ ಸಭೆ
ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿವರೆಗೆ ಫ್ಲೈಓವರ್‌ ನಿರ್ಮಾಣ ಸಂಬಂಧ ಎನ್‌ಎಂಪಿಟಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದಿದೆ. ಸ್ಥಳೀಯ ಭಾಗೀದಾರರಾದ ಮಂಗಳೂರು ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ, ಎಂಆರ್‌ಪಿಎಲ್‌, ರಾ.ಹೆದ್ದಾರಿ ಪ್ರಾಧಿಕಾರ, ಕೆಐಓಸಿಎಲ್‌, ಎಂಸಿಎಫ್‌, ಕೆಸಿಸಿಐ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

ಫ್ಲೈಓವರ್‌ ಜಾರಿಗೆ ಮಾತುಕತೆ
ಕೆಐಒಸಿಎಲ್‌ ಜಂಕ್ಷನ್‌ನಿಂದ ಬೈಕಂಪಾಡಿವರೆಗೆ ಫ್ಲೈಓವರ್‌ ನಿರ್ಮಾಣದ ಅಗತ್ಯದ ಬಗ್ಗೆ ಎನ್‌ಎಂಪಿಟಿ ವತಿಯಿಂದ ಸಭೆ ನಡೆದಿದೆ. ಯೋಜನೆಯ ಸಾಧ್ಯಸಾಧ್ಯತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಸ್ಥಳೀಯ ಭಾಗೀದಾರರನ್ನು ಸೇರಿಸಿಕೊಂಡು ಯೋಜನೆ ಜಾರಿಗೆ ಅಲ್ಲಿ ಮಾತುಕತೆ ನಡೆದಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂಬ ಬಗ್ಗೆ ಅಭಿಪ್ರಾಯವಿದೆ.
-ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮಂಗಳೂರು ಪಾಲಿಕೆ

ಘನ ವಾಹನಗಳಿಗೆ ಅನುಕೂಲ
ಕೈಗಾರಿಕೆಗಳಿಗೆ ಸಂಬಂಧಿಸಿದ ಘನ ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ನೆಲೆಯಲ್ಲಿ ಕೂಳೂರು-ಬೈಕಂಪಾಡಿ ಮಧ್ಯೆ 3.3 ಕಿ.ಮೀ. ಉದ್ದ ಫ್ಲೈಓವರ್‌ ನಿರ್ಮಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. 8.35 ಮೀ. ಎತ್ತರದಲ್ಲಿ ಫ್ಲೆ$çಓವರ್‌ ಬಗ್ಗೆ ಚರ್ಚೆ ನಡೆಸಲಾಗಿದೆ. ಐಪಿಆರ್‌ಸಿಎಲ್‌ ವತಿಯಿಂದ ಡಿಪಿಆರ್‌ ಆಗಲಿದೆ. ಇದು ಸಾಧ್ಯವಾದರೆ ಘನ ವಾಹನಗಳು ಈಗಿನ ರಸ್ತೆಯಲ್ಲಿ ಹಾಗೂ ಸಾರ್ವಜನಿಕರ ವಾಹನಗಳು ಫ್ಲೈಓವರ್‌ನಲ್ಲಿ ಸಂಚರಿಸಬಹುದಾಗಿದೆ.
-ಜೀವನ್‌ ಸಲ್ಡಾನ್ಹಾ, ಅಧ್ಯಕ್ಷರು, ಭಾರತೀಯ ಕೈಗಾರಿಕೆ ಒಕ್ಕೂಟ, ದ.ಕ.

– ದಿನೇಶ್‌ ಇರಾ

ಟಾಪ್ ನ್ಯೂಸ್

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

4-mng-2

Mangaluru: ಹೆಲಿಕಾಪ್ಟರ್ ಸಂಚಾರ: ಸ್ಥಳ ಬದಲಾವಣೆ

6

Mangaluru; ನಗರದ ಇನ್ನಷ್ಟು ಕಡೆ ಬೀದಿ ಬದಿ ವ್ಯಾಪಾರಸ್ಥರ ವಲಯ: ಮೇಯರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.