ಅಸ್ವಸ್ಥರಾಗಿದ್ದ ಮಕ್ಕಳು ಗುಣಮುಖ : ಹುಳು ಬೀಳದಂತೆ ಡಬ್ಬಿಯಲ್ಲಿ ಹಾಕಿದ್ದ ಮಾತ್ರೆಯಿಂದ ಯಡವಟು
Team Udayavani, Jan 5, 2022, 1:16 PM IST
ಚಿಂತಾಮಣಿ: ತಾಲೂಕಿನ ಕೈವಾರ ಹೋಬಳಿ ಮಸ್ತೇನಹಳ್ಳಿ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಫಲಾವ್ ಸೇವಿಸಿ ಅಸ್ವಸ್ಥಗೊಂಡಿದ್ದ ಮಕ್ಕಳು ಗುಣಮುಖರಾಗಿದ್ದಾರೆ.
ವಸತಿ ಶಾಲೆಯಲ್ಲಿ 6ರಿಂದ 8ನೇ ತರಗತಿಯ 270, 110 ಪಿಯು ವಿದ್ಯಾರ್ಥಿಗಳಿದ್ದು, ಬೆಳಗ್ಗೆ ಮಕ್ಕಳಿಗಾಗಿ ಫಲಾವ್ ಬಡಿಸಲಾಗಿತ್ತು. ಈ ವೇಳೆ ಹುಳುಗಳು ಬೀಳದಂತೆ ಸೋಯಾ ಡಬ್ಬಿಯಲ್ಲಿ ಬಟ್ಟೆ ಸುತ್ತಿ ಹಾಕಿದ್ದ ಮಾತ್ರೆ ಕಂಡು ಬಂದಿದ್ದು, ತಕ್ಷಣ ಎಚ್ಚೆತ್ತು ಊಟ ಸೇವನೆ ಮಾಡಿದ ಮಕ್ಕಳಿಗೆ ಬಿಸಿ ನೀರು ಕುಡಿಸಿ ವಾಂತಿ ಮಾಡಿಸಲಾಗಿದೆ. ಈ ವೇಳೆ ಕೆಲವು ಮಕ್ಕಳು ಭಯ ಬಿದ್ದು
ಅಸ್ವತ್ಥಗೊಂಡಿದ್ದರು. ತಕ್ಷಣ ಅವರನ್ನು ಕೈವಾರದ ಆಸ್ಪತ್ರೆಯಲ್ಲಿ ಗ್ಲೂಕೋಸ್ ನೀಡಿ ನಂತರ ಹಾಸ್ಟೆಲ್‌ಗೆ ಕರೆತರಲಾಗಿದೆ.
49 ಮಕ್ಕಳಿಗೆ ಫಲಾವ್ ಬಡಿಸಲಾಗಿತ್ತು ಎಂದು ಹೇಳಲಾಗಿದೆ. ಅಸ್ವತ್ಥಗೊಂಡಿದ್ದ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಉಳಿದವರಿಗೆ ರಾಗಿ ದೋಸೆ ಮಾಡಿ ಬಡಿಸಲಾಗಿದೆ. ಅಡುಗೆ ಮನೆಯಲ್ಲಿ,
ಉಪಾಹಾರ ಸೇವನೆ ಜಾಗದಲ್ಲಿ ಸ್ವತ್ಛತೆ ಕಾಪಾಡಿಕೊಂಡು ಬಂದಿದ್ದು, ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿತ್ತು ಎನ್ನಲಾಗಿದೆ. ಅಡುಗೆಯವರ ಕಣ್ ತಪ್ಪಿದ ಘಟನೆ ನಡೆದಿದೆ ಎನ್ನಲಾಗಿದೆ.
ಈ ವಿಚಾರ ತಿಳಿದ ತಕ್ಷಣ ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಪೂರ್ಣಿಮಾ ಚೂರಿ, ತಹಶೀಲ್ದಾರ್ ಹನುಮಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ, ಜಂಗನಸೀಗೇನಹಳ್ಳಿ ದೇವರಾಜ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಕ್ಕಳು ಮಾತನಾಡಿ, ನಮಗೆ ಸಮಯಕ್ಕೆ ಸರಿಯಾಗಿ ಬಿಸಿ
ಊಟ, ಶುದ್ಧವಾದ ನೀರು ಕೊಡುತ್ತಿದ್ದಾರೆ. ಜೊತೆಗೆ ಶಿಸ್ತು, ಶಿಕ್ಷಣ ಕಲಿಸುತ್ತಿದ್ದಾರೆ. ಯಾರಿಗೂ ತೊಂದರೆ ಆಗದಂತೆ ಚಿಕಿತ್ಸೆ ಕೊಡಿಸಿದ್ದಾರೆ ಎಂದು ನುಡಿದರು.
ಇದನ್ನೂ ಓದಿ : ಗಂಗಾವತಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಪೊಲೀಸರು: ಸದಸ್ಯರ ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.