ಪಾಕ್ ಗೆ ಹೋಗುವವರಿಗೆ ಫ್ರೀ ಟಿಕೆಟ್: ಶರಣ್ ಪಂಪ್ ವೆಲ್
2047 ರ ವೇಳೆಗೆ ಇಸ್ಲಾಂ ಆಡಳಿತಕ್ಕೆ ಸಂಚು
Team Udayavani, Feb 5, 2023, 10:14 PM IST
ಮಂಗಳೂರು: ಭಾರತದಲ್ಲಿ 2047 ರ ವೇಳೆಗೆ ಇಸ್ಲಾಂ ಆಡಳಿತಕ್ಕೆ ಸಂಚು ನಡೆಯುತ್ತಿದ್ದು ಅದಕ್ಕೆ ಅವಕಾಶ ನೀಡುವುದಿಲ್ಲ.ಇಸ್ಲಾಂ ಆಡಳಿತ ಬೇಕಾದವರು ಪಾಕಿಸ್ತಾನಕ್ಕೆ ಹೋಗಬಹುದು. ಅವರಿಗೆ ಟಿಕೆಟ್ ವ್ಯವಸ್ಥೆ ಉಚಿತವಾಗಿ ಮಾಡಿಕೊಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ನಗರದ ಕೊಟ್ಟಾರದಲ್ಲಿ ರವಿವಾರ ಜರಗಿದ ಹಿಂದೂ ಸಮಾಜೋತ್ಸವದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಇಸ್ಲಾಂ ಆಡಳಿತ ಆರಂಭವಾದ ದೇಶಗಳಲ್ಲಿ ಅಲ್ಲಿನ ನಾಗರಿಕತೆ, ಸಂಸ್ಕೃತಿ ನಾಶವಾಗಿದೆ. ಅದಕ್ಕೆ ಭಾರತದಲ್ಲಿ ಅವಕಾಶ ನೀಡಲಾಗದು. ಹಿಂದೂ ಧರ್ಮಕ್ಕೆ ಶತ್ರುವಾಗಿರುವ ಜಾತಿ ವ್ಯವಸ್ಥೆಯಿಂದ ಹಿಂದೂಗಳು ಹೊರಬರಬೇಕು. ರಾಷ್ಟ್ರಕ್ಕಾಗಿ ಪೂರ್ವಜರ ಹೋರಾಟ, ಬಲಿದಾನದಿಂದ ಸ್ಪೂರ್ತಿ ಪಡೆಯಬೇಕು. ಇನ್ನೊಮ್ಮೆ ಭಾರತ ವಿಭಜಿಸುವ ಷಡ್ಯಂತ್ರ ನಡೆಯುತ್ತಿದ್ದು ಅದನ್ನು ಹಿಮ್ಮೆಟ್ಟಿಸಬೇಕು. ಲವ್ ಜಿಹಾದ್, ಇಸ್ಲಾಂ ಆಡಳಿತ , ಸುರಕ್ಷತೆಗೆ ಆತಂಕ ಮೊದಲಾದ ಸವಾಲುಗಳನ್ಮು ಎದುರಿಸಬೇಕಾಗಿದೆ ಎಂದವರು ಹೇಳಿದರು.
ಹೇಳಿಕೆಗೆ ಬದ್ದ
ಇತ್ತೀಚೆಗೆ ಉಳ್ಳಾಲದಲ್ಲಿ ಶೌರ್ಯ ದಿನ ಕಾರ್ಯಕ್ರಮದಲ್ಲಿ ತಾನು ನೀಡಿದ್ದ ಹೇಳಿಕೆ ಸಮರ್ಥಿಸಿಕೊಂಡ ಶರಣ್, ಹಿಂದೂ ಅಮಾಯಕರ ಹತ್ಯೆಯಾದಾಗ ಯಾರು ಕೂಡ ದನಿ ಎತ್ತಲಿಲ್ಲ. ಹಿಂದೂಗಳಲ್ಲಿಯೀ ಆತ್ಮಸ್ಥೈರ್ಯ ಮೂಡಿಸಬೇಕೆಂಬುದು ನನ್ನ ಉದ್ದೇಶ ಎಂದರು.
ಲವ್ ಜಿಹಾದ್ ಬಗ್ಗೆ ಸಂಸದ ನಳಿನ್ ಹೇಳಿಕೆಯನ್ಮು ಕೂಡ ಶರಣ್ ಸಮರ್ಥಿಸಿಕೊಂಡಿದ್ದು ಅಭಿವೃದ್ದಿ ಕೆಲಸಗಳ ಜತೆಗೆ ಹಿಂದೂಗಳ ಸುರಕ್ಷತೆಯೂ ಮುಖ್ಯ ಎಂದು ಹೇಳಿದರು.
ಗರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮಾತನಾಡಿ, ಹಿಂದೂ ಸಮಾಜ ಎಚ್ಚರವಾಗಬೇಕಾದ ಕಾಲ ಇದು. ಹಿಂದೂಗಳ ತ್ಯಾಗದಿಂದ ಇಲ್ಲಿಗೆ ಎಲ್ಲರೂ ಬರಲು,ಇರಲು ಅವಕಾಶವಾಗಿದೆ. ಶರಣ್ ಅವರನ್ನು ಗಡಿಪಾರುಮಾಡಬೇಕೆಂದು ಹೇಳುವವರನ್ನೇ ಗಡಿಪಾರು ಮಾಡಬೇಕು. ಶರಣ್ ಅವರಿಗೆ ಭಯೋತ್ಪಾದಕರ ಸಂಪರ್ಕವಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.