Beijing: ಡೈನೋಸಾರ್ ಮಾದರಿಯ ವಿಲಕ್ಷಣ ಹಕ್ಕಿಯ ಪಳಯುಳಿಕೆ!
Team Udayavani, Sep 7, 2023, 8:38 PM IST
ಬೀಜಿಂಗ್: 140 -150 ದಶಲಕ್ಷ ವರ್ಷಗಳ ಹಿಂದೆ ಚೀನಾದಲ್ಲಿ ಜೀವಿಸಿತ್ತು ಎನ್ನಲಾಗಿರುವ ವಿಚಿತ್ರ ಜೀವಿಯೊಂದರ ಅಸ್ಥಿಪಂಜರವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಡೈನೋಸಾರ್ ಪ್ರಾಣಿಯಂತೆ ಉದ್ದನೆಯ ಕಾಲುಗಳನ್ನು ಹೊಂದಿದ್ದು, ಹಕ್ಕಿಗಳಂತೆ ರೆಕ್ಕೆಯನ್ನೂ ಹೊಂದಿರುವ ಈ ವಿಲಕ್ಷಣ ಜೀವಿ ವಿಜ್ಞಾನಿಗಳಲ್ಲಿ ಪಕ್ಷಿಗಳ ವಿಕಸನದ ಬಗ್ಗೆಯೇ ಗೊಂದಲ ಮೂಡಿಸಿದೆ. ಫುಜಿಯಾನ್ ಪ್ರಾಂತ್ಯದಲ್ಲಿ ಜೀವಿಯ ಪಳಯುಳಿಕೆ ಪತ್ತೆಯಾಗಿದ್ದು, ವಿಜ್ಞಾನಿಗಳು ಅದನ್ನು ಫುಜಿಯಾನ್ವೆನೇಟರ್ ಎಂದು ಹೆಸರಿಸಿದ್ದಾರೆ.
ಚೈನೀಸ್ ಅಕಾಡೆಮಿ ಆಫ್ ಸೈನ್ಸ್‌ನ ವಿಜ್ಞಾನಿ ಮಿನ್ ವಾಂಗ್ ಈ ಕುರಿತು ಮಾಹಿತಿ ನೀಡಿದ್ದು, ಈ ಪಳಯುಳಿಕೆಯೇ ವಿಲಕ್ಷಣವಾಗಿದೆ. ಪಕ್ಷಿ ಪ್ರಭೇದವೆಂದು ವರ್ಗೀಕರಿಸೋಣವೆಂದರೆ ಡೈನೋಸಾರ್ ಮಾದರಿಯಲ್ಲಿ ಅದರ ಕಾಲುಗಳಿವೆ ಮತ್ತು ಯಾವುದೇ ಆಧುನಿಕ ಪಕ್ಷಿಗಳಿಗೂ ಹೋಲುವಂತಿಲ್ಲ. ಪ್ರಾಣಿ ಎಂದು ವರ್ಗೀಕರಿಸಲು ನೋಡಿದರೆ ಇದಕ್ಕೆ ರೆಕ್ಕೆಗಳಿದ್ದಿದ್ದು ತಿಳಿದುಬಂದಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಲಕ್ಷಣ ಜೀವಿಯ ಮೂಲ ಪತ್ತೆಹಚ್ಚಲು ಸಂಶೋಧನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನೂ ಜೀವಿಯ ತಲೆ ಬುರುಡೆ ಹಾಗೂ ಪಾದದ ಪಳಯುಳಿಕೆ ಪತ್ತೆಯಾಗದ ಹಿನ್ನೆಲೆಯಲ್ಲಿ ಅದರ ಆಹಾರ ಮತ್ತು ಜೀವನಶೈಲಿಯನ್ನು ಪತ್ತೆಹಚ್ಚಲು ಕಷ್ಟವಾಗುತ್ತಿದೆ ಎಂಬುದಾಗಿಯೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.