ಕರಾವಳಿಯಲ್ಲಿ ಮಂಜು, ಮೋಡ ಕವಿದ ವಾತಾವರಣ
Team Udayavani, Feb 7, 2022, 6:20 AM IST
ಮಂಗಳೂರು/ ಉಡುಪಿ: ಕರಾವಳಿಯಲ್ಲಿ ಕೆಲವು ದಿನಗಳಿಂದ ಬೆಳಗಿನ ಸಮಯ ಉತ್ತಮ ಚಳಿ ಕಾಣಿಸಿಕೊಳ್ಳುತ್ತಿದೆ. ಬೆಳಗ್ಗೆ ಮಂಜು ಮುಸುಕಿದ ವಾತಾವರಣವೂ ಕಂಡುಬರುತ್ತಿದೆ.
ರವಿವಾರ ಸಂಜೆಯ ವೇಳೆಗೆ ಕೊಡಗು, ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಮೋಡ ಕವಿದ ವಾತಾವರಣವೂ ಕಂಡು ಬಂದಿದ್ದು, ಸುಳ್ಯ ತಾಲೂಕಿನ ಬಾಳಿಲ ಮತ್ತಿತರ ಕೆಲವೆಡೆ ತುಂತುರು ಮಳೆಯಾಗಿದೆ.
ಉಡುಪಿ ಭಾಗದಲ್ಲಿ ರವಿವಾರ ಬೆಳಗ್ಗೆ ಮೋಡ ಕಂಡುಬಂದಿತ್ತು. ಮೋಡದ ವಾತಾವರಣ ಸೋಮವಾರ ಕೂಡ ಇರುವ ಸಾಧ್ಯತೆಗಳಿದ್ದು, ಒಂದೆರಡು ಕಡೆ ಚದುರಿದಂತೆ ಮಳೆಯಾಗುವ ಸಂಭಾವ್ಯತೆ ಇದೆ.
ರವಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಗರಿಷ್ಠ ಉಷ್ಣಾಂಶ 29.5 ಡಿಗ್ರಿ ಸೆ. ಇದ್ದು, ಇದು ವಾಡಿಕೆಗಿಂತ 3.9 ಡಿಗ್ರಿ ಸೆ. ಇಳಿಕೆಯಾಗಿದೆ.
ಹಾಗೆಯೇ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆ. ಇತ್ತು. ಪಣಂಬೂರಿನಲ್ಲಿ ಗರಿಷ್ಠ ಉಷ್ಣಾಂಶ 32.2 ಡಿಗ್ರಿ ಸೆ. ಮತ್ತು ಕನಿಷ್ಠ ಉಷ್ಣಾಂಶ 20.1 ಡಿಗ್ರಿ ಸೆ. ಇತ್ತು.
ಎರಡು ದಿನಗಳ ಹಿಂದೆ ಅಂದರೆ ಶುಕ್ರವಾರ ಕನಿಷ್ಠ 21 ಡಿಗ್ರಿ ಹಾಗೂ ಗರಿಷ್ಠ 31ಡಿಗ್ರಿ ಉಷ್ಣಾಂಶ ಇತ್ತು. ಈಗ 2 ದಿನಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶಗಳಲ್ಲಿ ತಲಾ 1 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.