ಸಾವಿರ ಕಿ.ಮೀ. ಬೆಂಕಿ ರೇಖೆ ನಿರ್ಮಾಣ, 140 ಸಿಬಂದಿ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ರಕ್ಷಣೆಗೆ ಅರಣ್ಯ ಇಲಾಖೆ ಸನ್ನದ್ಧ
Team Udayavani, Jan 16, 2022, 6:15 AM IST
ಬೆಳ್ತಂಗಡಿ: ರಾಷ್ಟ್ರೀಯ ಉದ್ಯಾನವನಗಳಲ್ಲಿ ಪ್ರತೀ ಜನವರಿಯಿಂದ ಎಪ್ರಿಲ್ ಅವಧಿಯಲ್ಲಿ ಕಾಳ್ಗಿಚ್ಚು ಹಬ್ಬಿ ಅರಣ್ಯ ಮತ್ತು ಪ್ರಾಣಿ, ಪಕ್ಷಿ ಸಂಕುಲದ ಹಾನಿಗೆ ಕಾರಣವಾಗುತ್ತಿದ್ದು, ಈ ಬಾರಿ ಅರಣ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಜನವರಿ ಆರಂಭದಲ್ಲೇ ಕುದುರೆಮುಖ, ಸೋಮೇಶ್ವರ, ಮೂಕಾಂಬಿಕಾ ಉದ್ಯಾನವನದ ಅಂಚಿನಲ್ಲಿ 900ರಿಂದ 1,000 ಕಿ.ಮೀ. ಉದ್ದಕೆ ಬೆಂಕಿ ರೇಖೆ (ಫೈರ್‌ಲೈನ್) ನಿರ್ಮಿಸುತ್ತಿದೆ.
ಬೆಂಕಿ ತಡೆಗೆ 35 ಕ್ಯಾಂಪ್
ಕಾರ್ಕಳ, ಉಡುಪಿ, ಚಿಕ್ಕಮಗಳೂರು ವಿಭಾಗಕ್ಕೆ ಒಳಪಟ್ಟಂತೆ ಮೂಕಾಂಬಿಕಾ ವನ್ಯಜೀವಿ ಅಭಯಾ ಆರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ 1,000 ಕಿ.ಮೀ. ಪ್ರದೇಶದಲ್ಲಿ 35 ಕ್ಯಾಂಪ್ ರಚಿಸಿ ಪ್ರತೀ ಕ್ಯಾಂಪ್‌ಗೆ ನಾಲ್ವರಂತೆ ಒಟ್ಟು 140 ಸಿಬಂದಿಯನ್ನುನಿಯೋಜಿಸಲಾಗಿದೆ. ಅವರು ಜನವರಿಯಿಂದ ಎಪ್ರಿಲ್ ವರೆಗೆ ನಿಗಾ ವಹಿಸುತ್ತಾರೆ.
ಬಂಡೀಪುರ ದುರ್ಘಟನೆ
ಬಂಡೀಪುರದಲ್ಲಿ 2019ರಲ್ಲಿ ಕಾಳ್ಗಿಚ್ಚಿನಿಂದ 11 ಸಾವಿರ ಎಕ್ರೆಗೂ ಹೆಚ್ಚು ಅರಣ್ಯ ಸುಟ್ಟು ಹೋಗಿತ್ತು. ಎಚ್ಚೆತ್ತುಕೊಂಡ ಇಲಾಖೆ ಕಳೆದ ವರ್ಷ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿತ್ತು. ಇದರಿಂದಾಗಿ ಬಂಡೀಪುರ ಸಹಿತ ಇತರ ಎಲ್ಲೂ ದೊಡ್ಡಮಟ್ಟದ ಕಾಳಿYಚ್ಚು ಕಂಡು ಬಂದಿರಲಿಲ್ಲ.
ಇದನ್ನೂ ಓದಿ:ಚಾಲಕನಿಗೆ ಪೀಡ್ಸ್ ; ಬರೋಬ್ಬರಿ 10ಕಿ.ಮೀ. ಬಸ್ ಚಲಾಯಿಸಿದ ಪ್ರಯಾಣಿಕ ಮಹಿಳೆ! ವಿಡಿಯೋ ವೈರಲ್
ಕುದುರೆಮುಖ ರಾ. ಉದ್ಯಾನವನ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅತ್ಯಪರೂಪದ ಹುಲ್ಲುಗಾವಲುಗಳಿದ್ದು ಶೋಲಾ ಕಾಡುಗಳು ಆವರಿಸಿವೆ. ವಿಶೇಷ ಪ್ರಬೇಧಗಳ ಸರೀಸೃಪಗಳು, ಸಸ್ಯರಾಶಿ, ಪ್ರಾಣಿ ಪಕ್ಷಿಗಳ ಆವಾಸ ಸ್ಥಾನವಾಗಿರುವುದರಿಂದ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಕುದುರೆಮುಖ ಉದ್ಯಾನವನ ವ್ಯಾಪ್ತಿಯ ಕಾರ್ಕಳ ವಿಭಾಗದಲ್ಲಿ ಚಾರ್ಮಾಡಿ ಯಿಂದ ನಾರಾವಿ ವರೆಗೆ, ಉಡುಪಿ ವಿಭಾಗದಲ್ಲಿ ಈದು-ಕೊಲ್ಲೂರು, ಕೊಡಚಾದ್ರಿ ವರೆಗೆ, ಚಿಕ್ಕಮಗಳೂರು ವಿಭಾಗದ ಕುದುರೆಮುಖದಿಂದ ಕೆರೆಕಟ್ಟೆ ವರೆಗೆ ಒಟ್ಟು 125 ಕಿ.ಮೀ. ಬೆಂಕಿ ರೇಖೆ ನಿರ್ಮಿಸುತ್ತಿದೆ. ಸಂಸೆಯ ಎಳನೀರು, ದಿಡುಪೆಯ ಮಲ್ಲ, ಸವಣಾಲು, ಗುಂಡಲ್ ಪಾದೆ, ಮಲೆಕ್ಕಿಲದಲ್ಲಿ ಫೈರ್ ಕ್ಯಾಂಪ್ ರಚಿಸಿ 25 ಕಾವಲುಗಾರರನ್ನು ನಿಯೋಜಿಸಲಾಗಿದೆ.
ಏನಿದು ಬೆಂಕಿ ರೇಖೆ ?
ಕಾಳ್ಗಿಚ್ಚು ಸಂಭವಿಸಬಹುದಾದ ಪ್ರದೇಶಗಳ ಅರಣ್ಯದಂಚಿನಲ್ಲಿ ನಿರ್ದಿಷ್ಟ ಅಗಲಕೆ ಹುಲ್ಲು, ಗಿಡಗಂಟಿಗಳನ್ನು ತೆರವುಗೊಳಿಸಿ ಬೆಂಕಿ ವ್ಯಾಪಿಸದಂತೆ ತಡೆಯುವುದೇ ಬೆಂಕಿ ರೇಖೆ.
ಕಾಳ್ಗಿಚ್ಚು ತಪ್ಪಿಸಲು ಇಲಾಖೆಯು ಬೆಂಕಿ ರೇಖೆ ನಿರ್ಮಿಸುವುದಲ್ಲದೆ ಕಾವಲುಗಾರರನ್ನೂ ಇರಿಸಿದೆ.
ಆದರೂ ಕಾಳ್ಗಿಚ್ಚಿನ ವಿಚಾರದಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರ ಮುತುವರ್ಜಿ ಅತ್ಯಗತ್ಯ.
– ರುದ್ರೇನ್ ಪಿ., ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.