Foxconn – STMicro: ಫಾಕ್ಸ್‌ಕಾನ್ – ಎಸ್‌ಟಿಮೈಕ್ರೋ ಪಾಲುದಾರಿಕೆ?
Team Udayavani, Sep 7, 2023, 10:04 PM IST
ನವದೆಹಲಿ: ಖ್ಯಾತ ಟೆಕ್ ಸಂಸ್ಥೆ ಫಾಕ್ಸ್‌ಕಾನ್ ಗ್ರೂಪ್, ಎಸ್‌ಟಿಮೈಕ್ರೋಎಲೆಕ್ಟ್ರಾನಿಕ್ಸ್ ಎನ್‌ವಿ ಜತೆಗೆ ಸೇರಿ ಭಾರತದಲ್ಲಿ ಸೆಮಿ ಕಂಡಕ್ಟರ್ ಚಿಪ್ ಉತ್ಪಾದನಾ ಘಟಕ ಪ್ರಾರಂಭಿಸಲು ಯೋಜಿಸಿದೆ. ಇದಕ್ಕಾಗಿ ಒಟ್ಟಿಗೆ ಬಿಡ್ಡಿಂಗ್ ಮಾಡಲು ಚಿಂತಿಸಿದ್ದು, ಭಾರತದಿಂದ ಬೆಂಬಲ ಕೋರಲು ಬಯಸಿವೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.
ಆಟೋಮೊಬೈಲ್, ಕ್ಯಾಮೆರಾ, ಪ್ರಿಂಟರ್ ಸೇರಿದಂತೆ ಹಲವಾರು ವಸ್ತುಗಳಲ್ಲಿ ಬಳಸಲಾಗುವ 40ನ್ಯಾನೋಮೀಟರ್ ಚಿಪ್‌ಗ್ಳನ್ನು ಉತ್ಪಾದಿಸುವ ಘಟಕ ಸ್ಥಾಪನೆಗೆ ಉದ್ದೇಶಿಸಿ ಈ ಎರಡು ಸಂಸ್ಥೆಗಳು ಪಾಲುದಾರಿಕೆ ಹೊಂದಲು ಬಯಸಿವೆ. ಆದರೆ, ಈ ವಿಚಾರವನ್ನು ಉಭಯ ಸಂಸ್ಥೆಗಳು ಇನ್ನೂ ಖಾತರಿಪಡಿಸಿಲ್ಲ. ಈ ಹಿಂದೆ ವೇದಾಂತ್ ರಿಸೋರ್ಸಸ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಹೊಂದಲು ಫಾಕ್ಸ್‌ಕಾನ್ ಬಯಸಿತ್ತು. ಅದು ವಿಫಲವಾದ ಬಳಿಕ ಇದೀಗ ಮತ್ತೂಂದು ಯೋಜನೆಯತ್ತ ಕೈಚಾಚಿದೆ. ಇದು ಭಾರತದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ ಫಾಕ್ಸ್‌ಕಾನ್ ತನ್ನ ಅಸ್ತಿತ್ವ ವಿಸ್ತರಿಸಲು ಬಯಸುತ್ತಿರುವುದಕ್ಕೆ ನಿದರ್ಶನವೆಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.