ಕೋವಿಡ್-19 ವಿರುದ್ಧ ಹೋರಾಟಕ್ಕೆ ತಂತ್ರಜ್ಞಾನದ ಬಲ
ಕರ್ನಾಟಕ ಮೂಲದ ಉದ್ಯಮಿ ಅನ್ವೇಷಿಸಿರುವ ಗೂಡು ಒಲೆ ಈಗ ಜಗತ್ಪ್ರಸಿದ್ಧ; ಗೂಡುಒಲೆ ಬಳಸಿ ಮೆಚ್ಚುಗೆ ವ್ಯಕ್ತಪಡಿಸಿದ ಫ್ರಾನ್ಸ್ ಪ್ರಧಾನಿ
Team Udayavani, Jun 2, 2020, 6:25 PM IST
ಕೋವಿಡ್-19ದೊಂದಿಗೆ ಬದುಕುವುದನ್ನು ಕಲಿತ ನಮಗೆ ಎಲ್ಲ ನಡೆಗಳಲ್ಲಿ ನಾವು ಮುಂಜಾಗ್ರತೆ ವಹಿಸಲು ಮುಂದಾಗಿದ್ದೇವೆ. ಮುಖಕ್ಕೆ ಮಾಸ್ಕ್ ಇಲ್ಲದೇ ಹೊರಗಡೆ ಬರುವುದಿಲ್ಲ, ಸ್ಯಾನಿಟೈಸರ್ ಹಚ್ಚದೇ ಏನೂ ಸ್ಪರ್ಶಿಸುವುದಿಲ್ಲ, ಎಲ್ಲಿಯೂ ಗುಂಪುಗೂಡುವುದಿಲ್ಲ. ಆತ್ಮೀಯರನ್ನು ದೂರದಿಂದಲೇ ಮಾತನಾಡಿಸಿ, ಕುಶಲ ಕ್ಷೇಮ ವಿಚಾರಿಸುತ್ತೇವೆ. ಇದು ಸದ್ಯದ ಬದುಕಿನ ಭಾಗವಾಗಿದೆ.
ಕೋವಿಡ್-19 ದಿನಗಳ ಮುಂಜಾಗ್ರತೆ ಮತ್ತು ಆರೋಗ್ಯ ದೃಷ್ಟಿಯಿಂದ ಹಲವಾರು ಉತ್ಪನ್ನಗಳು ಪರಿಚಯವಾದವು. ಇದು ಕೋವಿಡ್-19 ವಿರುದ್ಧ ಒಂದು ಹೊಸ ಮಾರುಕಟ್ಟೆ ಆರಂಭಕ್ಕೆ ಕಾರಣವಾಯಿತು. ಇದರಲ್ಲಿ ಕರ್ನಾಟಕದ ಓರ್ವ ಸ್ಟಾರ್ಟಾಪ್ ಉದ್ಯಮಿ ಆರಂಭಿಸಿದ ಗೂಡುಒಲೆಯೊಂದು ಈಗ ಜಗತ್‌ಪ್ರಸಿದ್ಧವಾಗಿದೆ. ಅಲ್ಲದೇ ಕೊರೊನಾ ವಿರುದ್ಧ ಹೋರಾಟಕ್ಕೆ ಇದು ಯಂತ್ರ ಪ್ರೇರಿತ ಕೋವಿಡ್-19 ವಾರಿಯರ್ಸ್ ಆಗಿದೇ ಎಂದು ಹೇಳಬಹುದು.
ಯಾವುದು ಅದು?
ಇಂಡಿಯಾದ ನ್ಯಾನೊ ಟೆಕ್ನಾಲಜಿ ಸ್ಟಾರ್ಟಾಪ್ ಕಂಪೆನಿಯೊಂದು “ಕೊರೊನಾಒವೆನ್’ ಎಂಬ ಗೂಡು ಒಲೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕೋವಿಡ್-19 ವೈರಸ್‌ನಿಂದ ನಮಗೆ ಹರಡದಂತೆ ಸುಕ್ಷರತೆಯಿಂದಿರಲೂ ಇದು ಸಹಾಯಕ.
ಕರ್ನಾಟಕ ಉದ್ಯಮಿಯ ಅನ್ವೇಷಣೆ
ಕರ್ನಾಟಕದ ಮೂಲದ ಉದ್ಯಮಿಯಾಗಿರುವ ಅಕ್ಷಯ್ ಎಂಬುವವರು ಈ ಗೂಡುಒಲೆ ಯಂತ್ರವನ್ನು ಅನ್ವೇಷಿಸಿದ್ದಾರೆ.
ಕಾರ್ಯನಿರ್ವಹಣೆ ಹೇಗೆ?
ಅಕ್ಷಯ್ ಅವರು ಕೊರೊನಾ ಗೂಡುಒಲೆಯನ್ನು ಅಲ್ಟ್ರಾವೈಲೆಟ್ ಜೆರ್ಮಿಸಿಡಲ್ ಇರಿಟೇಶನ್ (ನೇರಳಾತೀತ ರೋಗಾಣು ವಿಕಿರಣ) ಎಂಬ ತಂತ್ರಜ್ಞಾನವನ್ನು ಬಳಸಿ ಆರಂಭಿಸಿದ್ದಾರೆ. ನಾವು ಹೊರಗಡೆಯ ಅಂಗಡಿ, ಮಾಲ್ ಅಥವಾ ಸಂತೆಗಳಿಂದ ತರಕಾರಿ, ಸಾಮಾನುಗಳನ್ನು ತಂದರೆ ಈ ಗೂಡು ಒಲೆಯಲ್ಲಿ 10 ನಿಮಿಷ ಇಟ್ಟರೆ ಸಾಕು,ಆಗ ಅದು ಈ ಯುಜಿಐ ಎಂಬ ತಂತ್ರಜ್ಞಾನವೂ ಕೋವಿಡ್-19 ವೈರಸ್ ಇದ್ದರೆ ಅದನ್ನು ನಿವಾರಿಸಿ, ಶುದ್ಧೀಕರಿಸುತ್ತದೆ.
ಈ ಗೂಡುಒಲೆಯನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದ್ದು ಸಂಪೂರ್ಣ ಸ್ಯಾನಿಟೈಜಶೇನ್ ಕೊಠಡಿಯಾಗಿದೆ. ಇಲ್ಲಿ ಮಲ್ಟಿ ಫೋಕಲ್ ಯುವಿ ಸಿ ಎಂಬ ವಿಕಿರಣಗಳು ಯಾವುದೇ ಸೋಂಕುಗಳನ್ನು ನಿವಾರಿಸಿ ಶುದ್ಧೀಕರಿಸುತ್ತದೆ.
ವ್ಯಾಪಕ ಬಳಕೆ!
ಕೋವಿಡ್-19 ನಿವಾರಕ ಈ ಗೂಡು ಒಲೆಯೂ ಈಗಾಗಲೇ ದೇಶದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಮನೆ, ಅಂಗಡಿ, ಪೊಲೀಸ್ ಸ್ಟೇಶನ್, ಅಂಚೆ ಕಚೇರಿ, ಆಸ್ಪತ್ರೆಗಳಲ್ಲಿ ಈ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ.
ಸಾಗರದಾಚೆಗೂ ಗೂಡುಒಲೆಯು ಯಶಸ್ಸು!
ಅಕ್ಷಯ್ ಅವರು ಅನ್ವೇಶಿಸಿರುವ ಕೋವಿಡ್-19 ಗೂಡುಒಲೆಯೂ ಇದು ಕೇವಲ ಭಾರತ ಮಾತ್ರವಲ್ಲ ಸಾಗರಾದಾಚೆಗೂ ಕೂಡ ಭರ್ಜರಿಯಾಗಿ ಯಶಸ್ವಿಯಾಗಿದೆ. ಈ ಗೂಡು ಒಲೆಯನ್ನು ಫ್ರಾನ್ಸ್ ಪ್ರಧಾನಿ ಇಮ್ಯಾನ್ಯುವೆಲ್ ಮ್ಯಾಕ್ರಾನ್ ಅವರು ಬಳಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಉತ್ಪನ್ನ ಈಗ ಪ್ರಸಿದ್ಧಿಯಾಗಿದೆ.
-ಶಿವಸ್ಥಾವರ ಮಠ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.