Fraud : ಆನ್ಲೈನ್ ಮೂಲಕ ಸಾವಿರಾರು ರೂ.ವಂಚನೆ
Team Udayavani, Aug 31, 2023, 11:51 PM IST
ಮಣಿಪಾಲ: ಆನ್ಲೈನ್ ಮೂಲಕ ಯುವತಿಗೆ ಸಾವಿರಾರು ರೂ. ವಂಚಿಸಿದ ಘಟನೆ ನಡೆದಿದೆ.
ಹೆಲ್ಲಿ ಪಂಚಲ್ (20) ಅವರು ಆ. 30ರಂದು ಸ್ವಿಗ್ಗಿ ಆ್ಯಪ್ನಲ್ಲಿ ತಿನಿಸುಗಳನ್ನು ಆರ್ಡರ್ ಮಾಡಿ 358 ರೂ.ಗಳನ್ನು ಯುಪಿಐ ಮೂಲಕ ಪಾವತಿ ಮಾಡಿ ಬಳಿಕ ಆ ತಿನಿಸುಗಳನ್ನು ರದ್ದುಪಡಿಸಿದ್ದರು. ಆದರೆ ಸ್ವಿಗ್ಗಿ ಆ್ಯಪ್ನ ಕಸ್ಟಮರ್ ಕೇರ್ನವರು ಹಣವನ್ನು ವಾಪಸು ನೀಡುವುದಿಲ್ಲ ಎಂದು ತಿಳಿಸಿದ್ದರು. ಬಳಿಕ ಹೆಲ್ಲಿ ಪಂಚಲ್ ಅವರ ಮೊಬೈಲ್ ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ನಾವು ಸ್ವಿಗ್ಗಿ ಕಸ್ಟಮರ್ ಕೇರ್ನಿಂದ ಮಾತನಾಡುವುದಾಗಿ ತಿಳಿಸಿ, ಎನಿ ಡೆಸ್ಕ್ ಆ್ಯಪ್ ಡೌನ್ಲೋಡ್ ಮಾಡಲು ತಿಳಿಸಿದ್ದರು. ಅದರಂತೆ ಮಾಡಿದ ಬಳಿಕ ಎಲ್ಲ ಮಾಹಿತಿಯನ್ನು ಪಡೆದ ಆರೋಪಿಗಳು ಹೆಲ್ಲಿ ಪಂಚಲ್ ಅವರ ಬ್ಯಾಂಕ್ ಆಫ್ ಬರೋಡಾ ಖಾತೆಯಲ್ಲಿದ್ದ 27,951ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Shirva: ಏಷ್ಯನ್ ಜೂನಿಯರ್ ವೇಟ್ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Udupi; ಗೀತಾಮೃತಸಾರ ಮರುಮುದ್ರಿತ ಕೃತಿ ಅನಾವರಣ
Malpe: ಮೀಟಿಂಗ್ ರೂಮ್ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು
Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ
MUST WATCH
ಹೊಸ ಸೇರ್ಪಡೆ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Mangaluru: ವೆನ್ಲಾಕ್ನಲ್ಲಿ ದೊರೆಯಲಿದೆ ಕಿಮೋಥೆರಪಿ
Ullal: ತೊಕ್ಕೊಟ್ಟು ಜಂಕ್ಷನ್ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Bantwal: ಬಿ.ಸಿ.ರೋಡ್ನ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.