ಕಟಪಾಡಿ: ಮೂಕ ಪ್ರಾಣಿಗಳ ಹಸಿವು ನೀಗಿಸುವ ಮೂಲಕ ಮಾನವೀಯತೆ
Team Udayavani, Apr 22, 2020, 4:52 PM IST
ಕಟಪಾಡಿ: ಸುಭಾಸ್‌ನಗರದ ಟೀಂ ಓಂಕಾರ್ ನಾಸಿಕ್ ಫ್ರೆಂಡ್ಸ್ ಹಸಿದ ಶ್ವಾನಗಳು, ಪಕ್ಷಿಗಳಿಗೆ ಕೋಳಿ ಪದಾರ್ಥ ಬೆರೆಸಿದ ಅನ್ನದ ಊಟ, ಪೆಡಿಗ್ರಿ, ಕುಡಿಯುವ ನೀರನ್ನು ನಿತ್ಯ ಉಣಬಡಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಶ್ವಾನಪ್ರಿಯರಾದ ಈ ತಂಡವು ಮೂಡಬೆಟ್ಟು, ಪಾಂಗಾಳ, ಕಲ್ಲಾಪು, ಕಟಪಾಡಿ, ಕೋಟೆ, ಮಟ್ಟು, ಅಗ್ರಹಾರ, ಮಣಿಪುರ, ದೆಂದೂರುಕಟ್ಟೆ, ಅಲೆವೂರು, ಕುರ್ಕಾಲು, ಸುಭಾಸ್‌ನಗರ, ಶಂಕರಪುರ, ಅರಸಿಕಟ್ಟೆ, ಬಂಟಕಲ್ಲು , ಸರಕಾರಿಗುಡ್ಡೆ ವ್ಯಾಪ್ತಿಯಲ್ಲಿ ತಮ್ಮ ಎರಡು ದ್ವಿಚಕ್ರ ವಾಹನಗಳ ಮೂಲಕ ಪಯಣಿಸಿ ಕಳೆದ ಸುಮಾರು 12 ದಿನಗಳಿಂದ ಹಸಿದ ಶ್ವಾನ -ಪಕ್ಷಿಗಳಿಗೆ ಆಹಾರವನ್ನು ನೀಡಲಾಗುತ್ತಿದೆ ಎಂದು ಉದಯವಾಣಿಗೆ ಮಾಹಿತಿಯನ್ನು ನೀಡುವ ಈ ತಂಡವು ಮೂಕ ಪ್ರಾಣಿ ಗಳ ಒಡನಾಡಿಗಳಾಗಿ ಮಾನವೀಯ ನೆಲೆಯಲ್ಲಿ ತಮ್ಮ ಶ್ವಾನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ದಿನನಿತ್ಯ ಸುಮಾರು 90ಕ್ಕೂ ಅಧಿಕ ನಾಯಿಗಳು, ಪಕ್ಷಿಗಳಿಗೆ ಮೂಡಬೆಟ್ಟುವಿನ ರೇಣುಕಾ ಮತ್ತು ಪುತ್ರಿ ಹರ್ಷಿತಾ ಅವರು ತಮ್ಮ ಮನೆಯಲ್ಲಿ 4 ಸೇರು ಅಕ್ಕಿ ಬಳಸಿ ಸಿದ್ಧಪಡಿಸಿದ ಅನ್ನ ಹಾಗೂ ಕೋಳಿ ಪದಾರ್ಥವನ್ನು ಬೇಯಿಸಿ ಈ ಯುವಕರ ತಂಡಕ್ಕೆ ನೀಡಿ ಬೆಂಬಲವನ್ನು ನೀಡುತ್ತಿದ್ದಾರೆ. ದಾನಿಗಳ ಸಹಕಾರದಿಂದ ಈ ಸೇವೆಯನ್ನು ನಡೆಸುತ್ತಿದ್ದಾರೆ. ತಂಡದಲ್ಲಿ ನಿತೇಶ್, ಕಾರ್ತಿಕ್, ಸುಜಿತ್, ಅಕ್ಷಿತ್, ಪ್ರಜ್ವಲ್, ವಿಜಯ್, ವಿನಯ್ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.