Malpe: ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ವಂಚನೆ
Team Udayavani, Nov 30, 2023, 11:56 PM IST
ಮಲ್ಪೆ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಪ್ರಕರಣದ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಳಾರ್ಕಳಬೆಟ್ಟು ಗ್ರಾಮದ ನೇಜಾರಿನ ಓಡ್ರಿನ್ ಡಿ’ಸೋಜಾ ಅವರು ಕಲ್ಯಾಣಪುರ ತೋನ್ಸೆಯ ರಾಯ್ಸನ್ ಅಂಟೋನಿ ಬರೆಟ್ಟೋ ಅವರಲ್ಲಿ ಯು.ಕೆ. ಮತ್ತು ಕೆನಡಾ ದೇಶದಲ್ಲಿ ಹಲವು ಉದ್ಯೋಗಗಳಿವೆ. ಅದಕ್ಕೆ 5 ಲ.ರೂ. ಖರ್ಚಾಗುತ್ತದೆ. 2 ಕಂತುಗಳಲ್ಲಿ ಪಾವತಿಸುವಂತೆ ತಿಳಿಸಿದ್ದರು. ಮೊದಲು 2.50 ಲ.ರೂ. ಅನ್ನು ಬಹ್ರೈನ್‌ನಲ್ಲಿರುವ ರಾಜು ಕೈತ ಅಂಧ್ರಪ್ರದೇಶ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವಂತೆ ತಿಳಿಸಿದ್ದರು. ಅದಕ್ಕೆ ಒಪ್ಪಿಕೊಂಡ ರಾಯ್ಸನ್ ಅಂಟೋನಿ ಅವರು ಹಣವನ್ನು ವರ್ಗಾವಣೆ ಮಾಡಿದ್ದರು.
ಇದಾಗಿ ಮೂರು ತಿಂಗಳು ಕಳೆದರೂ ಯಾವುದೇ ವೀಸಾ ಸಿಗಲಿಲ್ಲ. ಈ ಬಗ್ಗೆ ರಾಜು ಕೈತ ಅವರಿಗೆ ಕರೆ ಮಾಡಿ ಸಂಪರ್ಕಿಸಿದಾಗ ಬಾಕಿ ಉಳಿದ ಎರಡೂವರೆ ಲಕ್ಷ ರೂಪಾಯಿ ನೀಡುವಂತೆ ತಿಳಿಸಿದರು. ಅದರಂತೆ ರಾಯ್ಸನ್ ಅಂಟೋನಿ ಬರೆಟ್ಟೋ ಅವರು ಆದೇ ಖಾತೆಗೆ ಉಳಿದ ಹಣವನ್ನು ವರ್ಗಾಯಿಸಿದ್ದರು. ಆನಂತರ ಕೆಲವು ದಿನಗಳು ಕಳೆದರೂ ವೀಸಾ ಮಾತ್ರ ಸಿಗಲಿಲ್ಲ. ಅನುಮಾನಗೊಂಡ ಈ ಬಗ್ಗೆ ಹಣ ವಾಪಸು ಕೇಳಿದ್ದಕ್ಕೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ರಾಯ್ಸನ್ ಅಂಟೋನಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.