Parliament: ಅರೆಕ್ಷಣ ಎಲ್ಲರೂ ಗಲಿಬಿಲಿಗೊಂಡೆವು- ನಳಿನ್ ಕುಮಾರ್
Team Udayavani, Dec 14, 2023, 12:13 AM IST
ಮಂಗಳೂರು: ಕಲಾಪ ನಡೆಯುತ್ತಿದ್ದಾಗಲೇ ಪ್ರೇಕ್ಷಕರ ಗ್ಯಾಲರಿಯಿಂದ ಒಮ್ಮಿಂದೊಮ್ಮೆಲೆ ಇಬ್ಬರು ಸದನಕ್ಕೆ ನುಗ್ಗಿದರು. ವ್ಯಕ್ತಿಯೊಬ್ಬ ಟೇಬಲ್ ಮೇಲಿನಿಂದ ಹಾರುತ್ತಾ ಬಂದಾಗ ನಾವು ಒಮ್ಮೆಗೆ ಗಲಿಬಿಲಿಗೊಂಡೆವು. ಅವರು ಏಕೆ ಹಾಗೆ ಮಾಡುತ್ತಿದ್ದಾರೆ ಎಂಬುದು ತತ್‌ಕ್ಷಣಕ್ಕೆ ಗೊತ್ತಾಗಲಿಲ್ಲ. ಆದರೆ ನಾವು ಯಾರೂ ಭಯ ಬೀಳಲಿಲ್ಲ. ಸಂಸದರೋರ್ವರು ಆತನನ್ನು ಹಿಡಿದುಕೊಂಡ ಕೂಡಲೇ ನಾನೂ ಸೇರಿಕೊಂಡೆ ಎಂದು ಸಂಸತ್‌ಗೆ ಆಗಂತುಕರು ನುಗ್ಗಿದಾಗ ಅವರನ್ನು ಹಿಡಿದ ಸಂಸದರ ಗುಂಪಿನಲ್ಲಿದ್ದ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಯುವಕನನ್ನು ಹಿಡಿದ ಕೂಡಲೇ ಕೆಲವು ಸಂಸದರು ಆತನಿಗೆ ನಾಲ್ಕೇಟು ಬಿಗಿದರು. ಅನಂತರ ಭದ್ರತಾ ಪಡೆಗಳಿಗೆ ಆತನನ್ನು ಒಪ್ಪಿ ಸಲಾಯಿತು ಎಂದು ನಳಿನ್ ಉದಯವಾಣಿಗೆ ತಿಳಿಸಿದರು.
ಆ ಗಲಾಟೆಯಲ್ಲಿ ಅವರು ಏನು ಬೊಬ್ಬೆ ಹಾಕುತ್ತಿದ್ದರೋ ತಿಳಿಯಲಿಲ್ಲ, ಮಾಹಿತಿ ಪ್ರಕಾರ ಅವರು ಸಿಆರ್‌ಪಿಸಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದು, ಅದನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ, ಮುಂದೆ ತನಿಖೆಯಲ್ಲಿ ಕಾರಣ ತಿಳಿಯಬಹುದು, ಸಂಸತ್ತಿನ ಒಳಗೆ ಇಬ್ಬರು ದುಷ್ಕರ್ಮಿ ಗಳು ಪ್ರವೇಶಿಸಿದ್ದರು ಎಂದು ತಿಳಿಸಿದರು.
ಒಬ್ಬ ಮೈಸೂರಿನವನು, ಸಹಜವಾಗಿ ಊರಿನವರು ಆಗ್ರಹಿಸಿದ ಹಿನ್ನೆಲೆಯಲ್ಲಿ ಪ್ರತಾಪ್‌ಸಿಂಹ ಅವರು ಆತನಿಗೆ ಪಾಸ್ ನೀಡಿರಬಹುದು ಎಂದು ನಳಿನ್ ತಿಳಿಸಿದರು.
ಕಲರ್ ಸ್ಪ್ರೆ ತಂದಿದ್ದು ಹೇಗೆ?
ಒಳಗೆ ದುಷ್ಕರ್ಮಿಗಳು ಧುಮುಕುತ್ತಿದ್ದಂತೆಯೇ ಶೂನಿಂದ ತೆಗೆದ ಕಲರ್ ಸ್ಪ್ರೆ ಬಿಟ್ಟರು, ಇದರಿಂದ ಅಲ್ಲಿ ಒಂದು ರೀತಿಯ ಘಾಟು ಆವರಿಸಿತು. ಹಿಂದೆ ಸಂಸತ್ತಿನಲ್ಲಿ ಶೂಗಳನ್ನೂ ತಪಾಸಣೆ ಮಾಡುತ್ತಿದ್ದರು, ಕೆಲವು ಸಮಯದಿಂದ ಸಂಸದರು ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಶೂ ತಪಾಸಣೆ ಮಾಡುತ್ತಿರಲಿಲ್ಲ, ಇದೇ ಅವಕಾಶವನ್ನು ದುಷ್ಕರ್ಮಿಗಳು ಬಳಸಿಕೊಂಡಿರುವ ಸಾಧ್ಯತೆ ಇದೆ ಎನ್ನುತ್ತಾರೆ ನಳಿನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.