Inflation: ಹಣದುಬ್ಬರ ನಿಯಂತ್ರಣಕ್ಕೆ ರಷ್ಯಾ ತೈಲ ನೆರವು- ಜೈಶಂಕರ್ ಪ್ರತಿಪಾದನೆ
Team Udayavani, Nov 16, 2023, 8:47 PM IST
ಲಂಡನ್: “ನಾವು ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲ ಖರೀದಿಸಿ ಇರಿಸಿದ್ದರಿಂದ ಜಗತ್ತಿನ ಹಣದುಬ್ಬರ ತಗ್ಗಿಸುವಲ್ಲಿ ನೆರವಾಗಿದ್ದೇವೆ. ನಮಗೆ ತೈಲ ಪೂರೈಸಿದ ರಷ್ಯಾಕ್ಕೆ ಧನ್ಯವಾದ ಸಮರ್ಪಿಸಬೇಕಾಗಿದೆ’
– ಹೀಗೆಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಲಂಡನ್‌ನಲ್ಲಿ ಹೇಳಿದ್ದಾರೆ. ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉಕ್ರೇನ್ ದಾಳಿಯ ಬಳಿಕ ಐರೋಪ್ಯ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಹಿಂದೇಟು ಹಾಕಿದವು. ಜತೆಗೆ ರಷ್ಯಾದಿಂದ ತೈಲ ಖರೀದಿ ಬಗ್ಗೆ ಎದ್ದಿದ್ದ ಆಕ್ಷೇಪಗಳನ್ನೂ ತಿರಸ್ಕರಿಸಿದ್ದಾರೆ .
“ನಮ್ಮ ಸರ್ಕಾರ ಎಚ್ಚರಿಕೆಯ ನಿಲುವು ತೆಗೆದುಕೊಂಡಿತು. ರಷ್ಯಾ ಹೊಂದಿರುವ ಸಂಪನ್ಮೂಲವನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ. ಏಷ್ಯಾದಿಂದ ದ್ರವೀಕೃತ ನೈಸರ್ಗಿಕ ಅನಿಲ ಐರೋಪ್ಯ ಒಕ್ಕೂಟಕ್ಕೂ ಪೂರೈಕೆಯಾಗುತ್ತಿದೆ ಎಂದರು. ಆ ಪೈಕಿ ಒಂದಂಶ ನಾವು ಖರೀದಿಸಿ, ಜಗತ್ತಿನ ಹಣದುಬ್ಬರ ತಗ್ಗಿಸಿದ್ದೇವೆ ಎಂದರು.
ಧರ್ಮಾತೀತವಲ್ಲ:
ಭಾರತದಲ್ಲಿನ ಜಾತ್ಯತೀತತೆ (ಸೆಕ್ಯುಲರಿಸಂ) ಬಗೆಗಿನ ಬಗ್ಗೆ ಮಾತನಾಡಿದ ಅವರು, ಧರ್ಮಗಳನ್ನು ಅನುಸರಿಸದೇ ಇರುವುದು ಅಲ್ಲ. ಎಲ್ಲ ಧರ್ಮಗಳಿಗೆ ಸಮಾನ ಗೌರವ ನೀಡುವುದೇ ಜಾತ್ಯತೀತತೆ ಎಂದರು. ಸಮಾನತೆಯ ಆಧಾರದಲ್ಲಿ ಹಿಂದಿನ ಸರ್ಕಾರಗಳು ಅನುಸರಿಸಿದ ನೀತಿಗಳಿಂದಾಗಿ ಆ ನಿಲುವು ಸ್ವಯಂ ಅವಹೇಳನಕಾರಿಯಾಗಿದೆ ಎಂದರು.
ಕಳವಾಗಿದ್ದ 2 ಮೂರ್ತಿಗಳು ಸ್ವದೇಶಕ್ಕೆ
ದೇಶದಿಂದ ಕಳವಾಗಿದ್ದ 8ನೇ ಶತಮಾನಕ್ಕೆ ಸೇರಿದ 2 ದೇವರ ವಿಗ್ರಹಗಳನ್ನು ಭಾರತಕ್ಕೆ ಕಳುಹಿಸುವ ಬಗ್ಗೆ ಸಚಿವ ಜೈಶಂಕರ್ ನಡೆಸಿದ ಯತ್ನ ಯಶಸ್ವಿಯಾಗಿದೆ. ಉ.ಪ್ರ.ದ ಲೊಖಾರಿ ಎಂಬಲ್ಲಿಂದ 1970 ಮತ್ತು 1980 ನಡುವಿನ ಅವಧಿಯಲ್ಲಿ ಕಳವಾಗಿದ್ದ ಯೋಗಿನಿ ಚಾಮುಂಡ ಮತ್ತು ಯೋಗಿನಿ ಗೋಮುಖೀ ವಿಗ್ರಹಗಳು ಮತ್ತೆ ಸ್ವದೇಶಕ್ಕೆ ಶೀಘ್ರವೇ ವಾಪಸಾಗಲಿವೆ. 1970ರ ಸಂದರ್ಭದಲ್ಲಿ ವಿಗ್ರಹ ಕಳ್ಳರ ಗುಂಪು ಅವುಗಳನ್ನು ಕಳವು ಮಾಡಿತ್ತು. ಇತ್ತೀಚೆಗೆ ಅವುಗಳು ಪತ್ತೆಯಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.