ವಿಸ್ಮಯದಿಂದ ಅರಿವಿನೆಡೆಗೆ


Team Udayavani, Aug 12, 2023, 11:39 PM IST

NEW YORK CITY

ವಿಸ್ಮಯವು ಆಧ್ಯಾತ್ಮಿಕ ಪ್ರಗತಿಯ ಆಧಾರ ವಾಗಿದೆ. ಈ ಸೃಷ್ಟಿಯು ಎಷ್ಟೊಂದು ವಿಸ್ಮಯ ಗಳನ್ನು ಒಳಗೊಂಡಿದೆ ಎಂಬ ಪ್ರಜ್ಞೆಯೇ ನಮ್ಮಲ್ಲಿ ಹೆಚ್ಚು ಅಚ್ಚರಿಯನ್ನುಂಟು ಮಾಡುತ್ತದೆ. ಆದರೆ ನಾವು ಇದರ ಬಗ್ಗೆ ಹೆಚ್ಚು ಗಮನ ಹರಿಸದೇ, ಇದನ್ನು ಬಹಳ ಲಘುವಾಗಿ ಪರಿಗಣಿಸುತ್ತೇವೆ. ಇದರಿಂದಲೇ ಜಡತ್ವವು ಉಂಟಾಗಿ, ನಮ್ಮಲ್ಲಿ ಉತ್ಸಾಹವು ಕಡಿಮೆಯಾಗುತ್ತದೆ.

ಆದರೆ ವಿಸ್ಮಯದ ಭಾವನೆಯು ನಮ್ಮನ್ನು ಜಾಗೃತಗೊಳಿಸುತ್ತದೆ. ನಾವು ಯಾವುದೇ ಆಶ್ಚರ್ಯಕರ ಸಂಗತಿಯನ್ನು ಕಂಡಾಗ ಅದು ನಮ್ಮ ಚೈತನ್ಯವನ್ನು ಎಚ್ಚರಗೊಳಿಸುತ್ತದೆ. ನಮ್ಮ ಚೈತನ್ಯವು ಎಚ್ಚರಗೊಂಡಾಗ, ಈ ಸೃಷ್ಟಿಯು ಹಲವು ವಿಸ್ಮಯಗಳಿಂದ ತುಂಬಿರುವುದು ಗೋಚರವಾಗುತ್ತದೆ. ಈ ಇಡೀ ಸೃಷ್ಟಿಯೇ ಒಂದು ಬೆರಗು, ಒಂದು ವಿಸ್ಮಯ; ಏಕೆಂದರೆ ಇದರಲ್ಲಿರುವ ಎಲ್ಲವೂ ಒಂದೇ ಚೈತನ್ಯದಿಂದ ಮಾಡಲ್ಪಟ್ಟಿದೆ.

ಯಾವ ಚೇತನವು ದೀಪದಲ್ಲಿ ಜ್ಯೋತಿಯಾಗಿ ಬೆಳಗುತ್ತದೆಯೋ, ಅದೇ ಚೇತನವು ನಮ್ಮ ದೇಹದಲ್ಲಿ ಪ್ರಾಣವಾಗಿ ಸಂಚರಿಸುತ್ತಿದೆ. ಈ ಎರಡೂ ಚೈತನ್ಯದಲ್ಲಿ ವ್ಯತ್ಯಾಸವೇನಿದೆ? ದೀಪದಲ್ಲಿನ ಜ್ಯೋತಿಗೆ ಬೆಳಗಲು ಆಮ್ಲಜನಕದ ಅಗತ್ಯವಿರುವಂತೆ, ಪ್ರಾಣವು ಚೈತನ್ಯದ ಮೇಲೆಯೇ ಅವಲಂಬಿತವಾಗಿದೆ. ನಿಮ್ಮನ್ನು ಒಂದು ಗಾಜಿನ ಪಂಜರದಲ್ಲಿ ಬಂಧಿಸಿಟ್ಟರೆ, ನಿಮ್ಮಲ್ಲಿರುವ ಪ್ರಾಣವು ಅಂತ್ಯವಾಗುತ್ತದೆ. ಅಂತೆಯೇ ದೀಪದ ಮೇಲೆ ಒಂದು ಗಾಜನ್ನು ಮುಚ್ಚಿದರೆ, ಅದರಲ್ಲಿ ಆಮ್ಲಜನಕ ಇರುವವರೆಗೆ ಅಷ್ಟೇ ಅದು ಉರಿಯುತ್ತದೆ. ಹಾಗಾಗಿ ಇವೆರಡರ ಹಿಂದಿರುವ ಚೇತನ ಒಂದೇ.

ನಮ್ಮ ಮೆದುಳು ಪ್ರಾಯಶಃ ಕೆಲವು ಭಾಷೆಗಳನ್ನು ಕಲಿಯುವಷ್ಟು ಸಾಮರ್ಥ್ಯವನ್ನು ಹೊಂದಿರಬಹುದು. ಆದರೆ ನಾವು ಸೃಷ್ಟಿಯ ಎಲ್ಲ ಜ್ಞಾನ ಮತ್ತು ತಿಳುವಳಿಕೆಯನ್ನು ಈ ಪುಟ್ಟ ಮೆದುಳಿನಲ್ಲಿ ಸೆರೆಹಿಡಿಯಬಹುದು ಎಂದು ಭಾವಿ ಸುತ್ತೇವೆ. ಎಲ್ಲವನ್ನೂ ತರ್ಕ ಬದ್ಧವಾಗಿ ಯೋಚಿಸಿ ಅರ್ಥ ಮಾಡಿಕೊಳ್ಳಬಹುದು ಎಂದು ಕೊಳ್ಳುತ್ತೇವೆ. ಆದರೆ “ನನಗೆ ಎಲ್ಲವೂ ತಿಳಿದಿದೆ’ ಎಂಬ ಭಾವನೆಯೇ ನಮ್ಮನ್ನು ಮಂದಗೊಳಿಸುತ್ತದೆ, ಅದು ನಮ್ಮನ್ನು ಬಾವಿಯೊಳಗಿನ ಕಪ್ಪೆಯಂತೆ ಮಾಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ “ನನಗೆ ಗೊತ್ತಿಲ್ಲ’ ಎಂಬ ಭಾವನೆಯು ನಮ್ಮಲ್ಲಿ ಅರಿವನ್ನು ಹೆಚ್ಚಿಸುತ್ತದೆ. ಯಾವುದನ್ನಾದರೂ ತಿಳಿದು ಕೊಳ್ಳಲು, ಮೊದಲು “ನನಗೆ ಗೊತ್ತಿಲ್ಲ” ಎಂಬುದನ್ನು ಒಪ್ಪಿಕೊಳ್ಳುವುದು ಬಹಳ ಅವಶ್ಯವಾಗುತ್ತದೆ. “ನನಗೆ ಗೊತ್ತಿಲ್ಲ’ ಎಂಬುದರ ಅರಿವು ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಈ ಮಾರ್ಗದಲ್ಲಿ ಪ್ರಗತಿಯನ್ನು ಹೊಂದಲು ಅನುವಾಗಿಸುತ್ತದೆ.

ಸೃಷ್ಟಿಯು ಕಾಲಕಾಲಕ್ಕೆ ಇಂತಹ ಅವಕಾಶಗಳನ್ನು ಒದಗಿಸುತ್ತಿರುತ್ತದೆ. ನಿಮಗೆ ನಿಮ್ಮ ಬಗ್ಗೆಯೇ ಹಾಗೂ ಸೃಷ್ಟಿಯ ಬಗ್ಗೆ ಆಶ್ಚರ್ಯವನ್ನುಂಟು ಮಾಡುವಂತಹ ಹಲವು ಸಂಗತಿಗಳನ್ನು ಅದು ಬಹಿರಂಗಪಡಿಸುತ್ತಿರುತ್ತದೆ. ಈ ಸನ್ನಿವೇಶಗಳಲ್ಲಿ ನಿಮಗೆ – ಜೀವನ ಎಂದರೇನು? ಚೇತನ ಎಂದರೇನು? ಬ್ರಹ್ಮಾಂಡ ಎಂದರೇನು? ನಾನು ಯಾರು? ಎಂಬ ಪ್ರಶ್ನೆಗಳಿಂದ ವಿಸ್ಮಯಗೊಳ್ಳುವ ಅವಕಾಶವನ್ನು ಪ್ರಕೃತಿಯು ಕಲ್ಪಿಸುತ್ತದೆ. ಈ ಹಂತಕ್ಕೆ ನೀವು ತಲುಪಿದ್ದೀರೆಂದರೆ ನೀವು ತುಂಬಾ ಅದೃಷ್ಟವಂತರು. ಇದು ದೈವವನ್ನು ಅರಿಯುವ ಹಾಗೂ ಆಧ್ಯಾತ್ಮ ಮಾರ್ಗದ ಆರಂಭ.

ವಿಸ್ಮಯವು ಯೋಗಕ್ಕೆ ಭೂಮಿಕೆಯಾಗಿದೆ. ಯೋಗವೆಂದರೆ ಚೈತನ್ಯದ ಜತೆ ಒಂದಾಗುವುದು, ಆಗ ಎಲ್ಲವೂ ನಿಮಗೆ ವಿಸ್ಮಯವಾಗಿ ಕಾಣುತ್ತದೆ. ಯಾವುದೇ ಮನುಷ್ಯನನ್ನು ನೋಡಿ, ಹೇಗೆ ಅವರು ತಮ್ಮದೇ ಆದ ಮನಸ್ಸನ್ನು ಹೊಂದಿದ್ದಾರೆ, ಅವರು ತಮ್ಮ ಕಣ್ಣುಗಳ ಮೂಲಕ ನೋಡುತ್ತಾರೆ, ಬಾಯಿಯ ಮೂಲಕ ಮಾತ ನಾಡುತ್ತಾರೆ, ಕೆಲವೊಮ್ಮೆ ನಿಮಗೆ ಪ್ರತಿಕ್ರಿಯಿ ಸುತ್ತಾರೆ ಹಾಗೂ ಕೆಲವೊಮ್ಮೆ ಪ್ರತಿಕ್ರಿಯಿಸುವುದಿಲ್ಲ. ಇದೆಲ್ಲವೂ ಅಚ್ಚರಿಗೊಳ್ಳುವ ಸಂಗತಿಗಳಾಗಿಯೇ ಕಾಣುತ್ತದೆ. ನಾವೆಲ್ಲರೂ ಚೈತನ್ಯದ ಸಾಗರದಲ್ಲಿ ತೇಲುತ್ತಿದ್ದೇವೆ. ಸೂಕ್ಷ್ಮದಿಂದ ಸ್ಥೂಲದವರೆಗೆ, ಎಲ್ಲವೂ ಚೈತನ್ಯದ ಸಾಗರದಲ್ಲಿಯೇ ಇವೆ. ವರ್ತಮಾನ, ಭೂತ, ಭವಿಷ್ಯ, ಎಂಬ ಎಲ್ಲಾ ಕಾಲದ ಮಾಪನಗಳೂ ಸಹ ಚೇತನದ ಪರಿಧಿಯಲ್ಲಿಯೇ ಇವೆ. ಚೇತನವು, ಕಾಲ ಮತ್ತು ದೇಶಗಳೆರಡನ್ನೂ ಮೀರಿದೆ ಹಾಗೂ ಅದು ಒಂದು ಸ್ಪಂದನವಾಗಿದೆ.

ಯಾವಾಗಲಾದರೂ ನಿಮ್ಮಲ್ಲಿ ಆಶ್ಚರ್ಯ ಅಥವಾ ವಿಸ್ಮಯ ಉಂಟಾದರೆ, ಒಂದು ಮುಗುಳ್ನಗೆಯೊಂದಿಗೆ ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳಿ. ಆಗ ಯಾವುದೇ ಪ್ರಯತ್ನವಿಲ್ಲದೇ ಧ್ಯಾನಸ್ಥರಾಗುತ್ತೀರಿ.

 ಶ್ರೀ ರವಿ ಶಂಕರ್‌ ಗುರೂಜಿ

 

ಟಾಪ್ ನ್ಯೂಸ್

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

4(1)

Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್‌ ಹೊಂಡಗಳು!

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.