Car crash: ಇನ್ನು ನಮ್ಮಲ್ಲಿಯೇ ಕಾರ್ ಕ್ರ್ಯಾಶ್ ಟೆಸ್ಟ್- ಅ.1ರಿಂದ ನೂತನ ವ್ಯವಸ್ಥೆ ಜಾರಿ
Team Udayavani, Aug 22, 2023, 11:35 PM IST
ಹೊಸದಿಲ್ಲಿ: ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತ ಹೊಸ ಮೈಲಿಗಲ್ಲು ಸಾಧಿಸಿದೆ. ಕಾರುಗಳ ಸುರಕ್ಷತೆಯನ್ನು ಅಳೆಯುವ ಸ್ವಂತ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ(ಎನ್ಸಿಎಪಿ)ಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಚಾಲನೆ ನೀಡಿದ್ದಾರೆ. ಈ ಮೂಲಕ ಈ ಸೌಲಭ್ಯ ಹೊಂದಿರುವ ವಿಶ್ವದ ಐದನೇ ರಾಷ್ಟ್ರವಾಗಿ ಭಾರತ ಹೊಮ್ಮಿದೆ. ಈಗಾಗಲೇ ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಈ ವ್ಯವಸ್ಥೆ ಇದೆ.
ಬಿಎನ್ಸಿಎಪಿ ರೇಟಿಂಗ್: ಭಾರತದಲ್ಲಿ ಆರಂಭಿಸಿರುವ ಎನ್ಸಿಎಪಿಗೆ ಭಾರತ್ ನ್ಯೂ ಕಾರ್ ಅಸೆಸೆ¾ಂಟ್ ಪ್ರೋಗ್ರಾಂ(ಬಿಎನ್ಸಿಎಪಿ) ಎಂದು ನಾಮಕರಣ ಮಾಡಲಾಗಿದೆ. ಅ.1ರಿಂದ ಕಾರ್ಯಚಟುವಟಿಕೆ ಆರಂಭವಾಗಲಿದೆ. ವಾಹನದ ಸುರಕ್ಷತೆಯ ಕುರಿತು ಇದು ರೇಟಿಂಗ್ ನೀಡಲಿದೆ.
ಸುರಕ್ಷತೆಯ ಪರೀಕ್ಷೆ
ಇದು ಗರಿಷ್ಠ ಎಂಟು ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಅಥವಾ ಗರಿಷ್ಠ 3.5 ಟನ್ ತೂಕದ ಕಾರುಗಳ ಸುರಕ್ಷತೆಯ ಸಾಮರ್ಥ್ಯವನ್ನು ಅಳೆಯಲಿದೆ. ಜಪಾನ್, ಅಮೆರಿಕದಂತಹ ಗುಣಮಟ್ಟದ ಶ್ರೇಣಿಯಲ್ಲಿಯೇ ಭಾರತದ ರಸ್ತೆ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಬಿಎನ್ಸಿಎಪಿ ಜಾರಿಗೆ ತರಲಾಗಿದೆ.
ಹೇಗೆ ಮಾಪನ?
ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮುನ್ನ ಕಾರಿನ ಪ್ರಂಟಲ್ ಇಂಪ್ಯಾಕ್ಟ್ ಟೆಸ್ಟ್, ಸೈಡ್ ಇಂಪ್ಯಾಕ್ಟ್ ಟೆಸ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್ ಟೆಸ್ಟ್ ನಡೆಸಲಾಗುತ್ತದೆ. ಅಂದರೆ ಕಾರಿನ ಮುಂಭಾಗ, ಬದಿ ಮತ್ತು ಹಿಂಭಾಗ ಢಿಕ್ಕಿ ಹೊಡೆಸಿ, ಪರೀಕ್ಷೆ ನಡೆಸಲಾಗುತ್ತದೆ. ಅನಂತರ ದಕ್ಷತೆ ಆಧಾರದ ಮೇಲೆ ರೇಟಿಂಗ್ ನೀಡಲಾಗುತ್ತದೆ. ಗರಿಷ್ಠ 5 ಸ್ಟಾರ್ಗಳವರೆಗೆ ಬಿಎನ್ಸಿಎಪಿ ರೇಟಿಂಗ್ ನೀಡಲಿದೆ. ಈ ಸುರಕ್ಷತಾ ರೇಟಿಂಗ್ ಗಮನಿಸಿ ಗ್ರಾಹಕರು ಕಾರುಗಳನ್ನು ಖರೀದಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.