Matrimonial: ಮದುವೆ ವೆಬ್‌ಗಳ ಮೂಲಕವೂ ವಂಚನೆ
-"ದುಬಾರಿ ಉಡುಗೊರೆ" ಹೆಸರಿನಲ್ಲಿ ಹೆಚ್ಚುತ್ತಿರುವ ವಂಚನೆ ಪ್ರಕರಣಗಳು: ಕೇಂದ್ರ ಎಚ್ಚರಿಕೆ
Team Udayavani, Aug 12, 2023, 5:21 AM IST
ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಡೇಟಿಂಗ್ ಮತ್ತು ಮದುವೆ ವೆಬ್‌ಸೈಟ್‌ಗಳ ಮೂಲಕ ನಡೆಯುವ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ನಾಗರಿಕರು ಅದರಲ್ಲೂ ಮುಖ್ಯವಾಗಿ ಯುವತಿಯರು/ಮಹಿಳೆಯರು ಜಾಗ್ರತೆ ವಹಿಸುವಂತೆ ಕೇಂದ್ರ ಸರ್ಕಾರ ಎಚ್ಚರಿಸಿದೆ.
ವರದಿಯ ಪ್ರಕಾರ, ಭಾರತದ ಶೇ.66ರಷ್ಟು ವಯಸ್ಕರು ಒಂದಲ್ಲ ಒಂದು ರೀತಿಯಲ್ಲಿ ಈ ಡೇಟಿಂಗ್/ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಬಲೆಗೆ ಬಿದ್ದಿದ್ದಾರೆ. ಸಂತ್ರಸ್ತರು ಸರಾಸರಿ 7,966 ರೂ. ಗಳನ್ನು ಕಳೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ವಂಚನೆಯು ದೇಶಾದ್ಯಂತ ಹರಡಿಕೊಂಡಿದೆ. ಎಲ್ಲೋ ಗೌಪ್ಯವಾಗಿ ದೇಶ ಅಥವಾ ಹೊರದೇಶದಲ್ಲಿ ಇರುವ ವಂಚಕರು ಡೇಟಿಂಗ್ ಮತ್ತು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯಿಸಿಕೊಂಡು, ವಂಚಿಸುತ್ತಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ತಮಗೆ ದುಬಾರಿ ಉಡುಗೊರೆ ಕಳುಹಿಸುತ್ತಿರುವುದಾಗಿ, ಇದಕ್ಕೆ ಕಸ್ಟಮ್ಸ್ ಸುಂಕವೆಂದು ಇಷ್ಟು ಹಣವನ್ನು ಪಾವತಿಸಬೇಕೆಂದು ಹೇಳುತ್ತಾರೆ.
ದುಬಾರಿ ಉಡುಗೊರೆಯ ಆಸೆಗೆ ಬೀಳುವವರು, ತಮ್ಮ “ಸ್ನೇಹಿತ/ಪ್ರೇಮಿ” ಎಂದು ನಂಬಿರುವ ಆನ್‌ಲೈನ್ ವಂಚಕ ಬೀಸುವ ಬಲೆಗೆ ಬೀಳುತ್ತಾರೆ. ವಂಚಕ ಹೇಳಿದಂತೆ ಹಣ ಪಾವತಿಸಿ ಮೋಸ ಹೋಗುತ್ತಾರೆ. ಅಮಾಯಕರೇ ಇವರ ಟಾರ್ಗೆಟ್. ಈ ರೀತಿ “ದುಬಾರಿ ಉಡುಗೊರೆ’ಯ ವಂಚನೆಗೆ ಒಳಗಾಗದಿರಿ ಎಂದು ಕೇಂದ್ರ ಹಣಕಾಸು ಸಚಿವಾಲಯವು ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.