ಫ್ರೆಂಚ್ ಓಪನ್ ಟೆನಿಸ್: ಬಾರ್ಟಿಗೆ ಕಠಿನ ಗೆಲುವು
Team Udayavani, Jun 2, 2021, 12:03 AM IST
ಪ್ಯಾರಿಸ್: ಅಗ್ರ ಶ್ರೇಯಾಂಕದ ಆಸ್ಟ್ರೇಲಿಯನ್ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಮೊದಲ ಸುತ್ತಿನಲ್ಲಿ ಕಠಿನ ಗೆಲುವು ಸಾಧಿಸಿ ಫ್ರೆಂಚ್ ಓಪನ್‌ನಲ್ಲಿ ಸಾಮಾನ್ಯ ಆರಂಭ ಕಂಡುಕೊಂಡಿದ್ದಾರೆ. ಅಮೆರಿಕದ ಬರ್ನಾರ್ಡ ಪೆರಾ ವಿರುದ್ಧ ಅವರು 3 ಸೆಟ್‌ಗಳ ಹೋರಾಟ ನಡೆಸಿ 6-4, 3-6, 6-2 ಅಂತರದ ಮೇಲುಗೈ ಸಾಧಿಸಿದರು.
2019ರಲ್ಲಿ ಪ್ರಶಸ್ತಿ ಎತ್ತಿದ ಬಳಿಕ ಆ್ಯಶ್ಲಿ ಬಾರ್ಟಿ ಫ್ರೆಂಚ್ ಓಪನ್‌ನಲ್ಲಿ ಕಣಕ್ಕಿಳಿದದ್ದು ಇದೇ ಮೊದಲು.
ಎಲಿನಾ ಸ್ವಿಟೋಲಿನಾ, ಮರಿಯಾ ಸಕ್ಕರಿ ಕೂಡ ಮೊದಲ ಸುತ್ತಿನಲ್ಲಿ ಗೆಲುವು ಕಂಡಿದ್ದಾರೆ. ಸೋಮವಾರ ರಾತ್ರಿಯ ಮುಖಾಮುಖೀಯಲ್ಲಿ ಸೆರೆನಾ ವಿಲಿಯಮ್ಸ್ ಕೂಡ ಜಯದ ಆರಂಭ ಪಡೆದರು.
ರುಬ್ಲೇವ್ ಔಟ್
ರಶ್ಯದ ಆಟಗಾರ, 7ನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೇವ್ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದು ಮಂಗಳವಾರದ ಅಚ್ಚರಿಯ ಫಲಿತಾಂಶ ಎನಿಸಿತು. ಜರ್ಮನಿಯ ಜಾನ್ ಲೆನಾರ್ಡ್ ಸ್ಟ್ರಫ್ 6-3, 7-6 (8-6), 4-6, 3-6, 6-4ರಿಂದ ರುಬ್ಲೇವ್‌ಗೆ ಸೋಲುಣಿಸಿ ದೊಡ್ಡ ಬೇಟೆಯಾಡಿದರು.
ಇದನ್ನೂ ಓದಿ :ಶಫಾಲಿ ಆಯ್ಕೆಯಿಂದ ತಂಡಕ್ಕೆ ಲಾಭ: ನಾಯಕಿ ಮಿಥಾಲಿ ರಾಜ್
ರೋಹನ್ ಜೋಡಿ ಗೆಲುವಿನ ಆರಂಭ
ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಗೆಲುವಿನ ಆರಂಭ ಪಡೆದಿದ್ದಾರೆ. ಕ್ರೊವೇಶಿಯಾದ ಜತೆಗಾರ ಫ್ರಾಂಕೊ ಸ್ಕಾಗರ್ ಅವರೊಡಗೂಡಿ ಆಡಲಿಳಿದಿರುವ ಬೋಪಣ್ಣ, ಮಂಗಳವಾರದ ಮೊದಲ ಸುತ್ತಿನ ಮುಖಾಮುಖೀಯಲ್ಲಿ ನಿಕೋಲಸ್ ಬಸಿಲಶ್ವಿಲಿ (ಜಾರ್ಜಿಯಾ)-ಆ್ಯಂಡ್ರೆ ಬಿಗೆಮನ್ (ಜರ್ಮನಿ) ವಿರುದ್ಧ 6-4, 6-2 ನೇರ ಸೆಟ್‌ಗಳ ಜಯ ಸಾಧಿಸಿದರು. ಭಾರತದ ಮತ್ತೋರ್ವ ಡಬಲ್ಸ್ ಆಟಗಾರ ದಿವಿಜ್ ಶರಣ್ ಬುಧವಾರ ಕಣಕ್ಕಿಳಿಯಲಿದ್ದಾರೆ. ಆರ್ಜೆಂಟೀನಾದ ಫೆಡ್ರಿಕೊ ಡೆಲ್ಬೊನಿಸ್ ಇವರ ಜತೆಗಾರ. ಇವರ ಮೊದಲ ಸುತ್ತಿನ ಎದುರಾಳಿ ಮ್ಯಾಟ್ ರೇಡಿ ಮತ್ತು ಅಲೆಕ್ಸ್ ಮಿನೌರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.