Fraud Case: ಗೂಗಲ್‌ಪೇ ಪಿನ್ ನಂಬರ್ ಗಮನಿಸಿ 9 ಲಕ್ಷ ರೂ. ವಂಚನೆಗೈದ ಹೋಂನರ್ಸ್
Team Udayavani, Dec 12, 2024, 7:17 AM IST
ಕಾರ್ಕಳ: ಹೋಂನರ್ಸ್ ಸೇವೆಗೆ ಬಂದಿದ್ದ ಯುವಕನೋರ್ವ ಮನೆಯ ಯಜಮಾನರ ಮೊಬೈಲ್ ಬಳಕೆ ವೇಳೆ ಗೂಗಲ್ ಪೇ ಪಿನ್ ಕದ್ದು 9.80 ಲಕ್ಷ ರೂ. ವಂಚನೆ ಮಾಡಿದ ಬಗ್ಗೆ ಕಸಬಾ ಗ್ರಾಮದ ಶಶಿಧರ್ (75) ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ತಿಕ್ ಶೆಟ್ಟಿ ಆರೋಪಿ. ಕಸಬಾ ಗ್ರಾಮದ ಶಶಿಧರ್ ಅವರ ಕೋರಿಕೆ ಯಂತೆ ಅಲೈಟ್‌ಕೇರ್ ಸಂಸ್ಥೆಯ ರತ್ನಾಕರ್ ಅವರು ಹೋಮ್ ನರ್ಸ್ ಆಗಿ ಕಾರ್ತಿಕ್‌ನನ್ನು ನೇಮಿಸಿದ್ದು, ಅವರನ್ನು ಈ ಪ್ರಕರಣದಲ್ಲಿ 2ನೇ ಆರೋಪಿಯನ್ನಾಗಿ ಮಾಡಲಾಗಿದೆ.
1ನೇ ಆರೋಪಿ ಕಾರ್ತಿಕ್ ಶೆಟ್ಟಿ ಹೋಂ ನರ್ಸ್ ಆಗಿ ಶಶಿಧರ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಯಜಮಾನರು ಮೊಬೈಲ್‌ನಲ್ಲಿ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅವರ ಗೂಗಲ್ ಪೇ ಪಿನ್ ನಂಬರ್ ಅನ್ನು ಗಮನಿಸಿದ್ದ.
ಈ ಪಿನ್ ಅನ್ನು ಬಳಸಿ ಕಾರ್ತಿಕ್, ಶಶಿಧರ್ ಅವರ ಖಾತೆಯಿಂದ 9.80 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಗೂಗಲ್ ಪೇ ಮುಖಾಂತರವೇ ವರ್ಗಾವಣೆ ಮಾಡಿದ್ದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರ ವಿಚಾರಣೆ ಪ್ರಗತಿಯಲ್ಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.