Fraud Case ಕೆನರಾ ಬ್ಯಾಂಕ್ ಹೆಸರಲ್ಲಿ ಸಂದೇಶ ಕಳುಹಿಸಿ 3.27 ಲಕ್ಷ ರೂ. ವಂಚನೆ
Team Udayavani, May 15, 2024, 10:00 PM IST
ಗಂಗೊಳ್ಳಿ: ಕೆನರಾ ಬ್ಯಾಂಕ್ ಹೆಸರಲ್ಲಿ ಮರವಂತೆಯ ವ್ಯಕ್ತಿಯೊಬ್ಬರಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, 3.27 ಲಕ್ಷ ರೂ. ಇವರ ಖಾತೆಯಿಂದ ವಿತ್ ಡ್ರಾ ಮಾಡಿಕೊಂಡಿರುವ ಘಟನೆ ಮೇ 14ರಂದು ನಡೆದಿದೆ.
ಮರವಂತೆಯ ರಾಜೇಶ್ (43) ಅವರ ವಾಟ್ಸ್‌ಆ್ಯಪ್‌ಗೆ 08392086280 ನಂ.ನಿಂದ ಸಂದೇಶ ಬಂದಿದ್ದು, ಅದರಲ್ಲಿ ಕೆನರಾ ಬ್ಯಾಂಕ್ ಎಂಬುದಾಗಿ ಬರೆಯಲಾಗಿತ್ತು. ಕೂಡಲೇ ರಾಜೇಶ್ ಕೆನರಾ ಬ್ಯಾಂಕ್‌ಗೆ ಹೋಗಿ ಮ್ಯಾನೇಜರ್ ಅವರಲ್ಲಿ ವಿಚಾರಿಸಿದಾಗ ತಮ್ಮ ಬ್ಯಾಂಕ್‌ನಿಂದ ಇಂತಹ ಯಾವುದೇ ಸಂದೇಶ ಕಳುಹಿಸಿಲ್ಲವಾಗಿ, ಕೂಡಲೇ ಆ ಸಂದೇಶ ಡಿಲೀಟ್ ಮಾಡುವಂತೆ ಹೇಳಿದ್ದಾರೆ. ಅದರಂತೆ ಬ್ಯಾಂಕ್‌ನಲ್ಲಿಯೇ ಅದನ್ನು ಡಿಲೀಟ್ ಮಾಡಿದ್ದಾರೆ.
ಆದರೆ ಅದೇ ದಿನ ಸಂಜೆ 5.50ರಿಂದ 7.30ರ ಮಧ್ಯದ ಅವಧಿಯಲ್ಲಿ ಇವರ ಎಸ್‌ಬಿ ಖಾತೆಯಿಂದ 48,900 ರೂ., ಎಸ್‌ಬಿ ಸೆಲೆಕ್ಟ್ ಖಾತೆಯಿಂದ 60,900 ರೂ., ಓಡಿ ಖಾತೆಯಿಂದ 1.69 ಸಾವಿರ ರೂ., ಕ್ರೆಡಿಟ್ ಕಾರ್ಡ್‌ನಿಂದ 49,162 ರೂ. ಸೇರಿ ಒಟ್ಟು 3.27 ಲಕ್ಷ ರೂ. ಯಾರೋ ವಿತ್ ಡ್ರಾ ಮಾಡಿಕೊಂಡು ರಾಜೇಶ್ ಅವರಿಗೆ ವಂಚಿಸಿರುವುದಾಗಿದೆ. ಆ ಸಂದೇಶ ಕಳುಹಿಸಿದ ಲಿಂಕ್ ತೆರೆದಾಗ ಯಾವುದೋ ಆ್ಯಪ್ ತನ್ನಷ್ಟಕ್ಕೆ ತೆರೆದುಕೊಂಡಿದೆ. ಅದರ ಮೂಲಕ ಯಾರೋ ಇವರ ಹೆಸರಲ್ಲಿ ಎಟಿಎಂ ಕೇಂದ್ರಕ್ಕೆ ತೆರಳಿ ಇವರ ಖಾತೆಯಿಂದ ಹಣ ತೆಗೆಯಲು ಹೋದಾಗ ಒಟಿಪಿ ನಂಬರ್ ಇವರಿಗೆ ಬಂದಿದೆ, ಅವರಿಗೂ ಬಂದಿದ್ದು, ಅದನ್ನು ಹಾಕಿ, ಆ ಸೈಬರ್ ಕಳ್ಳರು ಹಣವನ್ನು ತೆಗೆದಿದ್ದಾರೆ ಎನ್ನಲಾಗಿದೆ.
ರಾಜೇಶ್ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.